>> Monday, April 12, 2010

ಸಾಹಿತ್ಯ ಸಾಂಗತ್ಯದ ಹೊಸ ಬ್ಲಾಗ್ ಗೆ ಪ್ರೀತಿಯ ಸ್ವಾಗತ
ಮೊದಲ ಪತ್ರ
ಕಳೆದೆರಡು ತಿಂಗಳಿನ ಬ್ಲಾಗಿನ ಒಡನಾಟ ನನ್ನೊಳಗೆ ಅಡಗಿದ್ದ ಬರಹಗಾರನನ್ನು ಬಡಿದೆಚ್ಚರಿಸಿದೆ.
ಬ್ಲಾಗ್ ಜಗತ್ತಿಗೆ ಋಣಿಯಾಗಿದ್ದೇನೆ. 'ಸಿದ್ದುಕಾಲ'ದ ಮೂಲಕ ಒಂದು ಸಾವಿರ ಓದುಗರನ್ನು ತಲುಪಿದ್ದು, ಹೊಸ ಸಾಹಿತ್ಯ ಬ್ಲಾಗ್ 'ಸಿದ್ದುಲೋಕ'ಕ್ಕೆ ಚಾಲನೆ ನೀಡಿದೆ.
ಸಿದ್ದು ಲೋಕ ಪರಿಪೂರ್ಣ ಸಾಹಿತ್ಯಕ್ಕೆ ಮೀಸಲಾಗಿರುತ್ತದೆ.
ನಾನು ಬರೆದಿರುವ ಹಾಗೂ ಬರೆಯುವ ಕತೆ, ಕವಿತೆ,ಲೇಖನ, ವಿಮರ್ಶೆಗಳನ್ನು ಇಲ್ಲಿ ದಾಖಲಿಸುತ್ತೇನೆ.
ಇದೊಂದು ಶುದ್ಧ ಸಾಹಿತ್ಯ ಸಾಂಗತ್ಯ.
ಸಿದ್ದು ಕಾಲದ ಮೂಲಕ ಭೇಟಿಯಾದ ಎಲ್ಲ ಹೊರನಾಡ ಕನ್ನಡಿಗರಿಗೆ ಕೃತಜ್ಞನಾಗಿದ್ದೇನೆ. ಅನಿವಾಸಿ ಕನ್ನಡಿಗರ ಭಾಷಾಪ್ರೇಮ ಎಂತಹದು ಎಂಬುದನ್ನು ಇಂಗ್ಲೆಂಡ್ ಪ್ರವಾಸದಲ್ಲಿ ಅನುಭವಿಸಿದ್ದೇನೆ.
Internet ಮೂಲಕ ದಕ್ಕುವ ಗಟ್ಟಿಬರಹವನ್ನು ಹೊರದೇಶಗಳಲ್ಲಿ ವಾಸಿಸುವ ಕನ್ನಡಿಗರು ಅತ್ಯಂತ ಪ್ರೀತಿಯಿಂದ ಸ್ವೀಕರಿಸುತ್ತಾರೆ ಎಂಬ ಸಂಭ್ರಮ ನನ್ನದು.
ಮನದ ಮೂಲೆಯಲ್ಲಿ ಅಡಗಿ ಕುಳಿತ ಕ್ರೀಯಾಶೀಲ ಮನಸ್ಸು ನಿಮ್ಮೆದುರು ತೆರೆದುಕೊಳ್ಳುತ್ತದೆ. ದಯವಿಟ್ಟು ಸಲಹೆ ನೀಡಿ ಬೆಳೆಸಿರಿ.
ಮನದಾಳದ ಪ್ರಾಮಾಣಿಕ ಅಭಿವ್ಯಕ್ತಿಯನ್ನು ಆಪ್ತವಾಗಿ ನಿವೇದಿಸಲು ಬ್ಲಾಗ್ ನೆರವಾಗಿದೆ. ಅಷ್ಟೇ ಪ್ರೀತಿಯಿಂದ ಆಲಿಸುವ ಪ್ರೀತಿಯ ಮನಸುಗಳು ನನ್ನೊಂದಿಗಿರುವುದರಿಂದ ನಾನು ಬರೆಯುತ್ತಲೇ ಇರುತ್ತೇನೆ. ಬತ್ತದ ಜೀವ ಸೆಲೆಯಂತೆ............

0 comments: