ಗಾನ ವಿದ್ಯಾ ಬಡಿ ಕಠಿಣ ಹೈ

>> Saturday, September 25, 2010


ಬದಕು ನೀಡಿದ ಕಠಿಣತೆಯ
ಸವಾಲಾಗಿ ಸ್ವೀಕರಿಸಿ ಬೆನ್ನು
ಹತ್ತಿದ ನಾದಗಳ ಹಿಡಿದಿಟ್ಟು
ಹದವಾಗಿ ಮುದವಾಗಿ
ರಾಗಗಳ ಆಲಾಪಿಸಿ ಜಯಿಸಿದ
ಗಾನ ಗಾರುಡಿಗ
ಒಳಗಣ್ಣ ಬೆಳಕ ಹಿಡಿದು
ಅಂಧರ ಕಣ್ಣಾಗಿ ಹೆಳವರ ಕಾಲಾಗಿ,
ಅನಾಥರ ನಾಥರಾಗಿ ಬಾಳ
ದಯಪಾಲಿಸಿದ ನಡೆದಾಡುವ ದೇವರು.
ಇಷ್ಟ ಲಿಂಗದ ಸಂಗದಲಿ
ಲಿಂಗಾಂಗ ಸಾಮರಸ್ಯದ ಉತ್ತುಂಗಕೆ
ಏರಿದರೂ ಎನಗಿಂತ ಕಿರಿಯರಿಲ್ಲ
ಎಂದು ಹಾಡಿದ ಪುಟ್ಟ'ರಾಜ'.
ಮೈ ತುಂಬಾ ಧ್ಯಾನದ ಕಂಪು
ಕಿವಿ ತುಂಬ ನಾದದ ಇಂಪು
ಬೆರಳಾಟಕೆ ಸಿಕ್ಕ ತಾಳ-ವಾದ್ಯಗಳು
ನಲಿದು ಸಂಭ್ರಮಿಸಿದ ಕ್ಷಣಗಳಲಿ.......
ಈಗ ಮೌ.....ನ. ದಿವ್ಯ ಮೌನ......
ಆ ಮೌನದಲಿ ಮೆರೆಯುವ ಮರೆಯಾಗದ
ಗುಂಗು ಹಿಡಿಸಿರುವ ತರಂಗಗಳು
ನಿಧಾನ ಸುಳಿಯುತ ಅಲೆಯುತಿವೆ.
ನೀ ನಡೆದಾಡಿದ ಹೆಜ್ಜೆ ಗುರುತಿನಲಿ.
ಅಳುವ ಅಂಧರ ಕಣ್ಣೊರೆಸಲು
ಅನಾಥರ ಸಾಕಿ - ಸಲಹಲು ನೀ
ಹುಟ್ಟಿ ಬಾ ಮತ್ತೊಮ್ಮೆ ಎನ್ನಲು
ಬಿಟ್ಟು ಹೋಗಿಲ್ಲ ವಲ್ಲ ಅಜ್ಜ
- ಸಿದ್ದು ಯಾಪಲಪರವಿ

Read more...

ವಿರೇಶ್ವರ ಪುಣ್ಯಾಶ್ರಮ



ಇಲ್ಲಿ ಎಲ್ಲಂದರಲ್ಲಿ ನಾದ
ನಿನಾದಗಳ ಕಂಪು
ಅಂಧರ ಬೆಳಕಲಿ ಅನಾಥರ ಖುಷಿಯಲಿ
ಸಂಭ್ರಮಿಸುವ ತಂಪು.
ಪುಣ್ಯಾಶ್ರಮದ ಪ್ರತಿ ಕಲ್ಲಲಿ
ಸರಿಗಮಗಳ ಸರಪಳಿ.
ಅಂಗುಲಂಗುಲದ ನಡೆಯಲಿ
ಅಂತಕರಣದ ಹೊಳಪು.
ಪಂಚಾಕ್ಷರ ಗವಾಯಿಗಳವರ
ಉಭಯ ಗಾನ ವಿಶಾರದೆ
ಇಲ್ಲಿ ಅಲುಗದೆ ನೆಲೆಯೂರಿ
ತನ್ಮಯಗಳಾಗಿ ಮೈ ಮರೆತು
ನಲಿಯುತ ಸಂಚರಿಸುವ
ಪರಿಯನು ಅರಿಯದವರು ಯಾರು?
ಪುಟ್ಟರಾಜರ ಶ್ರಮದ ಬೆವರ
ಹನಿಯಲೂ ಸೂಸುತಿದೆ ಗಾನ ಸುಗಂಧ
ಸರಿಗಮಗಳ ಜಪದಲಿ.
ಇಲ್ಲೊಮ್ಮೆ ಜಪಿಸಿದರೆ ಮೈ
ಮನಗಳಲಿ ಕಂಪನ.
ಮಲಿನವಾದ ಮನಸನು
ಬದಿಗಿಟ್ಟು ಒಮ್ಮೆ ಕೈಮುಗಿದು
ಒಳಗೆ ಬಾ ನಾದ ಪ್ರಿಯನೆ
ಎಲ್ಲಂದರಲಿ ಬೀಸುವ ಗಾನ
ಗಂಧದ ಕಂಪನು
ನಿನ್ನದಾಗಿಸಲು

Read more...

ಅಂಧ ಆಂಕ್ರಂದನ


ವಿಧಿ ಕಣ್ಣು ಕಟ್ಟಿದಾಗ
ಒಳಗಣ್ಣು ತೆರೆಸಿದ ಕರುಣಾ
ಸಾಗರನೆ.
ಹೆತ್ತೊಡಲ ಬರಸಿಡಿಲಿಗೆ
ಕಾರಣನಾಗಿ
ಬದುಕು ಶೂನ್ಯ
ವಾದಾಗ ಅಸಂಖ್ಯೆ
ಸಂಖ್ಯೆ ಬಳಸಿ ಬಾಳ
ಪಯಣದಿ ಜೀವಯಾನಕೆ
ಭಾವ ತುಂಬಿದ ಗುರುವಿನ
ಗುರುವೆ.
ನಾದ ಲೋಕದೊಳೊಂದು
ಹೊಸ ಲೋಕ ಸೃಷ್ಟಿಸಿ ದಿವ್ಯ
ಬೆಳಕ ತೋರಿ ಅಂಧತ್ವ
ದೂರಾಗಿಸಿದ ಜಗದಾದಿ ಗುರುವೆ.
ನೀನಿಲ್ಲದ ಜಗದ ಶೂನ್ಯವ
ತುಂಬುವ ಶಕ್ತಿ ಕರುಣಿಸು
ದಯಾಮಯಿ ಪ್ರಭುವೆ.
                                            ಸಿದ್ದು ಯಾಪಲಪರವಿ
                                                                    # 123 ಸಾಂಗತ್ಯ ಪ್ರಕಾಶನ ,ಶರಣಾರ್ಥಿ   ವಿಶ್ವೇಶ್ವರಯ್ಯನಗರ
ಕಳಸಾಪುರ ರಸ್ತೆ
ಗದಗ - 582103
9448358040

Read more...

ಮುನ್ನುಡಿ

>> Wednesday, May 19, 2010

ಕಾವ್ಯ ಬಾಯಿಪ್ರಸಾದವಲ್ಲ, ಋಣಾನುಸಂಬಂಧ
ನಾನು ಕನ್ನಡ ವಿಶ್ವವಿದ್ಯಾಲಯದ ಕುಲಸಚಿವನಾಗಿ ಕಾರ್ಯನಿರ್ವಹಿಸುತ್ತಿದ್ದೆ. ಈ ಅವಧಿಯಲ್ಲಿ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಹಲವರು ಸರ್ಕಾರದಿಂದ ನಿಯುಕ್ತರಾದರು. ಅವರ ಪಟ್ಟಿ ಬಂದಾಗ ಪ್ರೊ. ಸಿದ್ದು ಯಾಪಲಪರವಿ ಎಂಬ ಹೆಸರಿತ್ತು. ನೇಮಕಗೊಂಡ ನಂತರ ಮೊದಲ ಸಭೆಗೆ ಕಾರ್ಯಕಾರಿ ಸಮಿತಿಯ ಸದಸ್ಯರು ಬಂದರು. ನಾನು ಕಛೇರಿಯಲ್ಲಿ ಕೂತಿದ್ದೆ. ನನ್ನ ಆಫಿಸಿನೊಳಕ್ಕೆ ಒಬ್ಬ ನಗುಮೊಗದ ದುಂಡನೆಯ ವ್ಯಕ್ತಿ ಬಂದು 'ನಮಸ್ಕಾರ ಸಾರ್, ನಾನು ಸಿದ್ದು ಯಾಪಲಪರವಿ' ಎಂದು ಪರಿಚಯ ಹೇಳಿಕೊಂಡರು. ಅವರ ಮಾತು -ಧ್ವನಿ-ಶೈಲಿ ನನಗೆ ತುಂಬಾ ಆಪ್ತ ಎನಿಸಿತು. ಈತ ಸ್ನೇಹಪರ ಎಂದೆನಿಸಿತು. ಮುಂದೆ ಮೂರು ವರ್ಷಗಳ ಅವಧಿಯವರೆಗೆ ಅವರು ಸದಸ್ಯರಾಗಿ ಕಾರ್ಯ ನಿರ್ವಹಿಸಿದರು. ಅವರು ನನ್ನೊಡನೆ ಹಲವಾರು ದಿನ ಕುಳಿತು ಕವಿತೆ, ಕತೆ, ಸಮಕಾಲೀನ ಕನ್ನಡ ಮನಸ್ಸು, ವೈಚಾರಿಕತೆ - ಇನ್ನು ಮುಂತಾದ ಹಲವಾರು ವಿಷಯಗಳನ್ನು ನನ್ನ ಜೊತೆ ಮಾತನಾಡುತ್ತಿದ್ದರು. ಅವರದು ಸಮಪಾತಳಿಯ ದೃಷ್ಠಿ. ಎಲ್ಲೂ ರೇಜಿಗೆ ಇಲ್ಲ. ತನಗೆ ತಿಳಿದ್ದನ್ನು ಮಾತ್ರ ಹೇಳುತ್ತಿದ್ದರು. ಇಲ್ಲದಿದ್ದರೆ ತಿಳಿದುಕೊಂಡು ಬಂದು ಮಾತನಾಡುತ್ತಿದ್ದರು. ಅವರು ನಾನು ಅನೇಕ ವಿಚಾರಗಳನ್ನು ಮಾತನಾಡಿದ್ದೇನೆ; ಜೊತೆಗೆ ಸಂವಾದ ನಡೆಸಿದ್ದೇವೆ.
ನನಗೂ ಸಿದ್ದು ಯಾಪಲಪರವಿಗೂ ಹೀಗೆ ಸ್ನೇಹ ಬೆಳೆದು ಬಂತು. ನನ್ನ ಬದುಕಿನ ಕಳೆದ ಏಳೆಂಟು ವರ್ಷ ಅವರೊಡನೆ ಹಿತವಾಗಿ ಕಳೆದಿದ್ದೇನೆ. ಅವರ ಸ್ನೇಹದ ಅಮೃತವರ್ಷದಲ್ಲಿ ನಿತಾಂತನಾಗಿ ಕಳೆದಿದ್ದೇನೆ. ಅವರು ಕಳೆದ ಎರಡು ತಿಂಗಳ ಹಿಂದೆ 'ನೆಲದ ಮರೆಯ ನಿಧಾನ' ಸಂಕಲನವನ್ನು ನನ್ನ ಕೈಗಿಟ್ಟು " ಇದಕ್ಕೊಂದು ಮುನ್ನುಡಿ ಬರೆದುಕೊಡಿ" ಎಂದರು. ನನಗೆ ಕವಿತೆಯು ಪ್ರೀತಿಯ ವಿಷಯ; ಅದನ್ನು ಬರೆದ ಕವಿ ನನ್ನ ಪ್ರೀತಿಯ ಸ್ನೇಹಿತ. ಇವೆರಡೂ ನನ್ನ ಮನಸ್ಸನ್ನೂ ಕಟ್ಟಿ ಬೆಳೆಯಿಸಿತು. ಈ ಸಂಕಲನ ಕಳೆದ ಒಂದು ತಿಂಗಳಿನಿಂದ ನನ್ನ ಜತೆ ಎಲ್ಲೆಲ್ಲೂ ಪ್ರಯಾಣ ಮಾಡಿದೆ. ನಾನು ಹೋದ ಕಡೆ ಈ ಕವಿತೆಯ ಕೆಲವು ಸಾಲುಗಳನ್ನು ಕಣ್ಣಾಡಿಸಿದ್ದೇನೆ. ಆಗಾಗ್ಗೆ ಶಿಷ್ಯಮಿತ್ರರಿಗೆ ಇಲ್ಲಿಯ ಕವಿತೆಗಳನ್ನು ಓದಿ ಹೇಳಿದ್ದುಂಟು. ನನಗೆ ಮೆಚ್ಚುಗೆಯಾದ ಕೆಲವು ಕವಿತೆಗಳನ್ನು ಗೆಳೆಯರ ಜೊತೆ ಓದಿ ಸವಿದಿದ್ದೇನೆ. ಕವಿತೆಯನ್ನು ಕೇಳಿದವರೂ ಸವಿದಿದ್ದಾರೆ. ಏನಿದ್ದರೂ ಕವಿತೆ ಕಿವಿಗೆ ಸೇರಿದ್ದು ತಾನೆ? ನವ್ಯ ಕವಿತೆ ಕಣ್ಣಿಗೆ ಸೇರಿದರೆ, ದೇಸಿ ಕವಿತೆ ಕಿವಿಗೆ ಸೇರಿದ್ದು.
ಕವಿತೆಗೂ ಕಿವಿಗೂ ಒಂದು ಬಗೆಯ ಅವಿನಾಭಾವ ಸಂಬಂಧವಿದೆ. ಕೇಶಿರಾಜ 'ಶ್ರೋತ್ರದೊಳ್ ಉದ್ಭಾವಿಪ' ಎಂದು ಹೇಳಿದ್ದಾನೆ. 'ಕಿವಿವೊಕ್ಕಡಂ' ಎಂದು ಪಂಪ ಹೇಳಿದ್ದಾನೆ. 'ಕೇಳಲಕ್ಕುಂ,ಕೇಳ್ದೊಡಂ' ಎಂಬಂಥ ಪೂರ್ವವಾಕ್ಯಗಳು ಅಸಂಖ್ಯವಾಗಿವೆ. 'ಕೇಳುವ ಜಂಗಮ ಜನಾರ್ಧನರು' ಎಂದು ಕುಮಾರವ್ಯಾಸ ಹೇಳುತ್ತಾನೆ. 'ತಿಳಿಯ ಹೇಳುವೆ ಕೃಷ್ಣಕಥೆಯನು' ಎಂದು ಅವನೇ ಹೇಳುತ್ತಾನೆ. ನಮ್ಮ ದಿನನಿತ್ಯದ ವ್ಯವಹಾರ ಜಗತ್ತಿನಲ್ಲಿ ಕಿವಿಯೂ ಭಾಗವಹಿಸುತ್ತದೆ. ಸಾಹಿತ್ಯಕ್ಕೆ ಕಣ್ಣೆಂಬುದು ಗೌಣ; ಆರ್ದ್ರವಾಗುತ್ತದೆ. ಗಣೇಶನ 'ಮೊಗದಗಲದ ಕಿವಿ' ಸಾಂಕೇತಿಕವಾಗಿಯೂ ಇದೆ. ಹೀಗೆ ಕಾವ್ಯ, ಕವನ, ಕವಿತೆ,ಪದ್ಯ ಇವುಗಳಿಗೆಲ್ಲ ಕಿವಿಯೇ ಪ್ರಧಾನ, ಪ್ರಾಧಾನ್ಯ ಹೌದು!
ಪ್ರೊ. ಸಿದದು ಬಿ. ಯಾಪಲಪರವಿ ಅವರ ಕವಿತೆಗಳು ಕಣ್ಣಿಗೆ ಅಥವಾ ಕಣ್ಣಿನ ಓದಿಗೆ ಸಂಬಂಧಿಸಿಲ್ಲ; ಅದು ಕಿವಿಗೆ ಸಂಬಂಧಿಸಿದ್ದು. ಆದ್ದರಿಂದ ಇಲ್ಲಿಯ ಕವಿತೆಗಳನ್ನು ಗಟ್ಟಿಯಾಗಿ ಓದಿಸಿ ಕೇಳಬೇಕು. ನಾವು ಇಲ್ಲಿಯ ಕವಿತೆಗಳ ಮೇಲೆ ಕೇವಲ ಕಣ್ಣಾಡಿಸಿದರೆ ಏನೇನೂ ಸಿಗದೆ ಹೋಗಬಹುದು. ಹಾಗಾಗಿ, ಇದು ಶುದ್ಧ ದೇಸಿ ಕವಿತೆ. ದೇಸಿ ಕವಿತೆಗೆ ನಾದವೂ ಉಂಟು, ಲಯದ ಬಳುಕುಗಳೂ ಉಂಟು. ಪಂಪ 'ದೇಸಿಯೊಳ್ ಪುಗುವುದು' ಎಂದು ಹೇಳುತ್ತಾನಷ್ಟೆ! ಇದು ಬಹು ಮಹತ್ವದ ಮಾತು. ಈ ಮಾತಿನ ಜಾಡನ್ನು ಹಿಡಿದು ನಾವು ನಡೆಯಬೇಕು ಅಷ್ಟೆ. ಈ ಸಂಕಲನದ 'ಆರ್ತನಾದ' ಎಂಬ ಕವಿತೆ ಯಾಪಲಪರವಿಯವರ ಸಂಕಟಕ್ಕೆ ಹಿಡಿದ ಕನ್ನಡಿಯಾಗಿದೆ. ಇದು ಕವಿತೆಯಾಗಿಸುವ ಸಂಕಟವೂ ಹೌದು; ಇದರ ಜೊತೆಗೆ ಕವಿತೆಯ ಆಶಯದ ಹಿಂದಿರುವ ಆತಂಕವೂ ಹೌದು. ಇವೆರಡನ್ನೂ ಒಂದುಗೂಡಿಸುವ - ಆ ಮೂಲಕ ಪರಿಭಾವಿಸುವ - ವಿಫುಲ ಯತ್ನಗಳೂ ನಮ್ಮ ಮುಂದೆ ಈ ಕವಿ ತಂದು ತೋರಿಸುತ್ತಾರೆ. ಕವಿತೆ ಆರಂಭವಾಗುವುದು 'ಮನದ ಬಾಗಿಲು' ಗಳ ರೂಪಕದಿಂದ.
ಎಂದೋ ಮುಚ್ಚಿಹೋಗಿದೆ
ಮನದ ಬಾಗಿಲು
ಚಿಂತೆಯ ಬಿರುಗಾಳಿಗೆ
ಅರಳುವ ಕಲ್ಪನೆಗಳೆಲ್ಲ
ಕರಗಿ ಹೋಗುತಲಿವೆ
ಭಾವಕ ನೆಲೆ ಇಲ್ಲದೆ
ತಳಮಳದ ಜೀವ ಚಡಪಡಿಸುತಿದೆ
ಬಂಧನವ ಬಿಡಿಸಲು
ಚಿಂತೆ, ಭಯ, ಕಾತರಗಳು
ಕೊಚ್ಚಿಹೋಗಬಾರದೇ ಆತ್ಮಾಭಿಮಾನದ
ಸೋಂಕು ತಟ್ಟಲು
ನಿನ್ನಪ್ಪುಗೆ ಕರಗಿಸಲಿ
ಚಿಂತೆಯ ಚಿತೆಯ
ತಟ್ಟಿ,ತಟ್ಟಿ ತೆರೆಸಲಿ ಮುಚ್ಚಿದ ಕದವ
ಬೆಳಗಲಿ ಪ್ರೀತಿ ನಗೆ
ಓಡಿಸಲಿ ಆವರಿಸಿದ ಕತ್ತಲೆ
ಕೊಚ್ಚಿಹೋಗಲಿ ದು:ಖ-ದುಮ್ಮಾನ
ಎಲ್ಲಿರುವೆ ನಲ್ಲೆ?
ಬದುಕಿಸಬಾರದೇ ನನ್ನೀ ನರಳಾಟದಿ (ಆರ್ತನಾದ)
ಈಗ ಲೋಕವು ಆನಂದದ ಸಮುದ್ರದಲ್ಲಿ ತೇಲುತ್ತಿಲ್ಲ. ಅಲ್ಲಿ ಗೋಳಿನ ರೂಪಕಗಳುಂಟು. ಅಲ್ಲಿ ಚಿಂತೆಯ ಬಿರುಗಾಳಿಗಳುಂಟು. ಅಲ್ಲಿ ಅರಳುವ ಕಲ್ಪನೆಗಳಿಲ್ಲ. ಅವೆಲ್ಲವೂ ಕರಗಿಹೋಗಿವೆ. ಇದು ವಾಸ್ತವದ ರೂಪಕ. ಇಂಥ ವಾಸ್ತವವು ಯಾಕೆ ನೆಲೆಯೂರಿತು. ಇಲ್ಲಿ ವ್ಯಕ್ತಿತ್ವಗಳು ನಾಶವಾಗುತ್ತಲಿವೆ. ವ್ಯಕ್ತಿಗಳು ವಿಜೃಂಭಿಸುತ್ತಿದ್ದಾರೆ. ಇಲ್ಲಿ ಆತ್ಮಾಭಿಮಾನಕ್ಕೆ ದಾರಿಗಳಿಲ್ಲ. ಅವು ಸೋಂಕುಗಳಿಂದ ಕೂಡಿವೆ. ಇಂಥ ಸನ್ನಿವೇಶದಲ್ಲಿ ಪ್ರೀತಿಯ ಅಪ್ಪುಗೆ ಬೇಕು. ಚಿಂತೆಯ ಕದ ಅಲ್ಲಿ ತೆರೆಯಬೇಕು. ಆಗ ಅಲ್ಲಿ ಪ್ರೀತಿಯ ನಗೆಯುಕ್ಕಿ ಆವರಿಸಿರುವ ಕತ್ತಲೆ ಓಡುತ್ತದೆ. ಇಡೀ ಕವಿತೆಯ ಆರ್ತನಾದ ವ್ಯಕ್ತಿ ನೆಲೆಯಿಂದ ಸಾಮೂಹಿಕ ನೆಲೆಗೂ, ಅಲ್ಲಿಂದ ವ್ಯಕ್ತಿ ನೆಲೆಗೂ ಸಂಚರಿಸುತ್ತದೆ. ಜೀವನಕ್ಕೆ ಏರುಮುಖದ ಚಲನೆ ಇರುವಂತೆ ಇಳಿಮುಖದ ಚಲನೆಯೂ ಉಂಟು. ಇವೆರಡೂ ಭಿನ್ನವೆಂದು ಕವಿ ಭಾವಿಸುವುದಿಲ್ಲ. ಅವೆರಡೂ ಪರಸ್ಪರ ಒಗ್ಗೂಡುವ ಪ್ರಯತ್ನ ಬೇಕು. ಕತ್ತಲೆಯೊಳಗಿಂದ ಬೆಳಕು ಬರುತ್ತದೆಯಷ್ಟೆ! ಬೆಳಕು ಕತ್ತಲೆಯನ್ನು ನುಂಗುತ್ತದೆ. ಆರ್ತತೆಯಲ್ಲಿಯೂ ನಾದವುಂಟು ಎಂಬ ರೂಪಕೋಕ್ತಿ ವಿಧಾನವು ಕವಿತೆಯ ಪ್ರಧಾನ ಆಶಯವಾಗಿರುವುದು ಗಮನೀಯ.
ಈ ಸಂಕಲನವು ಮುಖ್ಯವಾಗಿ ವ್ಯಕ್ತಿನೆಲೆಯ ಪ್ರೀತಿಮುಖಗಳನ್ನು ಹುಡುಕುತ್ತದೆ. ವ್ಯಕ್ತಿನೆಲೆ ತಿಳಿಯದೆ ಸಾಮೂಹಿಕ ನೆಲೆ ತಿಳಿಯುವುದು ಹೇಗೆ? ಈ ಸಂಕಲನದ ಚಿತ್ತ ಚಿತ್ತಾರ, ನಗ್ನಸತ್ಯ, ನಿನ್ನ ಕಣ್ಣ ಸೆಳೆತದಲಿ, ಸಂಗಾತಿ ಮುಂತಾದ ಕವಿತೆಗಳು ಗಂಡು-ಹೆಣ್ಣಿನ, ಸಖ-ಸಖಿಯರ, ಗೆಳೆಯ-ಗೆಳತಿಯರ ಸಂಬಂಧಗಳ ನಂಟನ್ನು ಹುಡುಕುತ್ತದೆ. ವ್ಯಕ್ತಿನೆಲೆಯ ಪ್ರೀತಿ ಮುಖಗಳಿಗೆ ಸಾರ್ವಜನಿಕ ಮುಖವೂ ಉಂಟು. ಆದರೆ, ಇದು ವ್ಯಕ್ತಿ ನೆಲೆಯ ವಿವಿಧ ಮುಖಗಳನ್ನು ನೋಡಲು ಇಚ್ಛಿಸುತ್ತದೆ. ಎಲ್ಲಿ ಗಂಡು-ಹೆಣ್ಣುಗಳ ಪ್ರೀತಿ ಮುಖಗಳೂ, ವಿರಸದ ಮುಖಗಳೂ ಪರಸ್ಪರ ತೆರೆದು ನಿಲ್ಲುತ್ತವೋ, ಅಲ್ಲಿ ವೈಚಾರಿಕ ಆಕೃತಿಯ ನೆಲೆಗಳು ಬರುತ್ತವೆ. ಈ ಸಂಕಲನದ 'ಸಂಗಾತಿ' ಎಂಬ ಕವಿತೆ ಈ ದೃಷ್ಟಿಯಿಂದ ತೀರಾ ಕುತೂಹಲಕಾರಿ. ಈ ಕವಿತೆಯು ಮೊದಲಿಗೆ ಶಿಶುನಾಳ ಶರೀಫನ ಕವಿತೆಯ ಎರಡು ಸಾಲನ್ನು ಹಾಕಿದೆ. ಅದಾದ ಮೇಲೆ ಕವಿತೆ ಆರಂಭವಾಗುತ್ತದೆ. ಈ ಕವಿತೆಯು ಎರಡು ಘಟಕಗಳನ್ನು ಹೊಂದಿದೆ. ಮೊದಲನೆಯ ಘಟಕ ಭೂತಕಾಲದ ಮುಖ. ಇಲ್ಲಿ ಭೂತಕಾಲವೂ ವರ್ತಮಾನಕ್ಕೆ ತಂದು ನಿಲ್ಲಿಸಿ ದಂತಿದೆ. ಮೊದಲನೆಯ ಘಟಕದ ಕವಿತೆಯ ಸಾಲುಗಳು ಹೀಗಿವೆ:
ತಲೆಯನೆತ್ತಿ ನಡೆಯದಂತೆ ತಿನ್ನುವ ಚಿಂತೆಗಳು
ಹುದುಗಿಕೊಂಡಿವೆ ನನ್ನ ಸಮಸ್ಯಗಳು
ಅರ್ಥರಹಿತ ವ್ಯವಹಾರಿಕ ಬದುಕು ಏನೆಲ್ಲಾ ಮರೆಸಿದೆ
ಚೈತನ್ಯ, ನೆಮ್ಮದಿ ಎಲ್ಲೂ ಸಿಗದೆ ತಬ್ಬಲಿಯಾದಾಗ
ಈ ಕವಿತೆಯ ಸಾಲುಗಳು ವೈಯಕ್ತಿಕ ಮುಖವನ್ನೂ ಹೇಳುತ್ತಿವೆ ಎನಿಸಿದರೂ ಅದು ಸಾರ್ವಜನಿಕವಾಗುವುದು ಅನಿವಾರ್ಯ. ವೈಯಕ್ತಿಕ ಮುಖದಲ್ಲಿ ಚಿಂತೆ-ಸಮಸ್ಯಗಳು ಮುಕ್ಕಿಬಿಡುತ್ತವೆ ನಿಜ. ಆದರೆ, ಚೈತನ್ಯ ನೆಮ್ಮದಿ ಬೇಕು. ಆದರೆ ಚೈತನ್ಯವಿಲ್ಲದೆ ನೆಮ್ಮದಿಗೆ ಅವಕಾಶವಿಲ್ಲ. ಆಗ 'ತಬ್ಬಲಿತನ' ಬಂದು ಮುಸುಕುತ್ತವೆ. ಇಲ್ಲಿರುವ 'ತಬ್ಬಲಿ' ಎಂಬ ರೂಪಕ ಪ್ರೀತಿಯ ಮುಖವೂ ಹೌದು. ತಬ್ಬಲಿತನದ ಚಿತ್ರವೂ ಹೌದು. ಮೊದಲು ತಬ್ಬಲಿತನ ಕಂಡರೂ ಅದರೊಳಗೆ 'ತಬ್ಬಲಿ' ಎಂಬ ಪ್ರೀತಿಪೂರ್ವಕವೂ ಇದೆ. ಇದು ಎರಡನೆಯ ಘಟಕಕ್ಕೆ ಚಂಗನೆ ನೆಗೆಯುತ್ತದೆ.
ನಿನ್ನ ಬಳೆಗಳ ನಾದ
ನಗುವ ತುಟಿ
ಬಳಸಿದ ತೋಳು
ಬಿಸಿ ಅಪ್ಪುಗೆ
ಮುದವಾದ ತಟ್ಟುವಿಕೆ
ಕಿಲಕಿಲ ನಗು
ಸಿಹಿ ಮುತ್ತುಗಳು
ವ್ಯಸನದಲೂ ಅರಳಿಸಿವೆ........
ಕವಿತೆ ಹೀಗೆ ಬೆಲೆಯುತ್ತದೆ. ಎರಡನೆಯ ಘಟಕದ ಪ್ರೀತಿಯ ಸಂಕೇತ ಹಾಗೂ ರೂಪಕಗಳು ವೈಯಕ್ತಿಕ ನೆಲೆಗೆ ತಂದು ಕೊಡುತ್ತವೆ. ಕವಿತೆಯ ಪೂರ್ವಸ್ಮೃತಿ 'ಕೊಡು; ಕವಿತೆಗೆ ಸದ್ದಿಲ್ಲದೆ ಅವಶ್ಯಕತೆಯನ್ನು ತಂದು ಉಕ್ಕಿಸಿದೆ. ಜೀವನವು ಕುಶಲದಿ ಕೂಡಿ ಹಗುರಾಗಿಸಿದೆ.' ಎಂಬ ಮಾತಿನೊಡನೆ ಈ ಕವಿತೆಯು ಮುಕ್ತಾಯಗೊಳ್ಳುತ್ತದೆ.
ಪ್ರೊ. ಸಿದ್ದು ಬಿ. ಯಾಪಲಪರವಿಯವರ ಕವಿತೆಗಳು ಬೇಗನೆ ಮೈದೆರೆಯುವುದಿಲ್ಲ. ಇಲ್ಲಿಯ ಕವಿತಾ ಶೈಲಿ ನಾರೀಕೇಳಪಾಕ. ಇದು ದ್ರಾಕ್ಷಾಪಾಕವೂ ಹೌದು. ಈ ಕವಿಯು ಎರಡು ಬಗೆಯ ಕಾವ್ಯ ಪಾಕವನ್ನು ಹುದುಗಿಸಬಲ್ಲರು. ಮೇಲೆ ಉದಾಹರಿಸಿದ 'ಸಂಗಾತಿ' ಕವಿತೆಯಲ್ಲೇ ಈ ಎರಡೂ ಶೈಲಿ ಇರುವುದನ್ನು ಗಮನಿಸಬಹುದು. ಮೊದಲನೆಯ ಘಟಕವು ನಾರೀಕೇಳಪಾಕ, ಎರಡನೆಯ ಘಟಕ ದ್ರಾಕ್ಷಾಪಾಕ. ಕವಿತೆಯ ವ್ಯಾಖ್ಯಾನಕ್ಕೆ ನಾನು ಬೇಕಾಗಿ ಎರಡು ಬಗೆಯ ಪಾಕಗಳ ಮಿಶ್ರಣ ಹೇಗಾಗಿದೆಯೆಂಬುದಕ್ಕೆ ಕಾವ್ಯಮೀಮಾಂಸೆಯ ಪರಿಕಲ್ಪನೆಯನ್ನು ಇಲ್ಲಿ ಬಳಸಿದ್ದೇನೆ. ಇಡೀ ಸಂಕಲನದ ಕವಿತೆಗಳು ನಾರೀಕೇಳಪಾಕ ವಾಗಿರುವುದೂ ಉಂಟು; ದ್ರಾಕ್ಷಾಪಾಕವಾಗಿರುವುದು ಉಂಟು. ಹಲವು ಕಡೆ ಒಂದರ ಮುಖ ಮತ್ತೊಂದು ಮುಖಕ್ಕೆ ಕೂಡಿಹಾಕಿಕೊಂಡಿರುವುದು ಉಂಟು. ಇದು ಕಾವ್ಯ ಶೈಲಿಯ ಪ್ರಮೇಯ. ಪ್ರಮಾಣಗಳನ್ನು ಒದಗಿಸಲು ಕವಿ ಎಲ್ಲೂ ತಿರುಗುವುದಿಲ್ಲ. ಅದಲು ತನ್ನ ಕವಿತೆಯ ಲೋಕದಿಂದಲೇ ಪ್ರತ್ಯಕ್ಷ ಸಾಕ್ಷ್ಯವನ್ನು ಒದಗಿಸಲು ಯತ್ನಿಸುತ್ತಾನೆ. ಇದು ಈ ಸಂಕಲನದ ಮಟ್ಟಿಗೆ ಒಂದು ಚೋದ್ಯವೇ ಸರಿ. ಕವಿಗೂ ಕವಿತೆಗೂ ಕವಿಯ ಲೋಕಕ್ಕೂ ಸಂಬಂಧಿಸಿದ ಮಾತೆಂದು ನಾನಂತೂ ಲಘುವಾಗಿ ಹೇಳಲಾರೆ. ಲಘುತ್ವದಿಂದ ಬಹುತ್ವದ ಕಡೆಗೆ ಸೆಳೆಯುವ ಸಂಚಲನ ಇಲ್ಲಿದೆ.
ಸಿದ್ದು ಯಾಪಲಪರವಿ ವೈಯಕ್ತಿಕ ನೆಲೆ ಮತ್ತು ಸಾರ್ವಜನಿಕ ನೆಲೆ ಎಂಬೆರಡು ಪಥಗಳಲ್ಲಿ ಸಂಚರಿಸುತ್ತಿದ್ದಾರೆ. ಅನೇಕಬಾರಿ ಇವೆರಡು ಒಮ್ಮುಖಗಳಾಗಿರುವುದೇ ಹೆಚ್ಚು. ಬದುಕು ಅರ್ಥವಾಗುವುದು ಇಮ್ಮುಖವಾದಾಗ ಅಲ್ಲ. ಅಲ್ಲಿ ಬದುಕಿನ ರಹಸ್ಯ ಕೋಣೆಗಳು ತೆರೆಯುವುದಿಲ್ಲ. ಇಮ್ಮುಖತೆಯ ಕವಿತೆಗೆ ಅರ್ಧಸತ್ಯದ ಎಳೆಗಳನ್ನು ಪ್ರದಾನ ಮಾಡುತ್ತದೆ. ಅದೇ ಜಾಗದಲ್ಲಿ ಒಮ್ಮುಖತೆಯು ಕವಿತೆಗೆ ಪೂರ್ಣ ಸತ್ಯದ ನೆಲೆಗಳನ್ನು ಕಾಣಿಸುವುವಂತೆ ಮಾಡುತ್ತದೆ. ಈ ಕವನಸಂಕಲನದ ಹಲವು ಕವಿತೆಗಳು ಇವೆರಡನ್ನೂ ಕೂಡಿಸಿಕೊಳ್ಳುವ ಬಗೆ ಹೇಗೆಂಬುದ್ನು ಚಿಂತಿಸುತ್ತದೆ. ಲೇಖಕ, ಕವಿ, ಸಾಹಿತಿ ಆದವನು ಇಂಥ ಅಗ್ನಿದಿವ್ಯದ ಕುಂಡದಿಂದ ಮೇಲೆರಬೇಕು. ಇದು ಮೊದಲಿಗೆ ತನ್ನನ್ನು ಸುಟ್ಟುಕೊಂಡು ಬೆಳಕು ನೀಡುವವನ ಪರಿ. ಈ ಗತಿಯು ಕವಿತೆಗೆ ಹೊಸ ಅರ್ಥದ ಪಳುಕುಗಳನ್ನು ತೊಡಿಸುತ್ತದೆ. ಸಿದ್ದು ಕವಿತೆಗೆ ಸೌಂದರ್ಯಾತ್ಮಕ ಆಭರಣಗಳನ್ನು ತೊಡಿಸುವುದಿಲ್ಲ. ಅಲ್ಲಿ ಚಿಂತನೆಯೇ ಮೇಲ್ಮೈಯಾಗುತ್ತದೆ. ಆಗ 'ಕಾವ್ಯ'ದ ಒಳಬನಿಯ ದನಿಯು ಕ್ಷೀಣಿಸುತ್ತದೆ. ಈ ಕವಿತೆಗಳ ಸಹಸ್ಪಂದನಕ್ಕೆ ಇರುವ ತೊಡಕು ಇದೊಂದೇ. ಕವಿತೆಯ ಲಯಗಳು ಸೂಕ್ಷ್ಮಗೊಳ್ಳಬೇಕು. ಗದ್ಯದ ಲಯಗಳನ್ನು ಪದ್ಯದ ಲಯಗಳಾಗಿ ನೋಡುವ ಉಪಕ್ರಮವೊಂದುಂಟುಷ್ಟೆ. ಇಂಥ 'ಲಯ'ಗಳನ್ನು ಹಿಡಿಯುವ ಕಡೆ ಸಿದ್ದು ಯತ್ನಿಸುತ್ತಾರೆ. ಆಗ ಚಂದದ ಸಾಲುಗಳನ್ನು ಕಾಣಬಹುದು. ಆದರೆ, ಕಾವ್ಯಕೌಶಲ್ಯವೇ ಸೌಂದರ್ಯ ಮತ್ತು ಚಿಂತನಾತ್ಮಕ ಅಂಶಗಳೆರಡನ್ನೂ ಒಟ್ಟಿಗೆ ಹಿಡಿಯುವ ಇರಾದೆಯನ್ನು ವ್ಯಕ್ತಪಡಿಸುವುದಿಲ್ಲ. ಅದು ಇನ್ನು ಮುಂದೆ ನಮ್ಮ ಕವಿ ಮಿತ್ರ ಸಿದ್ದು ಹಿಡಿಯಬೇಕಾದ ದಾರಿ. ಕಲೆ ಮತ್ತು ಚಿಂತನೆ ಸಮಪ್ರಮಾಣವಾಗಿ ಬೆರೆಯಬೇಕು. ಕೇವಲ ಸ್ಪೋಟಕವೊ, ಕೇವಲ ಚಿಂತನೆಯೊ, ಕೇವಲ ಸೌಂದರ್ಯವೊ ಕವಿತೆಗೆ ಜೀವಧಾತು ಒದಗಿಸಲಾರದು. ಇವೆಲ್ಲವೂ ಜೊತೆಜೊತೆಯಾಗಿ ಸಮಪ್ರಮಾಣದಲ್ಲಿ ಬೆರೆಯಬೇಕು. ಅಂಥ ಕಡೆ ಚಲಿಸಬಲ್ಲ ಶಕ್ತಿ ಈ ಕವಿಗಿದೆ ಎಂಬುದನ್ನು ಅನೇಕ ಕವಿತೆಗಳಲ್ಲಿ ತೋರಿಸಿಕೊಡುತ್ತಾರೆ. ಇದೊಂದು ಕಾವ್ಯಕಸುಬು, ಈ ಕಸಬುದಾರಿಕೆಗೆ ಮನಸ್ಸಿನ ಸ್ವಾಸ್ಥ್ಯ, ಸಾಮಾಜಿಕ ಸ್ವಾಸ್ಥ್ಯ ಹಾಗೂ ಸಾಂಸ್ಕೃತಿಕ ಸ್ವಾಸ್ಥ್ಯಗಳು ನೆರವಿಗೆ ಬರಬೇಕು. ಅದು ಬರಲಿ ಎಂದು ನಾನು ಮನಸಾರೆ ಹಾರೈಸುತ್ತೇನೆ. ನಾನು ಕವಿತೆಗಳನ್ನು ಓದುತ್ತಿದ್ದಂತೆಲ್ಲಾ ಆಗಾಗ ಮೂಡಿದ ಅಭಿಪ್ರಾಯಗಳನ್ನು ಇಲ್ಲಿ ಹೇಳಿದ್ದೇನೆ. ಸದ್ಯದ ಕವಿತೆಯ ಲೋಕ ಹಿಡಿದಿರುವ ಹಾದಿಗೂ ಈ ಕವಿ ಹಿಡಿದಿರುವ ಹಾದಿಗೂ ಎಷ್ಟೋ ಭಿನ್ನತೆಗಳಿವೆ: ಮಾರ್ಗಾಂತರಗಳಿವೆ. ನಾನು ಅವುಗಳನ್ನು ಇಲ್ಲಿ ಚರ್ಚಿಸಿಲ್ಲ; ಚರ್ಚಿಸಲು ಹೋಗಿಲ್ಲ. ಅದು ಬೇರೊಂದು ಕಡೆ ನಮ್ಮನ್ನು ಕರೆದೊಯ್ಯುತ್ತದೆ. ಪ್ರಾಚೀನ ಅಥರ್ವಣ ವೇದದ ಕವಿಯೊಬ್ಬ ಹೇಳಿದ ಮಾತಿನೊಂದಿಗೆ ಮುನ್ನುಡಿಯನ್ನು ಮುಗಿಸುತ್ತೇನೆ-
'ಕಾವ್ಯಂ ನ ಮಮಾರ, ನ ಜೀರ್ಯತಿ'
(ಕಾವ್ಯಕ್ಕೆ ಮರಣವಿಲ್ಲ, ಮುಪ್ಪಿಲ್ಲ)
ಮೇ 20, 2007 -ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ
ಹಂಪಿ

Read more...

ನೆಲದ ಮರೆಯ ನಿಧಾನ

>> Thursday, May 6, 2010

ಪ್ರೊ. ಸಿದ್ದು ಯಾಪಲಪರವಿ ಸೊಗಸಾದ ಮಾತುಗಾರ. ಸಂಪರ್ಕಕ್ಕೆ ಬಂದ ಯಾವ ವ್ಯಕ್ತಿಯೂ ಸುಲಭವಾಗಿ ಮರೆಯಲಾರದ ವ್ಯಕ್ತಿತ್ವ. ನಾಡಿನ ಅನೇಕ ಮಠಾಧೀಶರು, ರಾಜಕಾರಣಿಗಳು, ಅಧಿಕಾರಿಗಳು, ಸಾಹಿತ್ಯ, ಸಾಂಸ್ಕೃತಿಕ ಲೋಕದ ಅನೇಕ ದಿಗ್ಗಜರ ಸಂಪರ್ಕ ಮತ್ತು ಒಡನಾಟ ಇವರಿಗೆ ಬಲು ಸರಳ. ಮಾತನಾಡುತ್ತ, ವಯಸ್ಸಿಗೆ ತಕ್ಕ, ಅನುಭವಕ್ಕೆ ಮೀರಿದ ಮಾತನಾಡುತ್ತಿರುವರೇನೋ ಅನಿಸುವಾಗಲೆ ತಮ್ಮ ಛಾಪನ್ನು ಎದುರಿಗಿರುವವರ ಮೇಲೆ ಒತ್ತಿಬಿಟ್ಟು ನೆನಪಿನಲ್ಲಿ ಉಳಿಯುತ್ತಾರೆ ಎಂಬುದು ಬಹಳ ಜನರ ಅನಿಸಿಕೆ. ನೇರ ಮತ್ತು ವಿಡಂಬನೆಯ ಮಾತುಗಳಿಂದ ಸ್ನೇಹಿತರನ್ನು ಪಡೆದಂತೆ ವಿರೋಧಿಸುವವರನ್ನು ಪಡೆದದ್ದು ಹೆಚ್ಚು.
ಆಳಕ್ಕಿಳಿಯದೆ ಸರಳವಾಗಿ ಅರ್ಥವಾಗದ ನೆಲದ ಮರೆಯ ನಿಧಾನದಂತಹ ವ್ಯಕ್ತಿತ್ವ - ಲೇಖಕ, ವಾಗ್ಮಿ, ಉತ್ತಮ ನಿರೂಪಕ, ಸಾಕ್ಷ್ಯಚಿತ್ರ ನಿರ್ಧೇಶಕ, ಸಂದರ್ಶಕ, ಆಕಾಶವಾಣಿ ಕಲಾವಿದ, ಕವಿ, ವಿಮರ್ಶಕ, ಅದ್ಭುತ ಸಾಂಸ್ಕೃತಿಕ ಸಂಘಟಕ, ರಂಗನಟ, ಹೀಗೆ ಹಲವಾರು ಪ್ರತಿಭೆಗಳನ್ನು ಮೇಳೈಸಿಕೊಂಡಿದ್ದು, ಎಲ್ಲದರಲ್ಲಿಯೂ ಹಿಡಿತ ಸಾಧಿಸಿದ್ದರೂ ಯಾವುದಾದರೂ ಕ್ಷೇತ್ರಕ್ಕೆ ಆದ್ಯತೆ ನೀಡಿ ಗಟ್ಟಿಗೊಳ್ಳುವ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿದ್ದೇ ವಿರಳ. ಅನೇಕ ಕವಿಗೋಷ್ಠಿಯಲ್ಲಿ, ಪತ್ರಿಕೆಗಳಲ್ಲಿ ಇವರ ಕವಿತೆಗಳು ಅಭಿವ್ಯಕ್ತವಾಗಿದ್ದರೂ ಕವನಸಂಕಲನ ಇಷ್ಟು ಕವನಗಳನ್ನು ಹೊಂದಿರುವ ಈ ಕವನ ಸಂಕಲನದಂತೆ ಇನ್ನೂ ಅನೇಕ ಕೃತಿಗಳನ್ನು ಸಾಹಿತ್ಯ ಲೋಕಕ್ಕೆ ಪ್ರೊ. ಸಿದ್ದು ಯಾಪಲಪರವಿ ನೀಡಲಿ

-.ಡಾ.ಜಿ.ಬಿ.ಪಾಟೀಲ

Read more...

ಗಾಂಧೀ ಮಾರ್ಗ

>> Tuesday, May 4, 2010



ಅರೆಬಟ್ಟೆ ತೊಟ್ಟು
ಹಗಲಿರುಳು ಕಣ್ಣಲಿ ಕಣ್ಣಿಟ್ಟು
ಉಪವಾಸ ಸತ್ಯಾಗ್ರಹಗಳ ಪಟ್ಟನು ತೊಟ್ಟು
ನೀನಲೆದೆ ಈ ದೇಶದ ಮೂಲೆ
ಮೂಲೆಯಲಿ
ಕಟ್ಟಿದೆ ಮನಸು ಮನಸುಗಳ
ಬೆಳೆಸಿದೆ ಸ್ವಾಭಿಮಾನವ
ಕಂಡೆ ಹಗಲಿರುಳು ಸ್ವಾತಂತ್ರ್ಯದ ಕನಸು
ಅಳಿಸಿ ಹಾಕಿದೆ ಜಾತಿ ವಿಷಮತೆ
ಸ್ಥಾನಮಾನ ಕೊಟ್ಟು ಆತ್ಮಾಭಿಮಾನ
ಬೆಳೆಸಿದೆ ದೀನ ದಲಿತರಿಗೆ
ಒದ್ದೋಡಿಸಿದೆ ದಾಸ್ಯತೆ ಹಬ್ಬಿಸಿದ
ಬಿಳಿಯರನು ಶಾಂತಿಮಂತ್ರವ ಹಾಡಿ.
ಇದೆಲ್ಲ ನೀ ನಮಗೆ ಹಾಕಿಕೊಟ್ಟ
'ಶಾಂತಿಮಾರ್ಗ' 'ಗಾಂಧಿ ಮಾರ್ಗ'
ಆದರೆ ಈಗಲೂ ಬಿಟ್ಟಿಲ್ಲ
ನಿನ್ನ ಮಾರ್ಗ ಖಾದಿ ತೊಟ್ಟು
ದೇಶವಾಳುತಿರುವವರು.
ಬಾಯಲೆಲ್ಲ ನಿನ್ನ ಮಂತ್ರ
ಬಳಸುವರೆಲ್ಲ ತಮ್ಮದೇ ಹೊಲಸು ಕುತಂತ್ರ
ಇವರೆಲ್ಲ ನಡೆಯುತಲಿರುವದು
'ಗಾಂಧೀ ಮಾರ್ಗ'ದಲೇ
ಯಾಕೆಂದರೆ ದೊಡ್ಡ ನಗರದ ರಸ್ತೆಗಳೆಲ್ಲವೂ
'ಗಾಂಧೀ ಮಾರ್ಗ', 'ಶಾಂತಿ ಮಾರ್ಗ', 'ನೀತಿ ಮಾರ್ಗ'
ಖುಷಿಪಡು, ಸಮಾಧಾನ ಹೊದು
ಅಜ್ಜಾ! ಇನ್ನೂ ಇವರು ನೀ ಹಾಕಿಕೊಟ್ಟ
ಮಾರ್ಗದಲಿ ಕಾರು ಓಡಿಸಿ ಧೂಳು ಎಬ್ಬಿ
ಸಿರುವುದು ಕಂಡು.

Read more...

ವಿಷವೃಕ್ಷ


ಚಿತ್ತಾಕರ್ಷಕ ಹೂ-ಎಲೆಗಳ
ಬಲಿತು ಕೊಬ್ಬಿದ ರೆಂಬೆ-ಕೊಂಬೆಗಳ
ಫಲಭರಿತ ಮಾವಿನ ಹಣ್ಣುಗಳ
ಬಲಿತ ಬಡ್ಡೆಯ ವೃಕ್ಷ
ಬೇಡ ಬೇಡವೆಂದರು ಸೆಳೆಯಿತಲ್ಲ ನನ್ನ ಕಣ್ಣು
ಪಾಪ! ಗೆಳೆಯ ಕಷ್ಟದಿ ನಿಟ್ಟುಸಿರನುಣಿಸಿ
ಕಣ್ಣೀರ ಕೋಡಿ ಹರಿಸಿ ಹಗಲು-ರಾತ್ರಿ
ಕಣ್ಣಲಿ-ಕಣ್ಣಿಟ್ಟು ಬೆಳೆಸಿಯೇ ಬಿಟ್ಟನಲ್ಲ
ತನ್ನ ಮನೆಯಂಗಳದಲಿ
ನಗುಮೊಗದ ಮಾವಿನ
ರುಚಿಯ ಗೆಳೆಯನಳೆಯದೆ
ತಪ್ಪಿಸಿಕೊಳ್ಳಲಿಲ್ಲ ಧೃತ ಆಲಿಂಗನದಿ
ಬಾನಂಗಳದ ಚುಕ್ಕೆಗಳ ಬೊಗಸೆಯಲಿ ಹಿಡಿದು
ಕಡಲನೇ ಮುಕ್ಕಳಿಸಿ ಕುಣಿಯುವ ನಾ
ಯಾರು ನನಗೆ ತಿಳಿಯಲೆ ಇಲ್ಲ.
ಮಾತುಗಳ ಸಿಂಚನದ ಸೆರಗ ಹಾಸಿ
ಅಡವಿಟ್ಟ ಮನದಾದರಗಳ ಚಾದರ ಹೊದ್ದು, ಬೇಸಿಗೆಯಲಿ
ತಣ್ಣಗೆ ಚಳಿಯಲಿ ಬೆಚ್ಚಗೆ ಮುದನೀಡುವ
ಗೆಳೆಯನ ಆರೈಕೆಯಲಿ ಆಳೆತ್ತರ ಬೆಳೆದ ಮರ
ನಿತ್ಯಾಕರ್ಷಕ-ಚಿತ್ತಾಕರ್ಷಕ ನನ್ನಂತೆ, ಒಮ್ಮೊಮ್ಮೆ
ಅವನಂತೆ
ಕುತೂಹಲ ವಿಶ್ವಾಸ ಅಗಮ್ಯ-ಅಗೋಚರ
ಸೆಳೆತ ನನ್ನನೆಳೆಯಿತು ವೃಕ್ಷದೆಡೆಗೆ
ಮೊದಲ ಪಾಪದ ಹಣ್ಣು
ತೆರೆಸಲಿಲ್ಲ ನನ್ನ ಒಳಗಣ್ಣು
ಮನದಾಳದ ಹಸಿವ ನೀಗಿಸಲು
ಇಳಿಸಿದೆ ಸಿಹಿ ಆಳದೊಳಗೆ
ಹುತ್ತ ಸೇರುವ ಹಾವಂತೆ ನುಸು-ನುಸುಳಿ
ಸಳ-ಸಳನೆ ಸರ-ಸರನೆ ಕಾಳ್ಗಿಚ್ಚಿನಂತೆ
ಇಳಿಯಿತು ಕರುಳಿನಾಳಕೆ
ಅಧರಕ್ಕೆ ಸಿಹಿ, ಉದರಕ್ಕೆ ಹೆಬ್ಬಾವು
ತಾಂಡವ ನೃತ್ಯ ಕತ್ತರಿಸಿತು ಕರುಳ ಬಳ್ಳಿಯನೆ
ಯತ್ನಿಸಿತು ಹೊರಬರಲು ನನ್ನ ತಿರುತಿರುಗಿ
ಒಗೆಯುತಲಿ
ಗಂಟಲಲಿ ಸಿಕ್ಕ ಉಸಿರು ಕೊಸರುತಲಿರುವಾಗ
ನೆನಪಾಯಿತು ಗೆಳೆಯನ ನಗು-ಮೊಗ
ನನ್ನನ್ನಿಲ್ಲಾಗಿಸಿದ, ಇಲ್ಲಾಗಿಸಿದ ಮಾವಿನ ಫಲ.

Read more...

ನನ್ನ ಹಾಡು

>> Thursday, April 29, 2010


ಮಾತೆಲ್ಲ ಹಾಡಾಗಹತ್ತಿದೆ
ಭಾವವಿಲ್ಲದೆ, ಓದುವರಿಲ್ಲ
ಕೇಳುವರಿಲ್ಲ ನಾ ಹಾಡಿದ
ಹಾಡುಗಳ
ಆದರೂ ಹುಟ್ಟುತಿವೆ ಲೆಕ್ಕವಿಲ್ಲದೆ
ಯಾರು ಆಲಿಸುವದು, ಕಣ್ಣರಳಿಸುವದು
ಬೇಡ ಈ ಹಾಡಿಗೆ
ಕೆರಳಿದ ಭಾವ ತಳಮಳಿಸಿದ
ಜೀವ
ನನ್ನ ನಾ ರಮಿಸಲು ಹಗುರ
ಪೋಣಿಸಿದರೆ ಈ ಹಾಡು ನುಡಿಯ
ನೋವೆಲ್ಲ ಮಂಗ ಮಾಯ
ಹಂಚಿಕೊಂಡಾಗ
ಭಾವಕೂ ಪದಕೂ ತಾಳ ಬೇಕೇ?
ಬೇಕೆ ಏನಾದರೂ ಕಟ್ಟಿ ಹಾಡಲು
ಕವಿಯಾಗುವದು ಬೇಡೆನಗೆ
ಶಬ್ದಗಳು ಹದಗೊಳ್ಳಲಿ
ಮಾತು ಮತಿಯಾಗಿಸಲಿ
ನನ್ನೆತ್ತರಕೊಯ್ಯಲಿ ನನ್ನ ಬದುಕ
ಹಸನಾಗಿಸಿ ಜೀವ ಉಳಿಸಲಿ
ಈ ಹಾಡು ಯಾರಿಗೂ ಹಾಡಾಗದಿದ್ದರೂ
ಕೇಳುವದು ಬೇಡವಾದರೂ

Read more...

ಯಾರಿವರು?


ನಮ್ಮ ರಕ್ತ ಹಂಚಿಕೊಂಡು
ಹುಟ್ಟಯೂ ದೂರ ತಳ್ಳಲ್ಪಟ್ಟ
ನತದೃಷ್ಟರಿವರು
ಓಟಗಿಟ್ಟಿಸಲು ಪುಂಡರು
ಇವರನು ಛಿದ್ರವಾಗಿಸಲು ಹೊರಟಿದ್ದಾರೆ
ಜಾತಿಯ ಪಟ್ಟ ಕಟ್ಟಿ
ದೂರ, ದೂರ ಸರಿಯುತಲಿಹರು
ಭಿನ್ನ ಭೇದಗಳ ಸೃಷ್ಟಿಸಿದವರ ಮಾತ ನಂಬಿ
ಯಾರಿಲ್ಲ ಇವರ ಸುತ್ತ
ಶೋಷಣೆಗೊಳಗಾದಾಗಲೆಲ್ಲ
ಪೇಪರಿನಲ್ಲಿ ಬರೆಸಿಕೊಳ್ಳಲು, ಶಬ್ಬಾಸಗಿರಿ
ಗಿಟ್ಟಿಸಲು ಎಲ್ಲರೂ ಹೋಗೋಗಿ ಬರುತಾರೆ
ಕೇರಿಗೆ, ತಕ್ಷಣ ತಪ್ಪದೆ ಸ್ನಾನ ಮಾಡು ತಾರೆ
ಮೈಲಿಗೆ ಆಯಿತೆಂದು ಬಡಬಡಿಸಿ
ಗಾಂಧಿ, ಬಸವ, ಅಂಬೇಡ್ಕರ ಸಿಕ್ಕು
ನರಳುತಿರುವರು ಪುಢಾರಿಗಳ ಬಾಯಲಿ
ದಲಿತೋದ್ಧಾರ ನೆಪದಲಿ
ಇನ್ನೂ ಮಲ ತಿನ್ನುವ, ಚಾಟಿಗೆ ಮೈ
ಒಡ್ಡುವ ಕಣ್ಣಲಿ ನೋವ ರಕ್ತ ಸುರಿಸುವರ
ಕಣ್ಣೊರೆಸಲು ಆಗೀಗ ಬರುವರೆಲ್ಲ
ಯಾರಿಗೂ ಬೇಕಿಲ್ಲ ಮನಸಾರೆ ಕೊಡುವದು
'ರಿಜರ್ವೇಶನ್' ತಮ್ಮ ಹೃದಯದಲಿ.

Read more...

ಹೋಳಿಹಬ್ಬ


ಹೊಲಸು ಹಾಡ ಹಾಡುತಾ
ಲಬೋ,ಲಬೋ, ಬೈಗುಳ
ವರ್ಷದುದ್ದಕ್ಕೂ ತಡೆದಿಟ್ಟ
ಭಾವನೆಗಳ ಆಸ್ಫೋಟ.
ಏರುವ ಬೆಲೆಗಳ ಕಂಡು,
ದೊರಕದ ರೇಶನ್ ಗೆ ಕ್ಯೂ ಹಚ್ಚಿ
ಸಿಕ್ಕಾಪಟ್ಟೆ ಹಣ ತೆತ್ತರೂ ನಿಂತೋ
ಬಸ್ಸಿನ ಮೇಲೆಯೋ ಪ್ರಯಾಣಿಸಿ,
ಉರುಳಿ ಉರುಳಿ ಮತ್ತೆ ಅಧಿಕಾರ
ಕೇರಲು ಓಟ ಕೇಳಲು ಬರುವ
ರಾಜಕಾರಣಿಗಳ ಕಂಡು.
ನಿತ್ಯ ಹೋಳಿ ಹಬ್ಬ ಬದುಕಿನಲಿ
ಆದರೆ ಹೊಯ್ಕೊಳ್ಳುತ ಅಸಭ್ಯತೆಯ
ತೋರದ ಮನ ಕಾಯ್ದು ಕುಳಿತಿತ್ತೆ?
ಎಲ್ಲ ಒಮ್ಮೆಲೆ ಸೇರಿಸಿ ಆಚರಿಸುವ
ಹೋಳಿಯ ರಂಗು ರಂಗಿನಲಿ
ಅಂತೂ, ಇಂತೂ ವರ್ಷಕ್ಕೊಮ್ಮೆಯಾದರೂ
ಹಗುರವಾಗಬಹುದು ಹೋಳಿಯ
ನೆಪದಲಿ

Read more...

ನಿನ್ನ ಕಣ್ಣ ಸೆಳೆತದಲಿ


ಏನು ಬರೆಯಲಿ
ಹೇಗೆ ಹಾಡಲಿ
ನಿನ್ನ ಅನುರೂಪ ಸೌಂದರ್ಯ
ರಾಶಿಯೆದುರು ನಿಂತ ಬಳಿಕ
ನಿನ್ನರಳಿದ ಕಂಗಳು
ಕಸಿದಿವೆ ಅಕ್ಷರಗಳ
ಮರೆಸಿವೆ ಭಾವನೆಗಳ
ಅವ್ಯಕ್ತ ಆಸೆ ಹುಡುಕುತಲಿದೆ
ಎಲ್ಲಿಯಾದರೂ ಸಿಗಬಹುದೆ ನೆಮ್ಮದಿ
ದಿನವು ಈ ದೇಶದ ನಾಗರಿಕರು
ಕಲೆದುಕೊಳ್ಳುತ್ತಿರುವ ಹಕ್ಕುಗಳು
ಹಗಲುಗಳ್ಳರು ಹುಟ್ಟಿಸುತಿರುವ
ಸಮಸ್ಯಗಳ ಸುಳಿಗೆ ಸಿಕ್ಕ ಮನುಷ್ಯರು
ಫೈಲು ಹೊತ್ತು ಅಲೆದಾಡುವ ಪದವೀಧರರಿಗೆ
ನೌಕರಿ ಎಲ್ಲಿ?
ಕಾಡುಗಳ್ಳರ ಬಂಧಿಸಲು ಯತ್ನಿಸುವ
ಪೋಲಿಸರು
ದೇಶ ರಕ್ಷಿಸಲು ಪರದಾಡುತಿರುವ
ರಾಜಕಾರಣಿ
ಇಲ್ಲ,ಇಲ್ಲ, ಇದೆಲ್ಲ ಶುದ್ಧ
ಭ್ರಮೆ, ಕನಸು
ಹೇಗೆ ಸಿಕ್ಕೀತು ತಿರುಗಿ ಬಾರದ
ಎಂದೋ ಕಳೆದುಹೋಗಿರುವ ಕುಸಿಯುತ್ತಿರುವ
ಮೌಲ್ಯ ಈ ಭ್ರಷ್ಟ ದೇಶದಲಿ
ಎಲ್ಲ ಆಸೆಗಳು ಮಣ್ಣು
ಗೂಡಿದರೂ ನಲ್ಲೆ
ನಿನ್ನ ಕಣ್ಣ ಸೆಳೆತ ಕೆಲ
ಕ್ಷಣಕಾದರೂ ಮರೆಸಿದೆ ಎಲ್ಲವ
ಅಸ್ಥಿರ ಬದುಕಿನ ದಿವಾಳಿತನವ.

Read more...

ಮೃತ್ಯುಂಜಯ


ಮೃತ್ಯುವನು ಗೆಲ್ಲದ
ಮೃತ್ಯುಂಜಯ
ಸದಾ ಮಂದಹಾಸವ
ಬೀರುವ ನಿಮ್ಮ ಮೊಗ
ಯಾರು, ಎಲ್ಲಿಯೂ ತರಲಾರರು
ಮತ್ತೆ,
ಪಕ್ಕನೆ ಕೈಯ ಹಕ್ಕಿ
ಹಾರಿ ಹೊಡೆದಂತೆ ವಿಧಿ
ಕಿತ್ತುಕೊಂಡ ಕ್ರೂರತೆ
ನೆನೆದರೆ ನಿಮ್ಮ ನಗು
ಬಲ್ಲವರ ಹೃದಯದಲಿ ನಿಲ್ಲದ ನಡುಕ
ಎಲ್ಲೆಲ್ಲೂ ಮಾರ್ದನಿಸುತಿದೆ
ಮಾತುಗಳ ಮಾರ್ಧನಿ ಸವಿದ
ಹೃದಯಗಳಲಿ
ಯಮ ನೀವು ರೋದದಳಿಗೆ
ಬ್ರಹ್ಮ ನೀ ರೋಗಿಗಳಿಗೆ
ಹಣ, ಅಧಿಕಾರ, ವೃತ್ತಿ
ಅಹಂಕಾರದಿ ತೊಡರಾಗಲಿಲ್ಲ
ನಿಮ್ಮ ನಿಶ್ಚಿಂತ ನಡಿಗೆಗೆ
ಒಮ್ಮೆಲೇ ಹಾರಿಹೋಯಿತು
ಜೀವ
ಮೊದಲೆ ಬಿದ್ದಿತು ಪರದೆ
ಜೀವನ ನಾಟಕ ಮುಗಿಯುವ
ಮುನ್ನ
ನಿತ್ಯನೂತನ ಹಚ್ಚ
ಹಸಿರು ನಿಮ್ಮ ನೆನಪಿನ
ನಗೆ
ರಾಜಕೀಯ ವಿಷವರ್ತುಲ
ಕಿರಿದಾಗಿಸಿತು ನಿಮ್ಮ ಹಿರಿತನವ.

Read more...

ಕನ್ನಡಕ್ಕೆ : ಚಂಪಾ ತೆಗೆದ ರಂಪಾ


ಗಾಬರಿಯಾಗಿದ್ದಾರೆ ಕನ್ನಡದ
ಕಣ್ ಮಣಿಗಳು ಜ್ಞಾನ
ಪೀಠದ ಮೇಲೆ ಕುಳಿತು
ಪಿಳಿ ಪಿಳಿ ಕಣ್ ಬಿಡುತ
ಯಾಕೆ ಬೇಕಿತ್ರಿ ಆಳುವವರ
ಉಸಾಬರಿ ಎಂದುಸುರುತ್ತಲೇ
ಕನ್ನಡಕ್ಕಾಗಿ ಚಂಪಾ ತೆಗೆದ ರಂಪವನು
ಅಣಕಿಸುತ್ತಾರೆ.
ಸಾಹಿತ್ಯ ಇರುವದೇ ಆಳುವ
ವರ ಹೊಗಳಲೆಂದೇ ಹೊಗಳಿಕೆಗೆ
ಮರುಳಾದ ರಾಜರುಗಳ ಕಿರೀಟಗಳು
ಹಾರಿದವು; ಸಿಂಹಾಸನದ ಕಾಲುಗಳು
ಕೀಲು ಕಳೆದುಕೊಂಡವು. ಹೊಗಳು
ಭಟರು ಕನ್ನಡ ಕನ್ನಡಕ ಬದಿಗಿರಿಸಿ
ಜುಬ್ಬಾ ಸರಿಯಾಗಿಸಿ, ಒಮ್ಮೆ ದಾಡಿ ನೀಟಾಗಿಸಿ
ಎಳೆಯುತ್ತಾರೆ ಆಳುವವರ ತೇರನು
ಕನ್ನಡಕೆ ಕನ್ನ ಹಾಕಿ. ಕುರ್ಚಿ ಕಬಳಿ
ಸಲು, ಸೈಟು ಹೊಡೆಯಲು ಜ್ಞಾನ - ಸು
ಜ್ಞಾನ ಪೀಠಗಳನೇರಲು ಬೇಕೇ ಬೇಕು
ಕನ್ನಡ-ಬೇಕಿಲ್ಲದವರಿಗೆ ಈ ಜಲ
-ನೆಲ-ಜನರ ರಕ್ಷಣೆ ಕನ್ನಡಿಗರಿಗೆ ಇವರು
ಕೊಟ್ಟದ್ದೇ ಕಟ್ಟಪ್ಪಣೆ!
ಸೆಟಗೊಂಡ ರಾಜ
ಕುಮಾರಣ್ಣಗಳು ಕೊಂಚ ವಿಷಣ್ಣರಾದರೂ
ತಪ್ಪಿಸಿಕೊಳ್ಳದೇ ಹಾಡಿದರು ಅದೇ ರಾಗವ
ಕನ್ನಡದ ತಾಳದಿ
ಕ್ಯಾತೆ ತೆಗೆದವರು ಖ್ಯಾತಿ ಪಡೆದವರು
ಸದ್ದಿಲ್ಲದೆ ಏರುತ್ತಾರೆ ನಿಧಾನ
ಸೌಧವ ರಮಿಸುತ್ತಾರೆ ಗದ್ದ ತುಟಿ ಹಿಡಿದು
ಸೆಟಗೊಂಡವರ
ಎಪ್ಪತ್ತರ ಹರೆಯದವರಿಗೆ
-ಆಟ ಹತ್ತಬಾರದು, ಚಂಪಾರ
ಬಾಯಿಗೆ ಭಂಡರು ಸಿಗಬಾರದು.
ಶಿವನ ಮೊಗ್ಗಿನಲಿ ಅರಳಿದ ಕನ್ನಡ
ಕಣ್ಣುಗಳು ಖುಷಿಯಲಿ ಹಾಡಿ
ಹರಸಿವೆ ಕನ್ನಡಕಾಗಿ ಚಂಪಾ
ತೆಗೆದ ರಂಪವನು.
ಬಿರುದು ಬಾವಲಿಗಳ ಹೊಡಕೊಂಡವರು
ಸೆಟಗೊಂಡು ನೇತಾಡುತಿಹರು ತೊಗಲು
ಬಾವಲಿಗಳ ಹಾಗೆ ಇಂಗ್ಲಿಷ್ ಟೊಂಗೆಯಲಿ
.

Read more...

ನವರಸಗಳ ಅಲೆದಾಟ

>> Wednesday, April 28, 2010


ಹೀಗೇಕೆ ಒಂದೊಂದು ಶಕ್ತಿಗೆ ಒಂದೊಂದು ರೂಪ
ಪ್ರೀತಿ ಸುರಿಸುತ್ತೇನೆ, ಸಿಟ್ಟು ಕಾರುತ್ತೇನೆ, ಕೆಂಡವಾಗುತ್ತೇನೆ
ಕರಡಿಯಂತೆ, ಉಡದಂತೆ ತಬ್ಬುತ್ತೇನೆ ಪ್ರೀತಿಯಿಂದ
ಸಂಗಾತಿಯ
ಪ್ರೀತಿ ತಬ್ಬುಗೆ ಕೊಸರಲಾರಳು
ಸಿಟ್ಟಿನ ಬೆಂಕಿಯ ಸಹಿಸಲಾರಳು
ಪ್ರೀತಿಯ ಕಂಗಳ ಪುಳಕ ರೋಮಾಂಚನಕೆ ಹೆದರಿ
ಎದುರಿಸಲಾರಳು
ಒಮ್ಮೊಮ್ಮೆ-
ಸಿಟ್ಟಿನ ಕೆಂಡದ ಕಣ್ಣುಗಳ
ಬೆದರಿ ಸಹಿಸದೇ ತಪ್ಪಿಸಿಕೊಳುವಳು
ಕರಗಿ ನೀರಾಗಿ ರಸಮಯ ಪಿಸುಮಾತಿಗೆ
ಸುಟ್ಟು ಬೂದಿಯಾಗುವಳು
ಅಬ್ಬರಿಸಿ ಬರುವ ಕೆಂಡದಂಥ ಬೈಗುಲಕೆ.
ನಿತ್ಯ ಹೊರಾಟದ ಬದುಕು
ಆಕೆ ನನ್ನ ಎದುರಿಸಲು.
ಬಿಡಲಾರಳು ಹಿಡಿಯಲಾರಳು
ಅತೀ ಆದರೆ ಪ್ರೀತಿಯೂ
ಭಯವೇ, ಸಿಹಿಯೂ ಕಹಿ
ಹವದಲ್ಲ ಅಂದುಕೊಳ್ಳುತ್ತೇನೆ ಕರೆದಾಗ ಬರಲಿಲ್ಲ ಅಂದರೆ
ಮತ್ತೆ,ಮತ್ತೆ, ಮತ್ತೆ ಎಲ್ಲ ಮರೆತು
ಕೆಂಡವಾಗುತ್ತೇನೆ.
ನಿತ್ಯ ಬದುಕಿನ ಪುಸ್ತಕದಲಿ ಬರೆದಿರುವ
ವಿಪರ್ಯಾಸದ ಅಧ್ಯಾಯಗಳೇ
ಈ ಬದುಕಿನ ಮುಖಗಳು.

Read more...

>> Tuesday, April 27, 2010


ನಾಯಿಗಳಿವೆ ಎಚ್ಚರಿಕೆ
ಹತ್ತಿರದ ಬಂಧುಗಳ ಮನೆ
ಮುಂದಿನ ಗೇಟಿಗೆ ತಗುಲಿದ
ಬೋರ್ಡ್ 'ಇಲ್ಲಿ ನಾಯಿಗಳಿವೆ ಎಚ್ಚರಿಕೆ'
ಕೆಲ ಕ್ಷಣ ತಡೆಯಿತು ನನ್ನ
ನಿ----ಧಾನ ಹೆದರುತ್ತ...... ತೆಗೆದ
ಗೇಟಿಗೆ ಕಾಣಿಸಲಿಲ್ಲ ನಾಯಿಗಳು
ನನಗೆ ಅಚ್ಚರಿ!
ಸಪ್ಪಳಕೆ ತೆರೆದ ಬಾಗಿಲಿನ ಹಿಂದೆ
ಕರೆದರು ಬಂಧುಗಳು ಅಕ್ಕರದಿ
ಒಳಗೆ ಹೋದೆ ಅವರ ಮಾತುಕತೆ
ತೋರಿದ ಪ್ರೀತಿ ವಿಶ್ವಾಸ ಅನುಭವಿಸಿದಾಗ
ಅನ್ನಿಸಿತು
"ಇಲ್ಲಿ ನಾಯಿಗಳಿವೆ ಎಚ್ಚರಿಕೆ!"
ನಾಯಿಗಳಿವೆ ಎಚ್ಚರಿಕೆ!! ಎಂದು.
*
ಸಿಟ್ಟು
ನುಂಗಿದರೆ
ವಿಷ
ಕಾರಿದರೆ
ಬೆಂಕಿ
*

Read more...

ಜಡದ ಹಾಡು



ಬದುಕು ಸುತ್ತೆಲ್ಲ ಜಂಜಡದ ಗಂಟು
ಗಳ ನಂಟು
ಹೊರಬರಲೆತ್ನಿಸಿದಂತೆ ಸಿಕ್ಕುವೆವು
ಸಿಂಬಳದ ನೊಣದಂತೆ
ಅಂತೆ-ಕಂತೆಗಳ ಬದುಕಿಗೆ
ನೂರೆಂಟು ಜಡತೆಯ ಗಂಟು
ಬಿಚ್ಚಲೆತ್ನಿಸಿದಂತೆಲ್ಲ ಬೀಳುವದು
ಮತ್ತೆ ಕಗ್ಗಂಟು
ಹಸಿದ ಹೊಟ್ಟೆ ಹಿಟ್ಟ ಪಡೆದರೆ,
ಬಟ್ಟೆಗೆ ಪರದಾಟ
ಒಂದಿದ್ದರೆ, ಇನ್ನೊಂದರ ಕೈ ಬಿಡುವ
ನಿತ್ಯ ಬದುಕಿನ ಹೋರಾಟ
ಹಸನದ ಬಾಳು ಕನಸಿನ ಹಾಡಾಗಿ
ಕರ್ಕಶದಿ ಹಾಡುವ ಪಕ್ಷಿ
ಚೀರುತಿದೆ ಹಾಹಾಕಾರದಿ
ನಿತ್ಯ ಸಮಸ್ಯೆಯ ಸುತ್ತ
ನಳನಳಿಸುವ ಜೀವಕೆ-
ತ್ಯಾಗ, ಪ್ರೀತಿ, ವಿಶ್ವಾಸಗಳೆಲ್ಲ ಸವಕಲುನಾಣ್ಯ
ಜಣ, ಜಣ,ಜಾರಿ ಹೋಗಿವೆ
ಹೊಟ್ಟೆ ಬಟ್ಟೆಗಳ ಚಿಂತೆಯಲೂ
ಜುಟ್ಟಿಗೆ ಹೂವ ಸಿಗಿಸುವ ಕೃತಕತೆಯಲಿ
ಸೋರಿಹೋಗಿದೆ ಬದುಕ ಬೆಲೆ
ಬಾಳಿಗಿಲ್ಲ ನೀತಿ, ಬದುಕಿಗಿಲ್ಲ ರೀತಿ
ಹೊಂದಿಯೂ ಹೊಂದದಂತೆ
ಪಡೆದೂ ಪಡೆಯದಂತೆ
ದೂರಾಗಿವೆ ಸಂಗತಿ-ಸಂಗಾತಿಗಳೆಲ್ಲ
ಮನದ ಮೂಲೆಯಿಂದ ಎಲ್ಲವೂ ಯಾಂತ್ರಿಕ, ತಾಂತ್ರಿಕ,
ವೇಗದ ಬದುಕು ನಿರ್ಜೀವ ಯಂತ್ರ?
ಇದಕೆ ಬೇಕಿಲ್ಲ ಚಾಲಕನ ತಂತ್ರ
ಕೊನೆಯಿಲ್ಲ
ಈ ತಾಳ ತಪ್ಪಿದ ಬಾಳ ಹಾಡಿಗೆ

Read more...

ಸ್ನೇಹ


ಜಗದ ಮಾರುಕಟ್ಟೆಯಲೆಲ್ಲೂ ಲಭ್ಯವಿರದ
ಮಂದಹಾಸ
ಪ್ರೀತಿ-ವಿಶ್ವಾಸ ನಿತ್ಯ ಶ್ವಾಸಕೋಶ
ಕನಸ ಕಾಣುವದು ಕಂಡ ಕನುಸುಗಳಿಗೆ
ಬಣ್ಣ ತುಂಬಲು ಹೆಣಗುವದು
ಚಿತ್ತಾರ ಸುಂದರವಾದಾಗ ಮಕ್ಕಳ ಹಾಗೆ
ನಗು ಕೇಕೆ ಯಾರಿಗೆ ಬೇಕಿತ್ತು ಸದಾ ಗಡಿಬಿಡಿ
ಕ್ರಿಯಾಶೀಲತೆಗೆ ಒಂಚೂರು ವಿರಾಮ ಕೊಡಿ
ಟೋಪಿ ಹಾಕಲು ಯಾವ ಗೂಟವಾದರೇನು?
ಗರಿಗರಿ ಇಸ್ತ್ರಿ ಕೆಡದಿದ್ದರೆ ಸಾಕು - ತಲೆ
ಮಾಸದಿರಲು ಟೋಪಿಯೂ ಬೇಕು, ಗೂಟವೂ ಬೇಕು
ಸುಂದರ ಕನಸುಗಳಿಗೆ ಬಣ್ಣ ತುಂಬುವದಿದ್ದರೆ ಹಗಲು
ಬರುವದೇ ಬೇಡ ಬಾಳಿನ ಪಯಣ ಮುಗಿಯದೇ
ಸಾಗಿರಲಿ ಸ್ನೇಹ ಬಂಡಿ.

Read more...

ಪಂಡಿತ


ನಡೆಗಿಂತ ನಗೆ ಗಂಭೀರ
ಮೌನದಲಿ ಸಾವಿರಾರು ಭಾವಗಳ
ಸರದಾರ
ಪಾಂಡಿತ್ಯ-ಅಧ್ಯಯನ ಹೂಂಕಾರ
ಝೇಂಕಾರಗಳ ಗ್ರಹಿಸಿ ಗಮನಿಸುವ
ಕಾವಲುಗಾರ
ಬ್ರಹ್ಮಾನುಭವದ ಬ್ರಾಹ್ಮಣ್ಯ
ಸಂಸ್ಕೃ-ಸಂಸ್ಕೃತಿಗಳ ಮಂಥನದಿ
ಬೀಗುವ ಛಲಗಾರ
ಟೀಕೆ-ಟಿಪ್ಪಣಿಗೆಲ್ಲ ಇಲ್ಲಿ
ಇಲ್ಲ ಉತ್ತರ
ಜ್ಞಾನದಾಗರದ ಕನ್ನಡಕದ ಹಿಂದಿನ ಕಂಗಳ ಮಿಂಚು
ತುಟಿ ಮೇಲಿನ ಕಿರುನಗೆ ಸಾಗಿಯೇ
ಇರಲಿ ಹೀಗೆ ನಡೆದದೆಲ್ಲ ರಾಜಮಾರ್ಗ

Read more...

ನನ್ನ ಸರ್


ಬದುಕು ಮಕ್ಕಳಾಟವಲ್ಲ ಖರೆ
ನಾವೇ ಮಕ್ಕಳಾಗಿ ಸಿಕ್ಕ ಸಿಕ್ಕವರು ಆಟ
ಆಡಿದರೆ ಹೇಗೆ ಸರ್? ಕಣ್ಣ ತುಂಬ ಕನಸು
ಮುಖದ ತುಂಬ ಮಾಸದ ಯಾರೂ
ಕಸಿಯದ ನಗೆ. ನಗೆ ಕೊಂಡವರು
ಖುಷಿಮತ್ತರಾಗಿ ತಿರುಗಿ ತೋರಲಿಲ್ಲ
ಸೌಜನ್ಯ ಪ್ರೀತಿ-ಹಣ. ಆದರೂ
ಮುನಿಸಿಕೊಳ್ಳಲಿಲ್ಲ ಜೀವ-ತುಂಬೆಲ್ಲ ಭಾವ
ಪ್ರೀತಿ-ಪ್ರೀತಿ ನಿಟ್ಟುಸಿರು. ನಿಮ್ಮನರಿಯದ
ಸಂಗಾತಿಗಳು ಎಲ್ಲಿ ಕಳೆದಿದ್ದಾರೆ ತಮ್ಮ ತಮ್ಮ
ಅಮೂಲ್ಯ ಸಮಯವ? ಸಿಕ್ಕರೆ ತಿರುಗಿ
ಕೊಡಲಿ ಪಡೆದ ಪ್ರೀತಿ ವಿಶ್ವಾಸ ನಗೆ ಸಂಭ್ರಮವ
ಕಾಲನ ಹಾದಿಯಲಿ ತೊಡರಿಗೆ ಸಿಕ್ಕವರ ಎಬ್ಬಿಸಿ ತಟ್ಟುವ
ಸಾಗಲಿ ಜೀವ ಪಯಣ

Read more...

ಜಗದಣ್ಣ


ಗೋಮುಖ ವ್ಯಾಘ್ರರು ಒಲೆ-ಧರೆ ಹತ್ತಿಸಿ
ಉರಿವಾಗ-ಉರಿಯಲಿ ಮೈಕಾಸಿಕೊಂಡಾಗ
ಜ್ಞಾನದ ಬಲದಿಂದ ಹೊತ್ತಿಕೊಂಡ ಚಿಜ್ಯೋತಿ.
ಉಳ್ಳವರ ಶಿವಾಲಯಗಳ ಉರುಳಿಸಿ ಇಷ್ಟ
ದೇವರ ಅಂಗೈಗಿಟ್ಟವ, ಗುಡಿಗೋಪುರ ಮಂಟಪ
ಗಳ ಗಾಳದಿ ಸಿಕ್ಕವರ 'ಅನುಭವ' ಮಂಟಪದಿ ಪ್ರತಿಷ್ಠಾಪಿಸಿದವ.
ಅಕ್ಕ, ಅಲ್ಲಮರ ವಚನ ಗಾನಕೆ ತಪ್ಪದೇ
ತಾಳ ಹಾಕಿದವ, ಎಲ್ಲರನು ಇವ ನಮ್ಮವ
ಎಂದೆನಿಸಿದರೂ ದುಷ್ಟ ದುರುಳರಿಗೆ ದುರಾಚಾರಿಗಳಿಗೆ
ಇವನಾರವ-ಎನಿಸಿದರೂ ಲೆಕ್ಕಿಸದೆ ತಲೆದಂಡ
ಹಿಡಿದು ರಾಜಮಾರ್ಗ ಸೃಷ್ಠಿಸಿದವ.
ಸಾವಿರ ವರುಷಗಳುರುಳಿದರೂ ಸಾವಿರದ ಸರದಾರ
ಸುಳಿದು ಸೂಸುವ ಗಾಳಿಯಲಿ ಪಡೆದು ಧನ್ಯವಾಗುವ
ಉಸಿರಿನಲಿ ಸದಾ ನೀನೇ ಅಣ್ಣ ಬಸವಣ್ಣ-ಜಗದಕಣ್ಣಣ್ಣ

Read more...

ಮಹಾದಾನಿ


ದಾನದಿಂ ಮೆರೆದು ಮರೆಯಾಗದೇ
ಸುಳಿದು ಸೂಸುವ ಗಾಳಿಯಲಿ
ಅರಳುವ ಪ್ರತಿಭೆಗಳಲಿ
ನಿತ್ಯ ನೂತನವಾಗಿ ಕಂಗೊಳಿಸುವ
ದಿವ್ಯ ಚೇತನಕೆ ಸದಾನಮನಗಳು
.

Read more...

ನನ್ನ ಅಜ್ಜಾ ಅವರು

>> Monday, April 26, 2010

ಕಾರ್ಗತ್ತಲಲ್ಲಿ ಕಣ್ ಕಟ್ಟಿಕೊಂಡು
ಅಂಡಲೆಯುವಾಗ ಕೈ ಹಿಡಿದು
ಬೆಳಕ ತೋರಿ ಕಡಲ ತೀರವ
ಸೇರಿಸಿ ಬೆಳಕ ತೋರಿದ
ಜಗದ ಗುರು ನೀ----
ಹತಾಶೆ - ನೋವುಗಳು ತಳ
ಮಳದಿ ತಾಳ ಹಾಕಿದಾಗ ದಿಕ್ಕು
ತಪ್ಪಿ ದಿಕ್ಕನರಸುವಾಗ ದಿಕ್ಸೂಚಿಯಾದ
ಗುರುವಿನ ಗುರು ನೀ---
ಮಾತಲಿ ಮಮತೆ, ಮನದಲಿ ತಾಯ್ತನ
ನಿತ್ಯ ನಾ ಪಡೆವೆ ಹೊಸ ಹಾದಿ
ನಿಮ್ಮ ಪ್ರೀತಿ-ಬೈಗುಳಲಿ. ಗದರಿದರೆ ತಾಯಿ
ಮುನಿಸಿಕೊಳುವದುಂಟೆ ಮಗು?
ಬಾಳಪಯಣದಿ ಹಚ್ಚಹಸುರಾಗಿ ಇರಲಿ ಸದಾ
ಗುರುವೆ ನಿಮ್ಮ ಕೃಪೆ

Read more...


ಅಗಲಿಕೆ
ನಿನ್ನ ಅಗಲಿಕೆ
ಹಿಟ್ಟಿಸಿದೆ ಮನಸ
ಗರ್ಭದಲಿ ಅನುಮಾನದ
ಶಿಶುವ ಮರಳಿ ಬಂದು ಕರಗಿಸಿ
ಬಿಡು ಸಂಶಯದ
ಕೂಸಾಗಿ
ಬೆಳೆಯುವ
ಮುನ್ನ.
*
ಮರೆವು: ಶಾಪ - ವರ
ಕಾಲಗರ್ಭದಲಿ ಕರಗಿ
ಹೋಗಿವೆ ಹಲವಾರು
ನೆನಪಿನ ಕೂಸುಗಳು
ಮತ್ತೆ ಗರ್ಭ ಧರಿಸುತಿವೆ
ಹೊಸ,ಹೊಸ ಆಸೆಗಳು
ಮರೆವು ಔಷಧಿಯಾಗಿದೆ
ಹುಟ್ಟುತಿರುವ ಆಸೆಗಳಿಗೆ
ಮರೆವು ಶಾಪ ಅಂದು
ಕೊಂಡಿದ್ದೆ
ಎಲ್ಲ ಮರೆತು ಹೊಸ
ಬದುಕು ಹುಟ್ಟು ಹಾಕಿದೆ
ನನಗೆ ಮರೆವು ಬ್ರೆಹ್ಮನಾದದ್ದೂ
ಹೀಗೆಯೇ?

Read more...


ಪ್ರೀತಿ
ಎರಡು ಬಿಂದುಗಳನ್ನು
ಒಂದುಗೂಡಿಸಿ
ಅವುಗಳ ಅಸ್ತಿತ್ವವನ್ನೇ
ಕಳೆದು
ತಾನೇ ತಾನಾಗಿ
ವಿಜೃಂಭಿಸುವ
ಸರಳರೇಖೆ.
*
ಆಶಯ
ಮಬ್ಬಿದ ಮುಸುಕು
ಆವರಿಸಿದ ಕತ್ತಲು
ಬಂದ ತಳಮಳ
ಎರಗಿ ನಲುಗಿಸಿದ ಹಿಂಸೆಗಳು
ಬಿಸಿಲ ಕಂಡ ಹಿಮದಂತೆ
ಕರಗಿ ಹೋಗಲಿ
ತರಲಿ ಹಚ್ಚ ಹಸುರ
ಬರುವ ಹೊಸ ವರುಷ
*

Read more...

ಸಾಧನೆಗಳು


1
ಬರೀ ಜ್ಯೂಸ್, ಹಾಲು
ಕುಡಿಯುತ್ತಿದ್ದ ಗೆಳೆಯ
ನನ್ನ ಪ್ರೀತಿಯ ಒತ್ತಾಯಕ್ಕೆ
ಮಣಿದು ಹೊಸ ವರ್ಷದ
ಖುಷಿಯಲಿ ಆಲ್ಕೊಹಾಲು
ಕುಡಿದದ್ದಷ್ಟೇ ಸಾಧನೆ!
2
ಏನೆಲ್ಲ ಸಾಧಿಸಬೇಕಾಗಿದ್ದ
ಹಲವು ಉಪಯುಕ್ತ ದಿನದ
ಕ್ಷಣಗಳು, ಪಟ್ಟನೆ ಥಟ್ಟನೇ
ಹಾರಿ ಹೋದಂತಾಗಿ ಏನೋ
ಮರೆಯಲು ನಿಶೆ ಏರಿಸಿ
ಖುಷಿ ಪಟ್ಟು ನೋವ
ಮರೆತ ಗೆಳೆಯ!
ಹೊಸ ವರುಷದಂದು

Read more...

ಏಕಿಲ್ಲ ಕೊನೆ?


ನಕ್ಷತ್ರಗಳು ಸಾವಿರಾರು
ಕನಸುಗಳು ನೂರಾರು
ಹೆಣೆಯುವ ಭಾವನೆಗೆ
ಮಿತಿ ಎಲ್ಲಿ?
ಕೈಗೆಟುಕಬಹುದೆ
ಹಿಡಿಯಬಯಸಿದ್ದೆಲ್ಲ
ಸಿಗಬಹುದೆ
ಪಡೆಯಲೆತ್ನಿಸಿದೆಲ್ಲ
ವಾಸ್ತವದ ಅಬ್ಬರದ
ಮುಂದೆ ಕನಸಿನ
ಹಿಮ ನಿರಾಯಾಸವಾಗಿ
ಕರಗುವದೇಕೆ?
ಹುಟ್ಟುತಿವೆ ನೂರಾರು
ಆಸೆಗಳು ಕೈಗೂಡದಿರೆ
ಬಿಟ್ಟಿಲ್ಲ ಎಲ್ಲ
ವ್ಯರ್ಥವೆಂದರಿತರು
ವಾಸ್ತವ ಕನಸಿನ
ಗುದ್ದಾಟಕಿಲ್ಲವೇ ಕೊನೆ.

Read more...

ಆಶಾವಾದ


ಹಗಲು-ಇರುಳು ಒಂದೇ ಆಗಿದೆ
ನಿರಾಶಾವಾದ ಕವಿದ ಬದುಕಿಗೆ
ಎಲ್ಲವೂ ಸಪ್ಪೆ ಅರ್ಥರಹಿತ
ಅಂದುಕೊಂಡದ್ದೆಲ್ಲ ಕೈಗೆಟುಕದಾದಾಗ
ಹುಳಿಯಲ್ಲವೆ ದ್ರಾಕ್ಷಿ ಕೈಗೆ ನಿಲುಕದಿದ್ದಲಿ
ಮಿನುಗುವ ನಕ್ಷತ್ರಗಳುಳ್ಳ
ಆಗಸದಿ ಕತ್ತಲವಷ್ಟೇ ಗೋಚರಿಸುವದೇಕೆ?
ಹುಡುಕೋಣ ಹಸನಾದ ಬದುಕ
ಕತ್ತಲು ತುಂಬಿದ ಬದುಕಲಿ ಬೆಳಕ
ಕಂಡಂತೆ

Read more...

ನಿನ್ನ ನೆನಪು

ನೆನಪು ಕಾಳುಗಳ
ಮುಷ್ಠಿಯಲಿ ಹಿಡಿದು
ಮುಕ್ಕು ಮಾಡಿ ಕಲ್ಲಿನೊಳು
ಹಾಕಿ ಗರಗರನೆ ತಿರುಗಿಸಿದರೆ
ಮತ್ತೆ-ನೀನೋ
ಬಿದ್ದ ಕೆಳ ಸೀರೆ ಪದರೊಳು
ಜಲ್ಲನೆ ಉದುರುತ್ತಿ
ನಿನ್ನ ನೆನಪ ಹುಡಿ ಹಾರಿಸುತ್ತೀ

Read more...

ಸಾವು

1
ನಾಡಿಯ ಮಿಡಿತ
ಭಾವನೆಯ ತುಡಿತ
ಒಮ್ಮೆಲೇ ನಿಲ್ಲಿಸಿ
ಬಿಡುವ ಗಾರುಡಿಗ
2
ದೇಹ ಮನಸ್ಸುಗಳ
ನಿಸ್ತೇಜಗೊಳಿಸುವ
ಆವರಿಸುವ ಘೋರ
ಕಾರ್ಗತ್ತಲು
3
ಕನಸುಗಳ ಹೆಣೆಯುತ್ತ
ನನಸುಗೊಳಿಸುವ
ಹವಣಿಕೆಯಲಿರುವಾಗಲೇ
ಅನಿರೀಕ್ಷಿತವಾಗಿ ಬಡಿಯುವ
ಸಿಡಿಲು.

Read more...

ಬತ್ತಿ ಹೋಗಲಿ ಕಣ್ಣೀರು

ಬತ್ತಿ ಹೋಗಲಿ ಕಣ್ಣೀರು
ನಿತ್ಯ ಗೋಳನು ಕಂಡು
ಸುರಿಯದಂತೆ
ಯಾಕೆ ಅಳಬೇಕು ಹೃದಯ
ಸಿರಿಯಲಿ ಅಡಗಿದ್ದವರು
ತಿರುಗಿ ಬಾರದೆ ಹೋದರೆ
ಅತ್ತರೆ ಆತ್ಮ ಶಾಂತಿ
ಯಾರಿಗೆ?
ಅಳಿದವರಿಗೋ, ಉಳಿದವರಿಗೋ
ದು:ಖ-ದುಮ್ಮಾನ ನಿತ್ಯ ಕಾಡುತಲಿರಲು
ಅರ್ಥವೆಲ್ಲಿದೆ ಈ ಅಳುವಿಗೆ
ನರಳುವ ಜೀವಿಗಳ
ರಸ್ತೆ ಬದಿಯಲಿ ಛಳಿಯಲಿ
ಬೀಳುವವರ ಮೈನಡುಕವ ಕಂಡೋ
ದ್ಯಾಸದಲಿ ಕೊರಗುವ. ಅಕ್ಷರವ
ಅರಿಯದ ಅಮಾಯಕರ ದಂಡುಗಳ ಕಂಡೋ
ಅಳುವದು ಕೊರಗುವದು ಯಾರಿಗಾಗಿ
ಯಾರಿಗಾಗಿ?
ಅದಕೆ ಬೇಡವೇ ಬೇಡ
ಕಣ್ಣೀರು ಬತ್ತಿ ಹೋಗಲಿ
ಮತ್ತೆ ಚಿಮ್ಮದಂತೆ

Read more...

ಸಂಬಂಧಗಳು

>> Friday, April 23, 2010

1. ಸಂಬಂಧಗಳು
ಇವೆ
ಸುತ್ತಲೂ-
ಮೈರಕ್ತ ಹೀರುವ ತಿಗಣೆಗಳು
ತಲೆತುಂಬ ಮುತ್ತುವ ಹೇನುಗಳು
ಹೆಕ್ಕಿ ಹೆಕ್ಕಿ ಕೊಲ್ಲುವ ಹದ್ದುಗಳು
ಮತ್ತೆ
ಎಲ್ಲ ಇವು ಇಷ್ಟೂ ಸಾಲದೇ
ಚಿಕ್ಕಾಡು ಗುಂಗಾಡು-ನೊರಜುಗಳ
ಕೈ ಮಾಡಿ ಕರೆದು ಇದ್ದ ಜಾಗವನ್ನೆ
ಅಗಲಿಸಿ ಭರ್ತಿ ಮಾಡಿಕೊಳ್ಳುತ್ತವೆ.
ಇವೆಲ್ಲವಕ್ಕೂ ಕೊಳ್ಳಿ ಇಟ್ಟು
ಸುಟ್ಟು ಬಿಡಬೇಕು ಎಂದಾಗಲೆಲ್ಲ-
ಅದೇನೋ ಅವ್ಯಕ್ತ ಮನ ಒಡ್ಡುವ
ಮೌನ ವಿರೋಧ ನೆನಸಿಕೊಂಡಾಗ
ಅಂದುಕೊಳ್ಳುತ್ತೇನೆ.
ಇವು ನನ್ನ ವಿಚಿತ್ರ ಚಿತ್ರಹಿಂಸೆಗೆ
ಒಳಪಡಿಸುವ ಮತ್ತೆ, ಮತ್ತೆ ಸೆಳೆಯುವ
ಸಂಬಂಧಗಳು.

2. ಸಂಬಂಧಗಳು
ಬಿಗಿಯಾಗಿ ಎಳೆದುಬಿಟ್ಟ
ಸರಕು ಗಂಟು
ಬಿಚ್ಚಲೆತ್ನಿಸಿದಷ್ಟೂ
ಕಗ್ಗಂಟು

Read more...

ನಗ್ನ ಸತ್ಯ


ನಿನ್ನ ವಿಕಾರ ಕಣ್ಣನ್ನು
ನಕ್ಷತ್ರ ಎಂದೆ
ನಿನ್ನ ಜೋಲು ಮುಖ
ಚಂದಿರನೆಂದೆ
ನಿನ್ನ ತೋಲು ಮೈ
ಬಳುಕುವ ಬಳ್ಳಿ ಎಂದೆ
ನಿನ್ನ ಆನೆಯ ನಡಿಗೆ
ನವಿಲಿನ ನಾಟ್ಯ ಎಂದೆ
ಅಪ್ಸರೆ, ರತಿ ಚೆಲುವೆ
ಎಂದೆಲ್ಲ ಹೊಗಳಿ ಹಾಡಿದೆ
ಯಾಕೆ?
ವಾಸ್ತವ ಹೇಳಲೆ ಗೆಳತಿ?
ನಿನ್ನ ಮೇಲಿನ ಅಪ್ರತಿಮ
ಪ್ರೀತಿಯಿಂದಲ್ಲ, ನನ್ನ ಪ್ರೇಮ
ಕುರುಡು ಅಲ್ಲ.
ನಿಮ್ಮಪ್ಪ ಕೊಡಿಸಿದ ನೌಕರಿ
ನೀ ತಂದ ಚಿನ್ನ - ಬೆಳ್ಳಿ
ಕೊಡಿಸಿದ ಕಾರು-ಬಂಗಲೆ
ಎಲ್ಲ ಪ್ರೀತಿಯೆನಗೆ ಅದೇ
ಅಪ್ಪಟ ಚೆಲುವೆನಗೆ

Read more...

ಕುಡಿದು ಸಾಯೋಣ



ಸಂತೋಷದ ವಿಷಯ
ಹೊಸ ವರುಷದಂದು ಶೆರೆ ಕುಡಿದು
ಸತ್ತವರಿಗೆ ಹತ್ತುಸಾವಿರ ಬಹುಮಾನ.
ಕುಡಿಯೋಣ ಎಲ್ಲರೂ
ಕುಡಿ,ಕುಡಿದು ಸಾಯೋಣ
ಅಯ್ಯೋ ಪಾಪ!
ಕುಡಿದು ಸತ್ತ
ಎಂದನುಕಂಪವ ತೋರಿ
ಘೋಷಿಸುವರು ಪರಿಹಾರ ಧನವ
ಹಗಲಿರುಳು ಬೆವರು ಸುರಿದ
ವರಿಗೆಲ್ಲ ಈ ದೇಶದ
ಬೊಕ್ಕಸದಿ ಹಣ
ಓದಿ, ಬರೆದು ಇಳಿವಯದಲ್ಲಿ
ಪಡೆಯುವ ಸಾಹಿತಿಗೆ ಬರೀ
ಸಾವಿರ ಪ್ರಶಸ್ತಿ ಹೆಸರಲಿ!
ಅದಕೆ ಕುಡಿಯೋಣ ಎಲ್ಲರೂ
ದುಡಿಯೋದ ಬಿಟ್ಟು ಖಾದಿಗಳು
ನೀಡುವ ಪರಿಹಾರಕೆ

Read more...

ಯಾರಿವನು?

>> Tuesday, April 20, 2010

ಹೇಸಿಗೆ ಮೇಲೆ ಕುಳಿತಿರುವ
ಘಮಘಮ ಪರಿಮಳ
ಹೀರಿದ ತೆರದಿ ನಗೆ ಬೀಸುವ
ಮಾತಲಿ ಮನೆ ಕಟ್ಟುವ
ಮನದಲಿ ಗೋರಿಗಡಿಗಲ್ಲಿಡುವ
ಪರರ ಧನ, ಸ್ತ್ರೀ, ಆಸ್ತಿ
ಎಲ್ಲವ ತನ್ನದೆಂದು ಬಗೆವ
ಕಾಲಕ್ಕೊಂದು ಬಗೆಬಗೆಯ ವೇಷದಿ
ಮೆರೆವ
ಒಮ್ಮೊಮ್ಮೆ ಓಟಿಗಾಗಿ ನೋಟ
ಹಂಚಿ ಭಿಕ್ಷೆಯನೂ ಬೇಡುವ ಹೈ
ಕ್ಲಾಸ್ ಭಿಕ್ಷುಕ
ರಾಷ್ಟ್ರದ ಧನಧಾನ್ಯ
ಲೂಟಿಯಾಗಿಸಲು ಸನ್ನದ್ಧನಾಗಿರುವ
ಭಂಡನಿವ.
ಬಿಟ್ಟಿದ್ದಾನೆ ನಾಚಿಕೆ, ಭಯ
ಆತ್ಮಸಾಕ್ಷಿಯ
ಇಹದ ಸಂಪತ್ತೆಲ್ಲಾ ಎಲ್ಲೆಲ್ಲೊ
ಅಡಗಿಸಿ ಮೆರೆವ ತಲೆಹಿಡುಕನಿವ
ಅಂತೂ, ಇಂತೂ, ಹೀಗೋ ಹೇಗೋ
ಮೆರೆದು ಮರೆಯಾಗುವ ರಾಷ್ಟ್ರಕೆ ಹಿಡಿದಿರುವ
ಅಳಿಸಲಾಗದ ಗ್ರಹಣನಿವ
.

Read more...

CURRICULAM VITAEProf. Siddu. B. YapalaparviDepartment of English,Sangatya Prakashana,Kalasapur Road,GADAG – 582103Cell No: 9448358040siddu.yapalaparvi@rediffmail.com,siddu.yapal@gmail.comTo be in the world of hegemony of cultural and social life I desire to have a paradigm shift from teacher to a master trainer with nobility of thought and knowledge of current context that would enable me to serve my institution and world with true sense of dedication and benevolence by imbibing the splendid soft skills adopting modern compu-tech facilities to poster and nourish the future generation. Building a bridge between rural and urban areas by narrowing the gap of cultural sensitivity and making them the excellent human beings is of prime importance being blessed by His Holiness Dr. Siddhalingaswamiji, the sober saint of Kannada and the great poet Dr. Siddhalinga Pattanashetti whose nourishment is often cherished with reverences and the lovely blessings of my father Shri. Basavarajappa and benign mother Smt. Parvatamma.Born:On 12-04-1965 at Karatagi, Koppal District, Karnataka State, India.Education:Ph. D. (Registered under Dr. M. M. Kalaburgi) 2006M. B. A. (Human Resource Management) 2006M. A. (English Literature) 1989Profession:Lecturer in English, K. V. S. R. P. U. College, Gadag- Teaching English with fun to the rural and Kannada Medium students in simple and fluent languageGuest Faculty, P. G. Department of English, K. S. S. College, GadagLiterary Works:Nelada Mareya Nidhana – a collection of poems in Kannada (2007) language which has created euphoria among the readers through out the state.Naanonda Kanasa Kande – a collection of poems in Kannada (2009) language with the heart and soul of feminine perspective.“Ettana Mamara Ettana Kogile”, Travelogue on England in Kannada (2009), Sangatya Publication, Gadag.World on Tour:Having firm belief in the maxim, “Trail the nation or read the Book” I have set my prints in religious, educational and social organizations by establishing rapport trough conferences and discussions in Andra Pradesh, Tamil Nadu, West Bengal, Delhi, Himachal Pradesh, Haryana, Maharashtra and Uttaranchal states of India.Recently I visited England during summer 2008 and paid visit to the monuemental centres and houses of Shakespeare and Dove Cottage of William Wordsworth. I have the first hand knowledge of places and public affairs. I am happy to state that I have been writing a travelogue “Ettana Mamara Ettana Kogile” in Kannada which is published in the form of serial in Vikrant, a well known periodical in Kannada literature today edited genius thinker, orator and writer Prof. Ravindra Reshme.Public Lectures:Delivered thousands together public speeches on Vachana Literature in Kannada and English with great ideologies those have shaped many lives across the country.Personality Development Programmes:Conducted many PDPs for four to six hours at a stretch with light homour to students and officers of Government and NGOs to promote their potentialities to improve the work culture It has been extended to College Teachers, Counselling Centres and Corporate World.To Ink to Think:‘A poem a week, a story a month and a critical article a fort-night’ – this practice has kept me cheerful contributing to all forms of literature.Articles on Politics:Contributed many articles on present day political dogmas to the journals and papers and served as an Advisor to Editor of Vikrant Karnataka by reporting and supporting with interviews and recent burning issues.Editor:Edited felicitation Books viz.,“Manohar”, the life and achievements of the great artist shri Manohar. Kadlikoppa“Stri Sahitya Sourabha” – a souvenir of Lakkundi Festival“Sadhaka”- the life and achievements of an educationist Shri. S. N. KatarakiStage Play:Enacted various roles in plays with great vigour organized by Amateur Artists GroupsEducational Advisor:Being on the Board of Advisors of various educational institutions like Jagdguru Shivanand P. U. College of Science, Gadag, Shantiniketan Shikshana Samsthe, Gadag and Sadhana Mahila Shikshana Seva Samsthe, Gadag, strived hard to bring in an excellent quality among all stakeholders.Founder of Various Associations:Samarasa Balaga – a cultural organistionCreative school of Communication Management – Training Centre for PDPs.Rangadarshana Kala Tanda- Centre for Stage Activities.Kind Pariwar – NGOShantiniketan Shikshana Samsthe – Centre for Ideal Primary EducationSadhana Mahila Shikshana Seva Samsthe – NGO for Women and Child Empowerment.Sangatya Publication, GadagGoverning Council Member:Served as member of Governing Council of Kannada University, Hampi from 1999 to 2002National Award:Conferred National Award and Silver Medal for extending Excellent Training as an Additional Charge Officer at Division of Census SurveyGoal and Objective:Life is not the stagnant water. Constant Study, Crystal Clear Behaviour, Positive Attitude and Dedicated Service are the keys to my successful life keeping abreast with Steadiness of Good Earth and sacrificing rewards to sacred souls and regretting follies to my own.
Posted by siddu yapalaparavi at 12:54 AM 0 comments
Labels:
Friday, February 5, 2010

ಪ್ರೊ. ಸಿದ್ದು ಯಾಪಲಪರವಿ
ರಾಷ್ಟ್ರಪ್ರಶಸ್ತಿ ಪುರಸ್ಕೃತ ತರಬೇತುದಾರ
ಪ್ರೊ. ಸಿದ್ದು ಯಾಪಲಪರವಿ
ಕವಿ,ಬರಹಗಾರ,ವಿಮರ್ಶಕ,ವ್ಯಕ್ತಿತ್ವ ವಿಕಸನ ತರಬೇತುದಾರರು
ಕೊಪ್ಪಳ ಜಿಲ್ಲೆ ಕಾರಟಗಿ ಗ್ರಾಮದ ವ್ಯಾಪಾರಿ ಪರಿವಾರದಲ್ಲಿ ೧೨-೪-೧೯೬೫ ರಂದು ಜನನ. ಬಸವರಾಜಪ್ಪ ಹಾಗೂ ಪಾರಮ್ಮನವರ ಹಿರಿಯ ಪುತ್ರ. ಕಾರಟಗಿಯ ಸರಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ಶಿಕ್ಷಣ. ದಡ್ಡ ವಿದ್ಯಾರ್ಥಿ ಎಂಬ ಹೆಗ್ಗಳಿಕೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಮುಂದಿದ್ದರೂ ಇಂಗ್ಲಿಷ್ ಹಾಗೂ ವಿಜ್ಞಾನ ವಿಷಯಗಳ ವಿಫಲತೆ ಹೆಚ್ಚಿನ ವ್ಯಾಸಂಗಕ್ಕೆ ಪ್ರೇರಣೆ. ಇಂಗ್ಲ್ಲಿಷ್ ಕಲಿಯಬೇಕೆಂಬ ಛಲ. ಪರಮಪೂಜ್ಯ ಜಗದ್ಗುರು ಡಾ. ಸಿದ್ಧಲಿಂಗ ಮಹಾಸ್ವಾಮಿಗಳು ಹಾಗೂ ಖ್ಯಾತ ಕವಿ ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ ಅವರಿಂದ ಅಪರೂಪದ ಪ್ರೇರಣೆ-ಮಾರ್ಗದರ್ಶನ. ಧಾರವಾಡ ಕರ್ನಾಟಕ ಕಾಲೇಜಿನಲ್ಲಿ ವ್ಯಾಸಂಗ ಹಂತ ಹಂತವಾಗಿ ಯಶಸ್ಸು. ಕಳೆದ ಎರಡೂವರೆ ದಶಕಗಳ ಹೋರಾಟದ ಅನುಭವ ಅನನ್ಯ.
ಶಿಕ್ಷಣ : ಪಿಎಚ್.ಡಿ (ನೋಂದಣಿ ಡಾ. ಎಂ.ಎಂ. ಕಲಬುರ್ಗಿಯವರ ಮಾರ್ಗದರ್ಶನದಲ್ಲಿ) ೨೦೦೬
ಎಂ.ಬಿ. ಎ (ಮಾನವ ಸಂಪನ್ಮೂಲ ನಿರ್ವಹಣೆ) ೨೦೦೬
ಎಂ. ಎ. (ಇಂಗ್ಲಿಷ್ ಸಾಹಿತ್ಯ) ೧೯೮೯.
ವೃತ್ತಿ : ಇಂಗ್ಲಿಷ್ ಉಪನ್ಯಾಸಕ
ಸಧ್ಯ ಕೆ. ವಿ ಎಸ್. ಅರ್. ಕಾಲೇಜಿನಲ್ಲಿ ಇಂಗ್ಲಿಷ್ ಉಪನ್ಯಾಸಕರಾಗಿ ಸೇವೆಯಲ್ಲಿ. ಗ್ರಾಮೀಣ ವಿದ್ಯಾರ್ಥಿಗಳಿಗಾಗಿ ಹಾಗೂ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಸುಲಭವಾಗಿ, ಸರಳ ಬೋಧನೆ, ನವಿರು ಹಾಸ್ಯದ ಮೂಲಕ ಇಂಗ್ಲಿಷ್ ಕಲಿಕೆಗೆ ಪ್ರೇರಣೆ.
ಪ್ರಕಟಿತ ಕೃತಿಗಳು : 'ನೆಲದ ಮರೆಯ ನಿಧಾನ', 'ನಾನೊಂದ ಕನಸ ಕಂಡೆ ' ಕವನ ಸಂಕಲನಗಳ , 'ಎತ್ತಣ ಮಾಮರ ಎತ್ತಣ ಕೋಗಿಲೆ' ಇಂಗ್ಲೆಂಡ್ ಪ್ರವಾಸ ಕಥನ
ಜಾಗತಿಕ ಸಂಚಾರ : 'ದೇಶ ನೋಡು ಕೋಶ ಓದು' ಎಂಬ ವಾಣಿಯಂತೆ ೨೦೦೮ ರಲ್ಲಿ ಅನಿವಾಸಿ ಭಾರತೀಯರ ಆಹ್ವಾನದ ಮೇರೆಗೆ ಇಂಗ್ಲೆಂಡ್, ಸ್ಕಾಟ್‌ಲ್ಯಾಂಡ್, ಐರ್‍ಲೆಂಡ್ ಹಾಗೂ ವೇಲ್ಸ್ ದೇಶಗಳಿಗೆ ಭೇಟಿ. ದೇಶದ ತುಂಬೆಲ್ಲಾ ಸಂಚಾರ ಅಂದ್ರ, ಕೇರಳ, ಪಂಜಾಬ,ಪಶ್ಚಿಮ ಬಂಗಾಳ, ದೆಹಲಿ, ಹಿಮಾಚಲ ಪ್ರದೇಶ, ಹರಿಯಾಣ, ಮಹಾರಾಷ್ಟ್ರ ಹಾಗೂ ಉತ್ತರಾಂಚಲ ರಾಜ್ಯಗಳಿಗೆ ಭೇಟಿ. ಅಲ್ಲಿನ ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಸಂಘಟನೆಗಳೊಂದಿಗೆ ಸಂವಾದ ಚರ್ಚೆ. ತನ್ಮೂಲಕ ರಚಿಸಿದ 'ಎತ್ತಣ ಮಾಮರ ಎತ್ತಣ ಕೋಗಿಲೆ' ಇಂಗ್ಲೆಂಡ್ ಪ್ರವಾಸ ಕಥನಕ್ಕೆ ಸಾಹಿತ್ಯಾಸಕ್ತರ ಹಾಗೂ ವಿಮರ್ಶಕರ ಮೆಚ್ಚುಗೆ.
ಪ್ರಶಸ್ತಿ,ಪುರಸ್ಕಾರ ; ಆಜೂರ ಪುಸ್ತಕ ಪ್ರತಿಷ್ಠಾನ ಪ್ರಶಸ್ತಿ
ಬೆಳಗಾವಿ ಜಿಲ್ಲೆಯ ಹಾರೋಗೇರಿಯ ಆಜೂರ ಪುಸ್ತಕ ಪ್ರತಿಷ್ಠಾನವು ರಾಜ್ಯಮಟ್ಟದ ಶ್ರೇಷ್ಠ ಕೃತಿಗಳಿಗೆ ಪುರಸ್ಕಾರವನ್ನು ನೀಡುತ್ತದೆ.ಪ್ರಸಕ್ತ ಸಾಲಿನ ಪ್ರಶಸ್ತಿಯನ್ನು 'ಎತ್ತಣ ಮಾಮರ ಎತ್ತಣ ಕೋಗಿಲೆ' ಇಂಗ್ಲೆಂಡ್ ಪ್ರವಾಸ ಕಥನಕ್ಕೆ ೨೦೦೯ ನೇ ಸಾಲಿನ ಶ್ರೇಷ್ಠ ಪುಸ್ತಕ ಪ್ರಶಸ್ತಿ ನೀಡಿದೆ.
ಸಾವಿರಕ್ಕೂ ಹೆಚ್ಚು ಉಪನ್ಯಾಸಗಳು
ಭಾಷಣಗಳೆಂದರೆ ಅವರಿವರು ಹೇಳಿದ ಧ್ಯೇಯ ವಾಕ್ಯಗಳ ಪುನರುಚ್ಚಾರಣೆ ಅಲ್ಲ ಎಂಬ ನಂಬಿಕೆ. ವಚನ ಚಳುವಳಿ ಕುರಿತು ಸಾವಿರಕ್ಕೂ ಹೆಚ್ಚು ವಿಚಾರಪೂರ್ಣ ಉಪನ್ಯಾಸಗಳು, ಕನ್ನಡ ಹಾಗೂ ಇಂಗ್ಲ್ಲಿಷ್ ಭಾಷೆಗಳಲ್ಲಿ ಮನ ಮುಟ್ಟುವಂತೆ ವೈಚಾರಿಕವಾಗಿ ಪ್ರತಿಪಾದನೆ.
ವ್ಯಕ್ತಿತ್ವ ವಿಕಸನ ತರಬೇತಿ : ನಾಲ್ಕಾರು ತಾಸುಗಳವರಗೆ ನಿರರ್ಗಳವಾಗಿ ತರಬೇತಿ ನೀಡುವ ಸಾಮರ್ಥ್ಯ, ನವಿರು ಹಾಸ್ಯ, ಮನ ಮುಟ್ಟುವ ನಿರೂಪಣೆ ನೇರ ಸಂವಹನಕ್ಕಾಗಿ ಹೆಸರುವಾಸಿ. ವಿದ್ಯಾರ್ಥಿಗಳು,ಸರಕಾರಿ ಹಾಗೂ ಸರಕಾರೇತರ ಸಂಸ್ಥೆಗಳ ಅಧಿಕಾರಿಗಳಿಗೆ ವ್ಯಕ್ತಿತ್ವ ವಿಕಸನ ತರಬೇತಿ ಸಕರಾತ್ಮಕ ಧೋರಣೆ ಕುರಿತು ವಿಶೇಷ ಅಧ್ಯಯನ.
ಹರಿತ ಲೇಖನಿ, ಮೊನಚು ವಿಚಾರಗಳು : ನಿರಂತರ ಪದ್ಯ, ಕಥೆ ಹಾಗೂ ವಿಮರ್ಶೆ ಹೀಗೆ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿ ಕೃಷಿ.ರಾಜಕೀಯ ಅಂಕಣಗಳು:ನಾಡಿನ ವಿವಿಧ ಪತ್ರಿಕೆಗಳಲ್ಲಿ ರಾಜಕೀಯ ಅಂಕಣಗಳು ವಿಕ್ರಾಂತ ಕರ್ನಾಟಕ' ವಾರಪತ್ರಿಕೆಯ ಸಂಪಾದಕ ಸಲಹೆಗಾರರಾಗಿ ಸಾಂದರ್ಭಿಕ ಲೇಖನ ಹಾಗೂ ಸಂದರ್ಶನಗಳು.
ಸಾಕ್ಷ್ಯಚಿತ್ರಗಳ ನಿರ್ಮಾಣ : ದೂರದರ್ಶನ ಕೇಂದ್ರಕ್ಕಾಗಿ ವಾರ್ತಾ ಇಲಾಖೆಯ ಸಹಯೋಗದೊಂದಿಗೆ ಅವಲೋಕನ, ಭಾವೈಕ್ಯತೆ ಹಾಗೂ ನಮ್ಮೂರ ಜಾತ್ರೆ ಸಾಕ್ಷ್ಯ ಚಿತ್ರಗಳ ನಿರ್ದೇಶನ.
ಗ್ರಂಥ ಸಂಪಾದನೆ :
ಕಲಾವಿದ ಮನೋಹರ ಕಡ್ಲಿಕೊಪ್ಪ ಅವರ 'ಮನೋಹರ' , ಲಕ್ಕುಂಡಿ ಉತ್ಸವದ 'ಸ್ರ್ತೀ ಸಾಹಿತ್ಯ ಸೌರಭ', ಶಿಕ್ಷಣ ತಜ್ಞ ಎಸ್. ಎನ್ ಕಾತರಕಿಯವರ 'ಸಾಧಕ', ಅಭಿನಂದನಾ ಗ್ರಂಥಗಳ ಸಂಪಾದನೆ.
ದೂರದರ್ಶನ ಸಂದರ್ಶನ:
ಚಂದನ ವಾಹಿನಿಯ ಬೆಳಗು ಪರಿಚಯ ಮಾಲಿಕೆಯಲ್ಲಿ ಸಂದರ್ಶನದ ನೇರ ಪ್ರಸಾರದ ಮೂಲಕ ವ್ಯಕ್ತಿತ್ವದ ಸಮಗ್ರ ಪರಿಚಯ.
ರಂಗಾಭಿನಯ : ರಾಜ್ಯದ ವಿವಿಧ ಕಲಾತಂಡಗಳಲ್ಲಿ ವೈವಿದ್ಯಮಯ ಪಾತ್ರಗಳ ನಿರ್ವಹಣೆ.
ಶೈಕ್ಷಣಿಕ ಸಲಹೆಗಾರ:ವಗದುಗಿನ ಜಗದ್ಗುರು ಶಿವಾನಂದ ವಿಜ್ಞಾನ ಕಾಲೇಜಿನ ಸಲಹೆಗಾರರಾಗಿ ಹೊಸ ವಿಚಾರಗಳ ಆವಿಷ್ಕಾರ ಹಾಗೂ ಅನುಷ್ಠಾನ. ನಾಡಿನ ವಿವಿಧ ಸಂಸ್ಥೆಗಳ ಮೂಲಕ ವಿನೂತನ ಶೈಕ್ಷಣಿಕ ಕಲಿಕಾ ನಿರ್ವಹಣೆ.
ವಿವಿಧ ಸಂಘಟನೆಗಳ ಸಂಸ್ಥಾಪಕ:
ಸಮರಸ ಬಳಗ (ಸಾಂಸ್ಕೃತಿಕ ಸಂಘಡನೆ) ಕ್ರಿಯೇಟಿವ್ ಸ್ಕೂಲ್ ಆಫ್ ಕಮ್ಯೂನಿಕೇಶನ್ ಮ್ಯಾನೇಜ್‌ಮೆಂಟ್ ( ವ್ಯಕ್ತಿತ್ವ ವಿಕಸನ ತರಬೇತಿ ಸಂಸ್ಥೆ) ರಂಗದರ್ಶನ ಕಲಾತಂಡ (ರಂಗ ಚಟುವಟಿಕೆಗಳ ಕೇಂದ್ರ) ಕೈಂಡ್ ಪರಿವಾರ (ಸ್ವಯಂ ಸೇವಾ ಸಂಸ್ಥೆ).
ಆಡಳಿತ ಮಂಡಳಿಯ ಸದಸ್ಯರು : ಹಂಪಿ ಕನ್ನಡ ವಿಶ್ವವಿದ್ಯಾಲಯ
೧೯೯೯ ರಿಂದ ೨೦೦೨ ರವರೆಗೆ ಆಡಳಿತ ಮಂಡಳಿಯ ಸದಸ್ಯರಾಗಿ ಕಾರ್ಯ ನಿರ್ವಹಣೆ. ವಿಶ್ವವಿದ್ಯಾಲಯದ ವಿವಿಧ ಸಮಿತಿಗಳ ಸದಸ್ಯರಾಗಿ ಮಾರ್ಗದರ್ಶನ.
ಜಿಲ್ಲಾ ಸಂಚಾಲಕರು ಬೆಳ್ಳಿಮಂಡಲ,೨೦೦೯ ರಿಂದ ಕರ್ನಾಟಕ ಚಲನಚಿತ್ರ ಅಕಾಡೆಮಿಯ ಜಿಲ್ಲಾ ಸಂಚಾಲಕರಾಗಿ ಬೆಳ್ಳಿಮಂಡಲ ಫಿಲ್ಮ ಸೊಸಾಟಿಯ ಸ್ಥಾಪನೆ. ಸಿನೆಮಾ ಹಾಗೂ ಸಾಹಿತ್ಯ, ಸಿನೆಮಾ ಹಾಗೂ ಶಿಕ್ಷಣ ಕುರಿತು ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಣೆ.
ಪುರಸ್ಕಾರ : ಜನಗಣತಿ ವಿಭಾಗದಲ್ಲಿ ಎಡಿಶನಲ್ ಚಾರ್ಜ ಆಫೀಸರ್ ಎಂದು ಕರ್ತವ್ಯ ನಿರ್ವಹಿಸಿ ಉತ್ತಮ ತರಬೇತಿ ನೀಡಿದ್ದಕ್ಕಾಗಿ ರಾಷ್ಟ್ರೀಯ ಪುರಸ್ಕಾರ ಹಾಗೂ ಬೆಳ್ಳಿ ಪದಕ.
ವ್ಯಕ್ತಿತ್ವ ವಿಕಸನ ತರಬೇತುದಾರ :
ಕ್ರಿಯೇಟಿವ್ ಸ್ಕೂಲ್ ಆಫ್ ಕಮ್ಯೂನಿಕೇಶನ್ ಮ್ಯಾನೇಜಮೆಂಟ್ ಸಂಸ್ಥೆಯ ಮೂಲಕ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ, ಅಧಿಕಾರಿಗಳಿಗೆ, ಸರಕಾರೇತರ ಸಂಸ್ಥೆಗಳ ಸಮಾಜ ಸೇವಕರಿಗೆ ವ್ಯಕ್ತಿತ್ವ ವಿಕಸನ ತರಬೇತಿ, ಒಂದು ದಿನ, ಎರಡು ದಿನ ಹಾಗೂ ಮೂರು ದಿನಗಳ ಅವಧಿಯ ವಿಕಸನ ತರಬೇತಿ ಪಠ್ಯಕ್ರಮ. ದಿನಕ್ಕೆ ಆರರಿಂದ ಎಂಟು ತಾಸುಗಳವರೆಗೆ ನಿರಂತರ ತರಬೇತಿ ನೀಡುವ ಸಾಮರ್ಥ್ಯ.
" ಯುರೋಪ್‌ನ ಇಂಗ್ಲೆಂಡ್ ದೇಶದ ವಿವಿಧ ಶೈಕ್ಷಣಿಕ ಸಂಸ್ಥೆಗಳ ಕೌನ್ಸೆಲಿಂಗ್ ಕೇಂದ್ರಗಳಿಗೆ ಭೇಟಿ, ವಿಶೇಷ ಅಧsಯನ.
" ಮಾನವ ಶಾಸ್ತ್ರ, ಮಾನಸ ಶಾಸ್ತ್ರಗಳ ವಿಷಯಗಳಲ್ಲಿ ಆಳವಾದ ಆಸಕ್ತಿ, ಸಕಾರಾತ್ಮಕ ಧೋರಣೆಯನ್ನು ಪ್ರತಿಪಾದಿಸಲು ವಚನ ಸಾಹಿತ್ಯವನ್ನು ಆಧರಿಸಿದ ವಿಶೇಷ ಉದಾಹರಣೆ.
" ಪದವಿ, ಸ್ನಾತಕೋತ್ತರ, ಮ್ಯಾನೇಜಮೆಂಟ್ ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನ ಕಾರ್ಯಕ್ರಮಗಳ ಆಯೋಜನೆ ಸಾವಿರಾರು ವಿದ್ಯಾರ್ಥಿಗಳಿಗೆ, ಐದನೂರಕ್ಕೂ ಹೆಚ್ಚು ಶಿಕ್ಷಕರಿಗೆ ನೂರಾರು ಅಧಿಕಾರಿಗಳಿಗೆ .
" ಕೆ. ಎಲ್. ಇ. ಸಂಸ್ಥೆಯ ಶಿಕ್ಷಣ ಸಂಸ್ಥೆಗಳು, ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿಗಳ ಹಾಗೂ ಎನ್. ಸಿ. ಸಿ. ವಿದ್ಯಾರ್ಥಿಗಳಿಗೆ.
" ಜೆ. ಎಸ್. ಎಸ್. ವಿದ್ಯಾಪೀಠ ಸುತ್ತೂರಿನಲ್ಲಿ ಆಯೋಜಿಸಿದ್ದ ಶಿಕ್ಷಕರ ವ್ಯಕ್ತಿತ್ವ ವಿಕಸನ ತರಬೇತಿಯಲ್ಲಿ ವಿಶೇಷ ಉಪನ್ಯಾಸ. ದೇಶದ ವಿವಿಧ ರಾಜ್ಯಗಳ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಿಗೆ ಕನ್ನಡ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ತರಬೇತಿ ನೀಡಿದ ಹೆಗ್ಗಳಿಕೆ.
" ಕರ್ನಾಟಕ ಸರಕಾರದ ಗ್ರಾಮೀಣಾಭಿವೃಧ್ದಿ ಹಾಗೂ ಪಂಚಾಯತ್ ರಾಜ್ ಇಲಾಖೆ, ವಯಸ್ಕರ ಶಿಕ್ಷಣ ಇಲಾಖೆ, ಕೇಂದ್ರ ಸರಕಾರದ ಜನಗಣತಿ ಇಲಾಖೆಯ ವಿವಿಧ ಅಧಿಕಾರಿಗಳಿಗೆ.
" ಸಕಾರಾತ್ಮಕ ಧೋರಣೆ, ಮನೋನಿಗ್ರಹ, ಸಂವಹನ ಕೌಶಲ್ಯ, ಟೈಮ್ ಮ್ಯಾನೇಜಮೆಂಟ್ ಇಂಗ್ಲಿಷ್ ಭಾಷಾ ಕೌಶಲ್ಯಗಳ ಕುರಿತು ಕರ್ನಾಟಕ ಸರಕಾರದ ಶಿಕ್ಷಣ ಇಲಾಖೆಯ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ತರಬೇತಿ. ಪಾರದರ್ಶಕ ನಿಲುವು ಮತ್ತು ವ್ಯಕ್ತಿತ್ವ ವಿಕಸನದ ಕುರಿತು ವಿಷಯ ಪರಿಣಿತಿ.
" ಜಗದ್ಗುರು ಶಿವಾನಂದ ವಿದ್ಯಾವರ್ಧಕ ಸಂಸ್ಥೆಯ ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳಿಗೆ ಕೌನ್ಸೆಲಿಂಗ್ ಕೇಂದ್ರದ ಮೂಲಕ ವಿದ್ಯಾರ್ಥಿಗಳ ಮನೋವಿಕಾಸಕ್ಕೆ ವಿಶೇಷ ಅಧ್ಯಯನ ಯೋಜನೆ ನಿರ್ವಹಣೆ.
" ಹಂಪಿ ಕನ್ನಡ ವಿಶ್ವವಿದ್ಯಾಲಯ ಪದವಿ ಕಾಲೇಜು ಉಪನ್ಯಾಸಕರಿಗಾಗಿ ಆಯೋಜಿಸಿದ್ದ ಪುನರ್ ಮನನ ಶಿಬಿರದಲ್ಲಿ ವಿಶೇಷ ಉಪನ್ಯಾಸಗಳು.
" ಕನಕದಾಸ ಶಿಕ್ಷಣ ಸಮಿತಿಯ ಇಂಗ್ಲಿಷ್ ಸ್ನಾತಕೋತ್ತರ ಅಧ್ಯಯನ ಕೇಂದ್ರ (ಕರ್ನಾಟಕ ವಿಶ್ವವಿದ್ಯಾಲಯ) ದಲ್ಲಿ ಅತಿಥಿ ಪ್ರೊಫೆಸರ್.
" ಧ್ಯಾನ, ಪ್ರಾಣಾಯಾಮಗಳೊಂದಿಗೆ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಂಗೀತ, ವಿಡಿಯೋ ಸಾಧನಗಳ ಬಳಕೆಯ ಮೂಲಕ. ಕರ್ನಾಟಕ, ಆಂದ್ರ ಹಾಗೂ ತಮಿಳುನಾಡಿನ ವಿವಿಧ ಬಿ. ಎಡ್., ಡಿ. ಎಡ್. ವಿದ್ಯಾರ್ಥಿಗಳಿಗೆ 'ಕ್ಲಾಸ್‌ರೂಮ್ ಕಲ್ಚರ್' ಕುರಿತು ವಿಶೇಷ ಉಪನ್ಯಾಸ.
" ಗದಗ ಜಿಲ್ಲೆಯ ೨೦೦ ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಬೀದಿ ನಾಟಕಗಳ ಮೂಲಕ ಜನಜಾಗೃತಿ ಜಾತಾದ ನಾಯಕತ್ವ.
" ೨೦೦೧ ಹಾಗೂ ೨೦೦೨ರ ಸಾಲಿನ ಜನಗಣತಿಯಲ್ಲಿ ಸ್ಪೆಶಲ್ ಎಡಿಶನಲ್ ಚಾರ್ಜ್ ಆಫೀಸರ್ ಆಗಿ ಕರ್ತವ್ಯ ನಿರ್ವಹಣೆ ಎನ್ಯೂಮರೇಟರ್ಸ್ ಹಾಗೂ ಸುಪರ್‌ವೈಜರಗಳಿಗೆ ತರಬೇತಿ ನೀಡಿದ್ದಕ್ಕೆ ಭಾರತ ಸರಕಾರದ ಗೃಹ ಇಲಾಖೆಂದ ಬೆಸ್ಟ್ ಎಡಿಶನಲ್ ಚಾರ್ಜ್ ಅಫೀಸರ್ ಎಂದು ರ್‍ಟ್ರಾಯ ಪುರಸ್ಕಾರ ಹಾಗೂ ಬೆಳ್ಳಿ ಪದಕ.
ಯುರೋಪ್‌ನ ಇಂಗ್ಲೆಂಡ್, ಸ್ಕಾಟ್‌ಲ್ಯಾಂಡ್, ಐರ್‍ಲೆಂಡ್ ಹಾಗೂ ವೇಲ್ಸ್ ದೇಶಗಳ ಭೇಟಿ :
ಇಂಗ್ಲಿಷ್ ಕಲಿಕಾ ಬೋಧನೆ, ವ್ಯಕ್ತಿತ್ವ ವಿಕಸನ ತರಬೇತಿ, ವಚನ ಚಳುವಳಿ ಹಾಗೂ ಜಾಗತೀಕರಣದ ಹಿನ್ನಲೆಯಲ್ಲಿ ಅಸ್ಖಲಿತ ಉಪನ್ಯಾಸ ನೀಡುವ ಇವರಿಗೆ ಪ್ರಸ್ತುತ ಪ್ರವಾಸ ಹೆಚ್ಚು ನೆರವಾಗಿದೆ. ವೃತ್ತಿಯಿಂದ ಪದವಿ ಪೂರ್ವ ಶಿಕ್ಷಣ ಇಲಾಖೆಯ ಅನುದಾನಿತ ಕೆ. ವಿ. ಎಸ್. ಆರ್. ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿರುವ ಸಿದ್ದು ಯಾಪಲಪರವಿಯವರ ಶ್ರದ್ಧೆ, ಆಸಕ್ತಿ, ಅಂತರಾಷ್ಟ್ರೀಯ ಸಂಬಂಧಗಳ ಮೂಲಕ ಸ್ನೇಹಿತರ ಹಾಗೂ ಬಂಧುಗಳ ನೆರವಿನಿಂದ ವೈಯಕ್ತಿಕವಾಗಿ ಹತ್ತಾರು ಸಾವಿರ ಮೈಲುಗಳನ್ನು ಕೇವಲ ೨೪ ದಿನಗಳಲ್ಲಿ ಸಂಚರಿಸಿದ್ದು ಸ್ಮರಣೀಯ.
ಅನಿವಾಸಿ ಭಾರತೀಯರ ಆಹ್ವಾನದ ಮೇರೆಗೆ ೨೦೦೮ ಮೇ ತಿಂಗಳಿನಲ್ಲಿ ಯುರೋಪ್‌ನ ಯುನೈಟೆಡ್ ಕಿಂಗ್‌ಡಮ್ ಪ್ರಾಂತದ ಇಂಗ್ಲೆಂಡ್, ಸ್ಕಾಟ್‌ಲ್ಯಾಂಡ್, ಐರ್‍ಲೆಂಡ್ ಹಾಗೂ ವೇಲ್ಸ್ ದೇಶಗಳಿಗೆ ಭೇಟಿ.
ವ್ಯಕ್ತಿತ್ವ ವಿಕಸನ ತರಬೇತುದಾರ, ಕವಿ ಹೃದಯದ ಸಿದ್ದು ಯಾಪಲಪರವಿ ಅವರಿಗೆ ಯುರೋಪ್ ಭೇಟಿ ವಿಶಿಷ್ಠ ಅನುಭವಗಳನ್ನು ಒದಗಿಸಿದೆ. ವೃತ್ತಿಂದ ಇಂಗ್ಲಿಷ ಉಪನ್ಯಾಸಕ; ಪ್ರವೃತ್ತಿಂದ ಕನ್ನಡದ ಬರಹಗಾರರಾಗಿರುವ ಕವಿಗೆ ಯುರೋಪ್ ಭೇಟಿ ಅನೇಕ ವಿನೂತನ ಆವಿಷ್ಕಾರಗಳನ್ನು ಒದಗಿಸಲು ಪೂರಕವಾತು.
ಅಲ್ಲಿನ ಜನ ಜೀವನ, ಶಿಕ್ಷಣ ಪದ್ಧತಿ ಸಂಸ್ಕೃತಿ ಕವಿ ಸಾಹಿತಿಗಳ ಐತಿಹಾಸಿಕ ಸ್ಥಳಗಳ ಭೇಟಿ, ಕೌನ್ಸೆಲಿಂಗ್ ಕೇಂದ್ರಗಳ ಕಾರ್ಯನಿರ್ವಹಣೆ ಹಾಗೂ ಪಾಶ್ಚಿಮಾತ್ಯ ಬದುಕಿನ ವಾಸ್ತವದ ಪರಿಣಾಮ ಅರಿಯಲು ಸಂಪೂರ್ಣ ಅಧ್ಯಯನದೊಂದಿಗೆ ಪ್ರಸ್ತುತ ಭೇಟಿಯನ್ನು ಬಳಸಿಕೊಳ್ಳಲಾತು. ಯುರೋಪ್ ಯಾತ್ರೆಯಲ್ಲಿನ ಪ್ರತಿ ಅನುಭವಗಳನ್ನು ಫೋಟೋ ಹಾಗೂ ವಿಡಿಯೋ ಚಿತ್ರೀಕರಣದ ಮೂಲಕ ದಾಖಲಿಸಿಕೊಳ್ಳುವುದಲ್ಲದೆ, "ಎತ್ತಣ ಮಾಮರ ಎತ್ತಣ ಕೋಗಿಲೆ"ಯಲ್ಲಿ ತುಂಗೆಯಿಂದ ದ ಎವನ್‌ವರೆಗಿನ ಅನುಭವಗಳನ್ನು ಪ್ರವಾಸ ಕಥನವಾಗಿ ದಾಖಲೆ.
ಸಾಹಿತ್ಯ, ಮಾನವ ಶಾಸ್ತ್ರ, ಮನ:ಶಾಸ್ತ್ರ ಹಾಗೂ ವಚನ ಸಾಹಿತ್ಯದಲ್ಲಿ ಆಳ ಅಧ್ಯಯನ, ಪ್ರಚಲಿತ ವಿಷಯಗಳ ಮೇಲಿನ ವಿಚಾರಪೂರ್ಣ eನಾರ್ಜನೆಗೆ ಯುರೋಪ್ ಭೇಟಿ .
ಇಂದು ನಮ್ಮ ಯುವಕರು ವಿದೇಶ ಪ್ರವಾಸ ಕೈಗೊಳ್ಳುವ ಅನಿವಾರ್ರ್ಯತೆ ಇದ್ದು, ಅಲ್ಲಿ ಅವರು ಎದುರಿಸಬಹುದಾದ ಸಮಸ್ಯೆಗಳ ಸ್ಥಿತ್ಯಂತರದ ಅನುಭವಗಳನ್ನು ಸಮರ್ಥವಾಗಿ ನಿಭಾಸಲು ಸೂಕ್ತ ಮಾರ್ಗದರ್ಶನ ನೀಡುವ ನಿರ್ಧಾರ. ಒಬ್ಬ ಕ್ರಿಯಾಶೀಲ ವ್ಯಕ್ತಿ ಮನಸ್ಸು ಮಾಡಿದರೆ ಏನೆಲ್ಲಾ ಸಾಧಿಸಲು ಸಾಧ ಎಂಬುದಕ್ಕೆ ಪ್ರೊ. ಯಾಪಲಪರವಿ ನಿದರ್ಶನ. ಗ್ರಾಮೀಣ ಪ್ರದೇಶದ ಕನ್ನಡ ಸರಕಾರಿ ಶಾಲೆಯಲ್ಲಿ ಅಧ್ಯಯನ ಮಾಡಿ ಸತತ ಪರಿಶ್ರಮದ ಮೂಲಕ ಯಶಸ್ಸು ಸಾಧಿಸುತ್ತಿರುವುದು ನಮ್ಮ ಹೊಸ ತಲೆಮಾರಿನ ಯುವ ಜನಾಂಗಕ್ಕೆ ಇವರು ಮಾದರಿ.
ಕವಿ
ವಿದ್ಯಾರ್ಥಿದಸೆಂದಲೂ ಕಾವ್ಯ ರಚನೆಯಲ್ಲಿ ಆಸಕ್ತಿ. ವಿದ್ಯಾರ್ಥಿ ಕವಿ ಸಮ್ಮೇಳನಗಳಲ್ಲಿ,
ಧಾರವಾಡ ಆಕಾಶವಾಣಿ ಕೇಂದ್ರದಿಂದ ಸ್ವ ರಚಿತ ಕವನಗಳ ನಿವೇದನೆ.
ನಾಡಿನ ಹೆಸರಾಂತ ಉತ್ಸವಗಳಾದ ಹಂಪಿ ಉತ್ಸವ, ಲಕ್ಕುಂಡಿ ಉತ್ಸವ, ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ಕ"ಗ್ಠೋಗಳಲ್ಲಿ ಕವಿತೆಗಳ ನಿವೇದನೆ.
ರಾಯಚೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಇತರ ಸಂಘಟನೆಗಳು ಪ್ರಕಟಿಸಿದ ಸಂಕಲಿತ ಸಂಕಲನಗಳಲ್ಲಿ ಕವನಗಳು ಪ್ರಕಟಿತ.
ನಾಡಿನ ದಿನಪತ್ರಿಕೆ, ವಾರ ಪತ್ರಿಕೆ, ಹಾಗೂ ಸಾವಿತ್ಯ ಪತ್ರಿಕೆಗಳಲ್ಲಿ ಪ್ರಕಟಗೊಂಡ ಕವಿತೆಗಳು ಕಾವ್ಯಾಸಕ್ತರ ಗಮನ ಸೆಳೆದಿವೆ. ಮೊದಲ ಸ್ವತಂತ್ರ ಸಂಕಲನ 'ನೆಲದ ಮರೆಯ ನಿಧಾನ' ೨೦೦೭ ಹಾಗೂ ೨೦೦೮ ರಲ್ಲಿ ಪ್ರಕಟಿತ.
ಸ್ತ್ರೀ ಸಂವೇದಿ ಪದ್ಯಗಳ ಸಂಕಲನ 'ನಾನೊಂದ ಕನಸ ಕಂಡೆ' ಕವಿಗಿರುವ ಭಾವಪರವಶತೆಯನ್ನು ದಾಖಲಿಸಿದೆ.
ಕತೆಗಾರ :
ಇಂಗ್ಲಿಷ್‌ನ ಅನೇಕ ಕತೆಗಳು ಕನ್ನಡಕ್ಕೆ ಹಾಗೂ ಕಾವ್ಯಾತ್ಮಕ ಭಾಷೆಯ ಮೂಲಕ ಕತೆ ಬರೆಯುವುದನ್ನು ಕರಗತ ಮಾಡಿಕೊಂಡು ಸ್ವತಂತ್ರ ಕತೆಗಳು ಸಾ"ತ್ಯ ಪತ್ರಿಕೆಗಳಲ್ಲಿ ಹಾಗೂ ಆಕಾಶವಾಣಿಯಲ್ಲಿ.
ವಿಮರ್ಶಕ :
ನಾಡಿನ ಅನೇಕ ಪತ್ರಿಕೆಗಳಲ್ಲಿ ಪ್ರಕಟಗೂಂಡ ವಿಮರ್ಶಾ ಲೇಖನಗಳು. ಗದ್ಯ, ಪದ್ಯ ಪ್ರಕಾರಗಳಲ್ಲಿ ಸಮಾನ ಹಿಡಿತ ಹೊಂದಿರುವುದರಿಂದ ಓದಿಸಿಕೊಂಡು ಹೋಗುವ ಇವರ ಬರಹ, ನವಿರು ಹಾಸ್ಯ, ನೇರ ನಿರೂಪಣೆಗಳ ಮೂಲಕ ಬಹುಜನರಿಗೆ ತಲುಪಿದೆ.
ಧ್ಯೇಯ ಹಾಗೂ ಗುರಿ
ಬದುಕೆಂಬುದು ನಿಂತ ನೀರಲ್ಲ, ನೆಲದ ಮರೆಯ ನಿಧಾನದಂತೆ ಸತತ ಅಧ್ಯಯನ, ಪಾರದರ್ಶಕ ವರ್ತನೆ ಹಾಗೂ ಸಕಾರಾತ್ಮಕ ಧೋರಣೆಯೊಂದಿಗೆ ಪರಿಶ್ರಮದಿಂದ ಬದುಕುವದು.
ವಿಳಾಸ :
(ಇಂಗ್ಲಿಷ್ ವಿಭಾಗ ಕೆ.ವಿ.ಎಸ್ ಆರ್ ಕಾಲೇಜು)
ಸಾಂಗತ್ಯ ಪ್ರಕಾಶನ, ಕಳಸಾಪೂರ ರಸ್ತೆ,
ಗದಗ - ೫೮೨೧೦೩
೯೪೪೮೩೫೮೦೪೦
siddu.yapal@gmail.com

Read more...

ಅವ್ವ
ಹಾಲು ಗಲ್ಲದ ಮಗಳು
ಪ್ರೀತಿಯಿಂದ ಬಾಚಿ ಅಪ್ಪಿಕೊಂಡಾಗಲೆಲ್ಲ
ನೆನಪಾಗಿ ನಲಿಯುತ್ತಾಳೆ ಅವ್ವ.
ಅಂಬೆಗಾಲಿಡುವ ಮಗಳು
ಅಚಾನಾಕಾಗಿ ಕಸದಲಿ ಕೈ
ಇಟ್ಟಾಗ ಮಿಡಿಯುವ ಮನದಲಿ
ಅವ್ವ ಇಣುಕಿ ನೊಡುತ್ತಾಳೆ.
ಮರೆಯಲಾಗದ ಬಾಲ್ಯ
ಮಸುಕಾದ ಮುಗ್ಧತೆ
ತಿರುಗಲೊಲ್ಲದು.
ತಿರು ತಿರುಗಿ ಒಗೆದ ಇತಿಹಾಸ
ಜೊತೆಯಲಿ ಕುಣಿಯುವ ವರ್ತಮಾನ
ಭೂತವಾಗಿ ಕಾಡುವ ಭವಿಷ್ಯ-
ಗಳಲಿ ಅವ್ವ ಅಲುಗಾಡದೆ
ಬೇರೂರಿದ್ದಾಳೆ.
ಬೇಡವೆಂದದ್ದನ್ನು ಮಾಡಿಯೇ ತೀರುತ್ತೇನೆಂದು
ಮಗಳ ಹಿಡಿದ ಹಟ ನಿಲ್ಲದಾದಾಗ ಅವ್ವ
ಒಳಗೊಳಗೆ ರಮಿಸುತ್ತಾಳೆ, ಕಿವಿ ಹಿಂಡಿ ಬುದ್ಧಿ ಹೇಳುತ್ತಾಳೆ
ಹಟ ಯಾರು ಸೊತ್ತು ಅಲ್ಲ ಅಂದು.
ಸಿಟ್ಟು, ದುಃಖ, ಸಂಭ್ರಮ , ಕೆಣಕುವ
ಮೈಸಿರಿ, ನಿಲ್ಲದೇ ನೆಲೆ ಇಲ್ಲದೇ ಓಡಾಡುವ
ಮತಿಯನು ಹಿಡಿದಿಡುವಾಗ, ಅವ್ವಾ !
ಎಂದು ನಿಟ್ಟಿಸಿರು ಬಿಡುವಾಗ
ನರನಾಡಿಗಳಲಿ ತುಂಬುವ ಜೀವ ಚೈತನ್ಯ.
ಒಮ್ಮೆ ದೇವತೆಯಂತೆ
ಮಗದೊಮ್ಮೆ ಮುಂಗೋಪಿಯಂತೆ,
ಜೋರಾಗಿ ತಟ್ಟುವ ರೊಟ್ಟಿಯ ಹಿಟ್ಟಲಿ ಅರಳುವ ಸದ್ದಿನಲಿ.
ಕಾದ ಹಂಚಲಿ ನೀರ ಸವರಿದಾಗ ಉಬ್ಬಿ ನಿಲ್ಲುವ
ಬಿಸಿ ರೊಟ್ಟಿಯಂತೆ ಅವ್ವ ನಿರಂತರ ರುಚಿಕರ.
ಅವ್ವ ಭವಿಷ್ಯ
ನಾನು ಇತಿಹಾಸ
ಮಗಳು ವರ್ತಮಾನ.
ಕಾಲನ ಕೂಟದಲಿ ಆಡುವ ಆಟದಲಿ
ಆಟಗಾರರೆಲ್ಲ ಸೋತು ಮೈದಾನದಲಿ
ಪೆಚ್ಚಾದಾಗ ಅವ್ವ ನನ್ನನು ಮತ್ತೆ ಮತ್ತೆ ಆಟಕ್ಕೆ
ದೂಡುತ್ತಾಳೆ. ಗೆಲುವ ಸಂಭ್ರಮಕೆ ನಿತ್ಯ
ಹರಸುತ್ತಾಳೆ.
Posted by siddu yapalaparavi at 9:20 AM 0 comments
Labels:

Read more...

Tuesday, February 2, 2010

ವೀರ್ಯ ಪುರುಷರು
ಕೇಳು ಸಖೀ ಇವರ ಪೌರುಷದ ಕಥೆಯ
ಇನ್ನಾದರೂ ಅರಿ ಇವರ ವೀರ್‍ಯಾವೇಶದ
ವ್ಯಥೆಯ
ಸೀತೆಯನು ಕಾಡಿಗೆ ಅಟ್ಟಿ
ಅಗ್ನಿ ಕುಂಡದಿ ನೂಕಿ
ಶೂರ್ಪನಕಿ ಮೂಗ ಕೊಯ್ದವರ
ಆದರ್ಶಗಳಲಿ ನೂಕಿಹರು ನಮ್ಮನು.
ಸುಂದರಿಯರನು ಸೂಳೆಯಾಗಿಸಿ
ಹುಟ್ಟಿದ ಸಂತಾನಗಳ ಸೂಳೆಮಕ್ಕಳೆಂದು
ಜರಿಯುವ ಚಂಡಾಲರ ಮತಿಯ ಮಿತಿಯ.
ದುಂಬಿ ಹೂ ಮೇಲೆ ನಯವಾಗಿ
ಆವರಿಸಿ ಬೇಕಾದಷ್ಟು ಮಧು ಹೀರಿ
ಕಟ್ಟುವ ಜೇನ ಸವಿಯ ಬಲ್ಲರೆ ಇವರು.
ಈ ಖೂಳರು ಬೇಡವಾದರೂ
ತೀರದ ತೀಟೆಗೆ ಎಲ್ಲಂದರಲ್ಲಿ
ಹಿಸುಕಿ ಹೊಸಕಿ ನಯಗಾರಿಕೆ ನಿಯತ್ತಲಿ
ಹಲ್ಕಿರಿಯುವ ಹಲಾಲುಕೋರರು.
ನೀ ಬೇಕೆಂದು ಹಂಬಲಿಸುವಾಗ
ಜೊಲ್ಲು ಸೋರಿಸಿ ನಿತ್ರಾಣಾಗಿ, ಬಾಲ ಮುದುರಿ
ಹಾಸಿಗೆಯಲಿ ಕಂಗಾಲಾಗುವ
ಕ್ರಿಮಿಗಳು.
ಬೇಡವೆಂದು ನಿರಾಕರಿಸಿದರೆ
ನಿಮಿರಿದವರಂತೆ ನಟಿಸಿ ಹಾರಾಡಲು
ಯತ್ನಿಸುವ ಖೂಳ ಮೃಗಗಳಿಗೆ ಬೇಕು-ಬೇಡಗಳ
ಅರಿಯುವ ತುಡಿತವಿಹದೆಲ್ಲಿ ?
ಇವರಾಡಿದ್ದೇ ಆಟ ಮಾಡಿದ್ದೇ ಮಾಟ.
ಸಮರಕ್ಕೆ ನಿಮಿರಿನಂತ ವೀರ
ಪುರುಷೋತ್ತಮನ ಸದ್ದಡಗಿಸಲೆಂದೇ
ಸೆಡ್ಡು ಹೊಡೆದು ಪುಟಿದ ಚೆಂಡಾಗಿ
ಚಂಡಾಡಿದರೆ
ಎಲ್ಲಂದರಲಿ ಕಿತ್ತಿ ಬರುವ ಬೆವರು
ತಡೆದು....ತಡೆ......ತಡೆದು
ನಡುಗುವ ತೊಡೆಗಳ ತಡವರಿಕೆಗೆ
ಪಡುವ ಮರುಕ.
ನೀ ಮೆತ್ತಗಾದರೆ
ವೀರರು.
ನಿಮಿರಿ ನಿಂತರೆ
ಮುದುರಿದ ಬಾಲ ಕೆದರಿದ
ಕೂದಲ ಮರೆಯಲಿ ಮಾಯವಾಗುವ
ಉತ್ತಮ ಪುರುಷರ ಪುರುಷೋತ್ತಮರ
ವೀರ-ಶೂರತನವ ವೀರ್ಯ ಶೌರ್ಯವ
ಹೇಗೆ ಬಣ್ಣಿಸಲಿ ಸಖೀ.....!
Posted by siddu yapalaparavi at 9:23 AM 0 comments
Labels:

Read more...

Tuesday, February 9, 2010

ಬೀದಿ ತಾಯಿ ಸಂಭ್ರಮ
ಕರಳು ಜಗ್ಗಿ ಕಣ್ಣುಕತ್ತಲಾಗಿ ಬೀಳುವ ಹೊತ್ತುರಸ್ತೆ ಬದಿಯ ಭವ್ಯ ಬಂಗಲೆಚಪ್ಪರದಡಿಯಲಿ ಡೊಳ್ಳು ಹೊಟ್ಟೆಯಸಿರಿವಂತರು ನಯ-ನಾಜೂಕಿನಿಂದತಿನ್ನಲು ತಿಣುಕುವ ತಾಕತ್ತು.ಹಸಿವು ಕಂಗಾಲಾಗಿ ಕಂಕುಳಲಿಕೊಸರುವ ಕೂಸು, ತಳ್ಳನೇರಮಿಸಲು ಸಿಕ್ಕಿದ ಸಿಂಬಳುಹೇಸಿಗೆಯೆನಿಸದ ಗಮ್ಮತ್ತುಮನೆಯಂಗಳದ ಮೂಲೆಯಲಿಚಿತ್ತಾರದ ಎಲೆಗಳಲಿ ತಿಪ್ಪೆಯಉಪ್ಪರಿಗೆಯಲಿ ನರ್ತಿಸುವ ಮೃಷ್ಟಾನ್ನಹಸಿದ ಕಂಗಳ ಸಂಪತ್ತುಬೀದಿ ನಾಗಳು, ಕಾಕಾ ಎನ್ನುವಕಾಗೆಗಳು ಸಂಭ್ರಮಿಸುವ ಅರೆಕ್ಷಣದಿಜಾರಿತು ಕೂಸು ಅರಸೊತ್ತಿಗೆಗೆ.ಕಿಲಕಿಲ ನಗುವಿನ ಮಗುವಿನಹಿಡಿಯಲಿ ಬಿಡದೆಲೆ ಅಡಗಿದಸಿಹಿ ಬಾಯಿಗೆ ಸೇರುವ ಹೊತ್ತಲಿಹಾರುವ ಕಾಗೆ ಕಸಿದ ತುತ್ತು.ಕೆರಳಿದ ಕರುಳು ಬೀಸಿದ ಕಲ್ಲುತಾಗಿದ ರಭಸಕೆ ಕಾ ಎಂದರಚಿದತಾಳಕೆ ಜಾರಿದ ಸಿಹಿ ಕೂಸಿನಬಾ ಸೇರಿದ ಹೊತ್ತುಕಳೆಯಿತು ಅರೆಕ್ಷಣ ಕುತ್ತು
Posted by siddu yapalaparavi at 9:10 AM 0 comments
Labels:

Read more...

ಧರೆಹತ್ತಿ ಉರಿದೊಡೆ


ಅಹೋರಾತ್ರಿ ಸುರಿದ ಮಳೆ ಚಿನ್ನಾರಿಯನ್ನು ಕಂಗೆಡಿಸಿತ್ತು. ಗದ್ದ್ಯಾನ ಸಸಿ ಮಡಿ ಹಚ್ಚೋ ಕೆಲಸ ನಡೆದಿತ್ತು. ಧಣಿ ಶಂಕ್ರಣ್ಣ ಹಗಲು ರಾತ್ರಿ ಏಕ ಮಾಡಿ ಊರೂರು ತಿರುಗೋದಂದ್ರ ಜೀವಕ್ಕ ಚೈತನ್ಯ ಬರುತ್ತಿತ್ತು. ಚಿನ್ನಾರಿನ ಭಾಳ ಪ್ರೀತಿಯಿಂದ ಸಾಕಿದ್ದ ಕರಿಯ ಸದಾ ಕೆಸರಿನಾಗ ಹುಮ್ಮಸ್ಸಿನಿಂದ ಕೆಲಸ ಮಾಡ್ತಿದ್ದ. ಧಣಿ ಹೆಂಡ್ತಿ ಸೀತಮ್ಮ ಹಗಲೆಲ್ಲ ಗದ್ಯಾಗ ತಿರುಗಾಡಿ ಆಳು-ಕಾಳಿನ ಲೆಕ್ಕ ಇಟ್ರ, ಧಣಿ ಯಾವಾಗಲಾದರೊಮ್ಮೆ ಗದ್ದಿಗೆ ಗೂಳಿ ಹಂಗ ನುಗ್ಗಿ ತನ್ನ ಲೆಕ್ಕಾಚಾರದಲ್ಲಿಯೇ ಇರುತ್ತಿದ್ದ. ಕರಿಯ ಚಿನ್ನಾರಿಗೆ ಹಗಲು ರಾತ್ರಿ ನದಿ ದಂಡ್ಯಾಗಿನ ನೂರು ಎಕರೆ ಗದ್ಯಾಗ ಓಡಾಡಿಕೊಂಡು ಇರೋದಂದ್ರ ಎಂಥಾ ಖುಷಿ. ಮೈ ಕೆಸರಾಗಿಸಿ ಹಗಲಿರುಳು ದುಡಿಯುತ್ತಿದ್ದ ಕರಿಯನಿಗೆ ಚಿನ್ನಾರಿ ಎಂದರೆ ಪಂಚಪ್ರಾಣ ಹೆಂಡತಿ ಚಂದುಳ್ಳಿ ಚಲುವಿ ನಾಗಿಗಿಂತ ಕರಿಯ ಚಿನ್ನಾರಿಯನ್ನೇ ಹೆಚ್ಚು ಪ್ರೀತಿಸುತ್ತಿದ್ದ. ಹಾಗಂತ ನಾಗಿಯನ್ನು ಉಪೇಕ್ಷಿಸಿರಲಿಲ್ಲ.ಚಿನ್ನಾರಿಗೆ ಮೈ ತೊಳೆಸಿ ನಾಗಿಣಿ ತಂದ ಬುತ್ತಿಯಲ್ಲಿ ಅದಕ್ಕೂ ತಿನ್ನಿಸಿ ಖುಷಿ ಪಡುತ್ತಿದ್ದ. ಈ ಮಳೆಗಾಲದಲ್ಲೂ ಉರಿಯುವ ಬಿಸಿಲು ಬಯಲು ಸೀಮೆಯ ಸಂಪತ್ತು. ಕರಿಯನಿಗೆ ಬಿಸಿಲೆಂದರೆ ಎಲ್ಲಿಲ್ಲದ ಹಿತ. ಧಾರಾಕಾರ ಸುರಿವ ಬೆವರು ಸದಿಯಲ್ಲಿ ಈಜಿದಾಗ ಹರಿದು ತೇಲಾಡುತ್ತಿತ್ತು. ಮೇಲೆ ಸುಡುವ ಸೂರ್ಯ, ಮೈ ತುಂಬ ಚಿಮ್ಮುವ ಬೆವರು. ಈಜಿದಾಗ ಪುಳಕಗೊಳಿಸಲು ಸದಿ ಸಾಕಲ್ಲ ಕರಿಯನಿಗೆ ಖುಷಿ ಪಡಲು.ಧಣ್ಯಾರ ಮನೇಲಿ ಸೀತಮ್ಮಳ ಜೊತೆ ಆಳಿಗೆ ಆಳಾಗಿ ದುಡಿಯುತ್ತಿದ್ದ ಸಾಗಿ ಗದ್ಯಾಗಿನ ಗುಡಿಸಲು ಸೇರುವುದ ಸರಿ ರಾತ್ರಿಗೇನೆ.ಹೋದ ವರ್ಷ ಮೈ ನೆರೆತ ಕೂಡಲೆ ಗುಡಿಸಲು ಸೇರಿದ ಸಾಗಿಗೆ ಚಿಮ್ಮುವ ಉತ್ಸಾಹ. ಆಕರ್ಷಕ ಮೈ ಮಾಟಕ್ಕೆ ಖುಷಿ ಆಗುವಂತೆ ಆಟ ಆಡುವ ತಾಕತ್ತು ಕರಿಯನಲ್ಲಿ ಇತ್ತು. ಮಳೆಗಾಲದ ತುಂಬಿ ಹರಿಯುವ ನದಿಯನ್ನು ಸೀಳಿ ಈಜುವಂತೆ ನಾಗಿಯ ದೇಹಸಿರಿಯನ್ನು ಸೀಳಿ ಬಗೆಯುತ್ತಿದ್ದಕ್ಕೆ ರಾತ್ರಿ ಅಬ್ಬರಿಸುವ ಸದಿ ಸಾಕ್ಷಿಯಾಗುತ್ತಿತ್ತು. ನಿರ್ಜನ ಗದ್ದೆಯಲ್ಲಿ ಯಾರ ಹಂಗೂ ಇಲ್ಲದ ಈ ಜೋಡಿ ಜೀವಗಳಿಗೆ ಹರಿಯುವ ನದಿ,ಬೆಳಗುವ ಕಂದೀಲು, ಕತ್ತಲಲ್ಲಿಯೂ ನೆರಳು ಕಂಡರೆ ಅಬ್ಬರಿಸುವ ಚಿನ್ನಾರಿ. ಬೋ ಎಂದು ಬೆನ್ನು ಹತ್ತಿದರೆ ಹುಲಿ ಕೂಡಾ ಬೆದರುವಂತಿತ್ತು. ರಾತ್ರಿ ಹಾಸಿಗೆಯಲಿ ಹುಲಿಯಂತೆ ಬೇಟೆ ಆಡಲು ಕರಿಯನಿಗೆ ನಾಗಿ ಇದ್ದರೆ, ಹಗಲು ಕಾಲ ಕಳೆಯಲು ಚಿನ್ನಾರಿ ಇದ್ದ. ಹೀಗೆ ಹಗಲು ರಾತ್ರಿ ಚಿನ್ನಾಟವಾಡುವ ಕರಿಯನ ಪಾಲಿನ ಸ್ವರ್ಗ ಶಂಕರಣ್ಣ ಧಣಿಯ ಗದ್ದೆಯಲಿ ಮೈಮುರಿಯುವದರಲಿ ಇತ್ತು.ಒಂದು ದಿನ ಸೀತಮ್ಮ ಸೌಕಾರ್ತಿ ಬುತ್ತಿ ತರಲಿಲ್ಲ. ಹಸಿದ ಚಿನ್ನಾರಿ ಮುಖ ಒಣಗಿಸಿಕೊಂಡು ಕುಳಿತಿದ್ದು ನೋಡಿ ಕರಿಯನ ಕರುಳು ಚುರಕ್ ಅಂತು. ಬಾಜು ಗದ್ಯಾಗಿನ ಯಮನಪ್ಪನ ಮಾತಾಡೋಸ ನೆಪದಾಗ ಎರಡು ರೊಟ್ಟಿ ಇಸಗೊಂಡು ಚಿನ್ನಾರಿಗೆ ತಿನಿಸಿ ತಾನು ಗಟ,ಗಟ ನೀರು ಕುಡಿದಿದ್ದ.ಈ ಏಕತಾನತೆಯ ಬದುಕಿಗೆಂದು ಬ್ಯಾಸರಿಕಿ ಮಾಡಿಕೊಳ್ಳದ ಕರಿಯನಿಗೆ ರಾತ್ರಿ ನಾಗಿಯ ಸುಖ ಹೊಸಲೋಕಕ್ಕೆ ಎಳೆದೊಯ್ಯುತ್ತಿತ್ತು. ಹಸಿರಿನಿಂದ ಕಂಗೊಳಿಸುವ ನೆಲ್ಲೆನ ಪೈರು, ಸಂಭ್ರಮದಿಂದ ತುಳುಕುವ ನಾಗಿಯ ದೇಹಸಿರಿಯನ್ನು ಸಮೀಕರಿಸಿಕೊಂಡು ಒಮ್ಮೊಮ್ಮೆ ತನ್ನಷ್ಟಕ್ಕೆ ತಾನೇ ಕುಣಿಯುತ್ತಿದ್ದ. ನಾಗಿಗೆ ಪೋತನಾಳ ವಗ್ಗರಣಿ ತಿನ್ನಂಗ ಆದರೆ ಉರಿ ಬಿಸಿಲಾಗ ಹರದಾರಿ ನಡದು ಬಿಸಿ ವಗ್ಗರಣಿ ಕಟ್ಟಿಕೊಂಡು ಬರು ಮುಂದ ಆರಬಾರ್‍ದು ಅನ್ನೋ ಸಂಕಟಕ್ಕ ಅವರಿವರ್‍ನ ಕಾಡಿ ಬೇಡಿ ಗಾಡಿ ಹಿಡಿತಿದ್ದ. ಜೀರ ಹನುಮಂತನ ತೋಟದಾಗಿನ ಹೂ ತಂದು ನಾಗಿಣಿ ಮುಡಿ ಏರಿಸುತ್ತಿದ್ದ. ಒಂದು ದಿನ ಸಂಜೀ ಮುಂದ ಧಣಿ ಶಂಕರಣ್ಣ ತನ್ನ ಪಟಪಟಿ ಮ್ಯಾಲೆ ನಾಗಿನ ಹೇರಿಕೊಂಡು ಬಂದು ಗದ್ದೀಗೆ ಇಳಿಸಿ ಹೋದಾಗ ಭಾಳ ಖುಷಿಪಟ್ಟಿದ್ದ.ಧಣೀರಿಗೆ ಆಳೆಂದರ ಎಂತ ಪ್ರೀತಿ ಎಂದು ಉಬ್ಬಿ ಹೋಗಿದ್ದ. ಅದ ಸಂಜೀಗೆ ಧಣಿ ಪಟಪಟಿ ಸಪ್ಪಳ ಮಾಡ್ತಾ ರಾಗಲಪರ್ವಿ ದಾರಿ ಹಿಡಿದು ಯಾಕ ಹೋದ್ರು ಅಂತ ಕರಿಯನಿಗೆ ತಿಳೀಲಿಲ್ಲ. ಅದನ್ನ ತಿಳಿಕೊಳಾಕ ಅಂತ ತೆಲಿ ಕೆಡಿಸಿಕೊಳ್ಳಲಿಲ್ಲ.ಧಣಿಯನ್ನು ಕಂಡ ಕೂಡಲೆ ಪ್ರೀತಿಯಿಂದ ಬಾಲ ಆಡಿಸುತ್ತಿದ್ದ ಚಿನ್ನಾರಿ ಧಣ್ಯಾರ ಸನ್ಯಾಕ ಹಾಯಿತಿದ್ದಿಲ್ಲ. ಕರಿಯ ಮೈದಡವಿ ನಾಗಿ ತಂದ ಬುತ್ತಿ ತಿನ್ನಿಸಿ, ನಾ ಮಕ್ಕಳ್ಳೆನೆಲೆ ಎಂದಾಗ ಕುಂಯ್ ಗುಡುತ್ತಿದ್ದ.ಮರುದಿನ ಉರಿಬಿಸಿಲಾಗ ಗದ್ದಿಗೆ ಬಂದ ಧಣಿ ನದ್ಯಾಗ ಒಂದು ದಮ್ ಈಜಾಡಿ ಕರಿಯನ ಗುಡಿಸಲ್ಯಾಗಿನ ಒಗದ ದೋತ್ರದ್ಲೇ ಮೈ ಒರೆಸಿಕೊಂಡು ಕೊಳ್ಳಾಗಿನ ಥಳ ಹೊಳೆಯೋ ಬಂಗಾರದ ಚೈನ್ ಮ್ಯಾಲೆ ಕೈ ಆಡಿಸಿಕೊಂತ ಹೇಳಿದ, ಲೇ ಕರಿಯ ನಾಳೆ ಸ್ವಲುಪು ಜವುಳಗೇರಿಗೆ ವೋಗಿ ಐನಾರ್ ರುದ್ರಯ್ಯಂತಾಗ ರಕ್ಕ ಇಸ್ಕಂಬರ್‍ತಿಯನಲೇ, ಆ ಮಿಂಡ್ರಗುಟ್ಟಿದ ಸಂಗ್ಯಾ ಗಹೋದ ಸೆಂತಿ ದಿನ್ಯಾನ ಏಳಿದ್ದೆ.ಹೂಂ ದಣಿ ಈಸ್ಕಂಬರ್‍ತ್ನಿ ಅಂತೇಳಿ ಕುಂಡಿ ಕೆರಕಂತ ಬೊಗಳಿ ರುದ್ರಯ್ಯ ತಾತ ಜವುಳಿಗೇರ್‍ಯಾಗ ಇದ್ದಿಲ್ಲ, ನೀರಮಾನ್ವಿಗೆ ಹೋಗಿದ್ದ ಅಂತ ಬೊಗಳ್ದಾ. ನಾಕ ವರ್ಷದ ಹಿಂದ ಜವುಳಗೆರ್‍ಯಾಗ ಆತನ ಸಂಬಳದಾಳಿಗೆ ಜಗ್ಗಿ ಆರಾಮ್ ಇಲ್ಲ, ಸಿನ್ನೂರಾಗ ತೋರ್‍ಸಿದ್ರು ಕಮ್ಮಿ ಆಗಿಲ್ಲಂತೇಳಿ ರಾಯಚೂರಿಗೆ ಕರಕೊಂಡ್ಹೋಗೋದೈತಿ ಅಂತ ಅತ್ತ ಸಾವಿರ ಇಸ್ಕಂಡಿದ್ದ. ನಾನು ಅಂಬಾಮಟ ಜಾತ್ರ್ಯಾಗ ಸಿಕ್ಕಾಗೆಲ್ಲ ಕೇಳಿದ್ಮೇಲೆ ಅರ ಇಲ್ಲ ಸಿವಾ ಇಲ್ಲ ಉಂ ಅಂತಿದ್ದ. ಎಳ್ಡ ತಿಂಗ್ಳ ಇಂದ ಪೋತ್ನಾಳ ಬಸ್ ಸ್ಟ್ಯಾಂಡ್‌ನ್ಯಾಗೆ ಆ ತಾತನ್ನ ಕೇಳ್ದೆ ಏನಪ್ಪ ತಾತ ನಿಮ್ಮ ಆಳ ಅದಾನ ಎನ್ ಶಟದ್ನಾ ಅಂತಾ. ಇಲ್ಲ ದಣಿ ಅದೇನಾ ಗಾಳಿ ಶಕ ಅಂದ್ರಪೋ ಅದ್ಕ ಎರ್‍ಡ ತಿಂಗಳಿನಿಂದ ಆಯನೊರ ದರ್ಗಾದಾಗ ಇಟ್ಟಿನೆಪೋ, ಆ ಸೂಳೆಮಗ್ಗ ಆರಾಂ ಆಗಲಿಲ್ಲ ನಾನ್ ಎಂಗರ್ ಮಾಡಿ ವಂದಿಸಿಕೊಡ್ತಿನಪ ಅಂದಿದ್ದ. ಏನ್ ಸೂಳೆಮಕ್ಳ ಏನ್ ಕತಿ. ಏಳರ್ ಉಚ್ ಸೂಳೆಮಕ್ಕಳಾದ್ರ, ಕೇಳಾರ್ ಉಚ್ಚ ಸೂಳೆಮಕ್ಳ ಆದಂಗ್ ಆಗೈತ್ಲೇ ಅಂತ ಧಣಿ ಒಂದ ನಮೂನಿ ಒಟಗುಟ್ಟಿದ. ಕರಿಯನಿಗೆ ಈ ಮಳೆಗಾಲದಾಗ ಪೋತ್ನಾಳಗೇ ಹೋಗಿ ಬಸ್ ಹಿಡಿದು ಜವುಳಗೇರಿಗೆ ಹೋಗದಂದ್ರ ಬ್ಯಾಡ ಆಗಿತ್ತು. ಚಿನ್ನಾರಿ, ಹೊಸದಾಗಿ ಲಗ್ನ ಆದ ನಾಗಿನ ಬಿಟ್ಟು ಹೋಗೋದಂತು ಮನಸೆ ಇರಲಿಲ್ಲ. ಆದ್ರ ಎಂದೂ ಧಣಿ ತನಗ ರೊಕ್ಕದ ದಗದ ಹೇಳಿದ್ದಿಲ್ಲ. ಅವನೌನ ಇವತ್ತೆದಕ ಉಳ ಕಡ್ದಾವನಪ ಅನಕಂತ ನೀರ್ ಹರಸಾಕ ಹೋದ. ಧಣೇರ ಒಂದೆರಡು ದಿವಸ ಬುಟ್ಟು ವೋತ್ನ ಬುಡ್ರಿ. ಗದ್ಯಾಗ ಇಟಕೊಂದ ದಗದ ಇಟಗಂಡು ತಾತಂತಲೆ ಏನ್ ರಕ್ಕ ಕೇಳಾಕ ವೋಗದಪೋ ಅಂದ. ಏಳದಷ್ಟ ಮಾಡಲೇ ಕರಿಯ ಗದ್ದೇನ ನಿಮ್ಮಪ್ಪನ ಜಾಗೀರೆನಪ, ಯಾ ಸೂಳೆಮಕ್ಕಳಾರ ಬಗಲಾಗ ಮಡಚಿ ಇಟಗೊಂಡ್ ಒಕ್ಕಾರನಂಗ್ ಮಾತಾಡ್ತಿಯಲಲೇ ಅನಕಂತ ದೋತ್ರ ಚುಂಗ್ ತಿಕ್ಕಿ,ತಿಕ್ಕಿ ಮುಕಳಿ ಮ್ಯಾಲ್ ಸಿಗಿಸಿಕೊಂಡ ರಿನ್ ಸಬಕಾರದಲೇ ಒಗ್ದ ದೋತ್ರ ಅದ್ರ ಚುಂಗು ನೋಡಿ ಕರಿಯ ಮನಸಿನ್ಯಾಗ ಅಲಾಲ ಅಂದ. ರೇಶ್ಮಿ ಜುಬ್ಬ, ಕೊಳ್ಳಗಿನ ಚೈನು, ಬಗಲಾಗಿನ ಬಂಗಾರದ ಗುಂಡಗಡಿಗಿ ಥಳ ಥಳ ಅಂತಿತ್ತು.ಮುಂದಿನ ವಾರ ಗೊಬ್ಬರ ಇಡಬೆಕು ಅದ್ಕ ಇದ ವಾರ ವೋಗಿ ಬಂದ ಬುಡು ಎಂದೆನ್ನುತ್ತಾ ಕರಿಯನ ಮಾತನ್ನ ಲೆಕ್ಕಿಸದೇ ಧಣಿ ಪಟಪಟಿ ಏರಿದ.ರಾತ್ರಿ ನಾಗಿ ಮುಂದ ಕರಿಯ ಒಟಗುಟ್ಟಿದ, ಎನಲೇ ನಮ್ ದಣಿಗೇನ್ ಕುಂಡ್ಯಾಗ ಉಳ ಕಡ್ಯಾಕತ್ಯಾವನ, ನನಗ ಜವುಳಗೇರಿಗೆ ವೋಗಿ ರಕ್ಕ ಇಸಗಂಡ್ ಬಾ ಅನ್ನಾಕತ್ಯಾನ. ಬರ್ ಬರ್ ಅಂತ ಅಡ್ಯಾಡ ಲಾರಿ, ಬಸ್ಸು ನೋಡಿದ್ರನ ಮೈ ತಿರಗಿದಂಗ ಆತೈತಿ. ಐದು ವರ್ಷದ ಕೆಳಗೆ ಪೋತ್ನಾಳಗೆ ವೋಗಿ, ಮಾನ್ವಿಗೆ ವೋಗಾಕ ಅಂತ ಬಸ್ ಅತ್ತಿದ್ರ ಅವನಮ್ಮನ ಸುರು ಆಗಿದ್ದ ವಾಂತಿ ನಿಂದ್ರಲೇ ಇಲ್ಲ. ಬಸ್‌ನ್ಯಾಗ ಇದ್ದ ಬ್ಯಾಡರ ಕಲ್ಲಪ್ಪ ಮಕ,ಮಕ ಅಂದ್ನಲೇ ಲೇ ಕರಿಯ ಅಲ್ಲೇ ಊರಾಗ ಇರದ ಬುಟ್ಟು ದೊಡ್ಡ ನವಾಬ್ ಸೂಳೆಮಕ್ಳಂಗ ಊರೂರು ಅಡ್ಡಾಡತ್ರನೆಲೇ, ಕೈಯಾಗ ಒಂದ್ ನಿಂಬೆಣ್ಣ ಇಡಕಂಡ್ ಬರ ಬಕು ಇಲ್ಲಂದ್ರ ಮಕ್ಳ ಟಿಂಪಿ ಒಳಗರ ವೋಗಬಕಲೆ ಅಂತ ಬೈದದ್ದ್ ಅಲ್ದ ಅಲ್ಲಿದ್ದರೆಲ್ಲ ಅಚ್ಚಲೇ ಅಂದ್ರು. ಅದ್ಕ ಒಲ್ಲೆನಸ್ತೈತಿ. ಬ್ಯಾಡ ಅಂದ್ರ ದಣಿ ಬುಡಂಗ್ ಕಾಣಂಗಿಲ್ಲ. ಆತ ಬಾಳ ಕಿರಿ ಕಿರಿ ಅಂದ್ರ ನಾಳೇರ ನಾಡ್ದರ ವೋತ್ನಿ ನೀ ಸ್ವಲ್ಪ ಜ್ವಾಕಂದೇ ಅಂದ. ಆತು ನೀ ಬರತನ ನಾ ಅಲ್ಲೇ ಮನ್ಯಾಗ ಮಕ್ಕಂತ್ನು ಅವ್ವಗ ಏಳಿ ವೋಗು.ನೀ ಬಂದ ಮ್ಯಾಲೇನ ಗದ್ದೀಗಿ ಬರಕಿ ನೋಡ್. ಇಲ್ಲಂದ್ರ ಇಲ್ಯಾವನ ಇರ್‍ತಾನ ಅಂದಳು. ಹತ್ತುವುದು, ಇಳಿಯುವುದು ಮುಗಿದರೆ ಕರಿಯನಿಗೆ ಕಣ್ಣಿಗೆ ಕಣ್ಣು ಕೂಡಲಿಲ್ಲ. ನಿದ್ರೆ ಬರಲಿಲ್ಲ.ಕಬರ್ ಇಲ್ಲದಂಗ್ ಮಲಗಿದ ನಾಗಿನೊಮ್ಮೆ ನೋಡಿ ನಿಟ್ಟುಸಿರು ಬಿಟ್ಟು ಕರ್ ಅಂತ ಸಪ್ಪಳ ಮಾಡಿದ ಬಾಗಿಲು ತೆಗೆದು ಹೊರ ಬಂದ ಸಪ್ಪಳಕೆ ಚಿನ್ನಾರಿ ಬೌ ಎಂದಿತು. ನಾನಳಪೋ ಮಗನ ಬಾರಿ ಉಶ್ಯಾರದಿ ಬಿಡಲೆ ಅಂದ. ದಪ,ದಪ ಹರಿಯೋ ನೀರಿನ ಸಪ್ಪಳ, ಸೊಂಯ್ ಅನ್ನೋ ಗಾಳಿ ಬಿಟ್ರ ಬ್ಯಾರೆ ಏನೂ ಕೇಳಿಸಲಿಲ್ಲ. ಒಳಗೋಗಿ ಕಂದೀಲು ಸಣ್ಣ ಮಾಡಿ ಮತ್ತೊಮ್ಮೆ ದಣಿವಾರಿಸಾಕ ಉಳ್ಳಾಡಿದ. ಎಷ್ಟ ದಣಿದರೂ ನಿದ್ದೆ ಬರಲೇ ಇಲ್ಲ. ಮತ್ತೊಮ್ಮೆ ಬಾಗಿಲು ತಗದು ಕಾಲು ಮಡ್ದ ಹರಿದು ಹೋದ ಉಚ್ಚೀನ ದಿಟ್ಟಿಸಿ ನೋಡಿ ಮೈ ಯಾಕ ನಡಿಗಿದಂಗ್ ಆತು. ಹೋಗೋ ನಿಮ್ಮೌನು ಅಂತ ಬೈಕಂಡು ಗುಡಿಸಲು ಸೇರಿದ.೨ಮರುದಿನ ಮುಂಜಾನೆ ಬುತ್ತಿ ಕಟ್ಟಿಕೊಂಡು ಪೋತ್ನಾಳ ದಾರಿ ಹಿಡಿದ.ವಾಂತಿ ಆಗಬಾರ್‍ದು ಅಂತ ನಾಕೈದು ನಿಂಬೆ ಹಣ್ಣು ತಗೊಂಡ. ಧಣಿ ಹೋಗೋ ಮುಂದ ಮತ್ತೊಂದು ಹೊಸ ಕೆಲಸ ಹಚ್ಚಿದ. ಜವುಳಗೆರ್‍ಯಾಗ ಐನಾರ್ ಕಡೆ ರಕ್ಕ ಇಸಗಂಡು, ಸೀದಾ ಅಂಗ್ ನೀರ್‌ಮಾನ್ವಿಗೆ ವೋಗಿ ಮಾಸ್ತರ ಮಂಜಪ್ಪನ ಕಡೆ ವೋಗು.ವೋದ ವರ್ಸ ತಗಂಡ ಮ್ಯಾಗಡೆ ಹೊಲ್ದ ಖರೀದಿ ಪಾಣಿ ಅವರಿಗೆ ಕೊಟ್ಟಿದ್ದೆ ಅಂದಾಗ ಕರಿಯನ ಎದಿ ದಸಕ್ ಅಂತು. ಇದೇನ್ ಕತೀಲೆ ಎಪ್ಪಾ ಅನ್ನಂಗಿಲ್ಲ ಆಡಂಗಿಲ್ಲ ಅನುಕೊಂತಾ ಮನೀಗೆ ಹೋಗಿ ನಾಗಿಗೆ ಏನರ ಹೇಳನ ಅನ್ನಿಸಿದ್ರು ಊರ್ ಹಾದಿ ಹಿಡಿದ. ಹೋಗು ಮುಂದ ಚಿನ್ನಾರಿಗೆ ಮೈದಡುವುತ್ತ ಪ್ರೀತಿ ಮಾಡಿ ಉಸ್ಯಾರಲೇ ಚಿನ್ನು ನಾ ಬರಮಟ ಎಲ್ಲಾ ಜ್ವಾಕೆಂದೇ ಎಂದ. ಪ್ರೀತಿಯಿಂದ ಬಾಲ ಅಲ್ಲಾಡಿಸಿದ ಚಿನ್ನಾರಿ ಊರ್ ದಾಟುಮಟ ಬಂತು. ಗದ್ದೆಯಲ್ಲಿ ಇದ್ದ ಆಳುಕಾಳೆಲ್ಲ, ಏನಪ ಕರಿಯ ಅದನ್ನ್ ಕರಕಂಡ್ ವೋಗಲೇ, ನಾವೆಲ್ಲ ಮನಶರ ಕಂಡಂಗ್ ಕಾಣವಲ್ದನು ನಿನ್ನ ನಾಯಿ ಮಗಂದಕ್ಕ ಅಂದರು. ಬಿಸಿಲು ಏರೋದ್ರೊಳಗ, ಸಾಧ್ಯ ಆದ್ರ ಇವತ್ತ ಎರಡು ಊರಿಗೆ ಹೋಗಿ ಬರಬೇಕು ಅನಕೊಂಡ ಜವುಳಗೇರಿಯಲಿ ಸಿಕ್ಕ ರುದ್ರಯ್ಯ ಕಾಟಾಚಾರಕ್ಕೆ ಐದುನೂರು ಕೊಟ್ಟ. ಅಲ್ಲಿಂದ ದಡಬಡಿಸಿಕೊಂಡು ನೀರ್‌ಮಾನ್ವಿ ಹಾದಿ ಹಿಡಿದ ಅನ ಕಂಡಂಗ ಮಾಸ್ತರ ಮಂಜಪ್ಪ ಪಾಣಿ ಕೊಡ್ತಾನೋ ಇಲ್ಲೋ ಅನಕೊಂಡ ಅರ್ಧದಾರಿಗೆ ಹೋದ ಮೇಲೆ ಕರಿಯನಿಗೆ ಏನೋ ನೆನಪಾಯಿತು. ಅಲ್ಲಾ ಧಣೇರು ಜವುಳಿಗೇರಿಗೆ ರಕ್ಕ ತರಾಕ ತನ್ನ ಕಳಿಸ್ಲಿ ಪಾಣಿ ತರಾಕ ತಾವ ಹೋಗಬಹುದಿತ್ತಲ್ಲ ಎಂದು ತಲೆಕೆರೆದುಕೊಂಡ ಬೇಕಂದಾಗ ಸೈಕಲ್ ಮೋಟಾರ್ ಮೇಲೆ ರಾಯಚೂರಿಗೆ, ಸಿನ್ನುರಿಗೆ, ಗಂಗಾವತಿಗೂ ಹೋಗುವ ಧಣೇರು ತನ್ಯಾಕ ಕಳಿಸಿದ್ರು ಎಂಬುದು ತಿಳೀಲೇ ಇಲ್ಲ. ದೊಡ್ಡರ್‍ದು ನೇಲಿನ ತಿಳೆಂಗಿಲ್ಲ ಬಿಡ್ಲೆ ಅವನವ್ವನ ಅಂತ ಬೈಕೊಂಡು ನೀರ್‌ಮಾನ್ವಿಕಡೆ ಹರದು ಹೋದ.೩ಇತ್ತ ಚಿನ್ನಾರಿ ರಾತ್ರಿಯೆಲ್ಲ ಏಕಾಂಗಿಯಾಗಿ, ಹಗಲು ಹಾಕಿದ ಬುತ್ತಿಯನ್ನು ಸರಿಯಾಗಿ ತಿನ್ನದೇ ಏನನ್ನೋ ಕಳಕೊಂಡ ಹಾಗೆ ನರಳಾಡಿದ..,ಮೊದಲನೇ ದಿನ ಸಂಜೀ ಮುಂದ ನಾಗಿಗೆ ಧಣೇರು ಹೇಳಿದರು, ನಾಳೆ ರಾತ್ರಿ ಕರಿಯ ಎಷ್ಟತ್ತಿದ್ರು ಬರ್‍ತಾನ, ನೀ ಮಕ್ಕಳಾಕ ಇಲ್ಲೆ ಬಂದ್ ಬುಡು. ಮದ್ಲ ಆ ಉಚ್ ಸುಳೆಮಗ್ಗ ನೀ ಇಲ್ಲಂದ್ರ ತೆಲೀನ ಕೆಡ್ತೈತಿ. ಎದೀ ಮ್ಯಾಲ ಸರಿಯಾಗಿ ಸೆರಗು ಹಕ್ಕೊಳ್ಳದಿದ್ದರೂ, ತೆಲೆಮ್ಯಾಲ ಸೆರಗು ಹಕ್ಕೋಳ್ಳದನ್ನು ಮರೆಯದ ನಾಗಿ ಊನ್ ಧಣಿ ಅಂದ್ಲು. ಧಣಿ ಜೊಲ್ಲು ಸುರಿಸಿಕೊಂಡು ನಾಗಿಯನ್ನು ನೋಡೋದು ಯಾಕೋ ಚಿನ್ನಾರಿಗೆ ಇಷ್ಟ ಆಗ್ಲಿಲ್ಲ. ಅಲ್ಲಿದ್ದ ಹತ್ತಾರು ಆಳುಗಳೊಂದಿಗೆ ನಾಗಿ ಧಣೇರ ಮನಿ ಸೇರಿಕೊಂಡ್ಲು.ಮರುದಿನ ಸಂಜೀಗೆ ಇರೋ ಎಲ್ಲಾ ತಯಾರಿಯೊಳಗ ಬಂದ ನಾಗಿಗೆ ಕರಿಯನ ಹಾದಿ ಕಾಯೋದ ಕೆಲ್ಸ ಆತು. ಸಂಜೀ ಏಳು ಆತು ಎಂಟ್ ಆತು ಕರಿಯನ ಸುದ್ದೀನ ಇಲ್ಲ. ಅಯ್ಯೋ ಎಪ್ಪಾ ಈತ ಬರಲಿಲ್ಲಂತ ಮದ್ಲ ಗೊತ್ತಿದ್ರ ಮನ್ಯಾಗಿರ್‍ತಿದ್ನಲ್ಲ ಅಂತ ಗೊಣಗಿದಳು. ಪಾಪ! ಚಿನ್ನಾರಿ ಅಸಹಾಯಕತೆಯಿಂದ ಅತ್ತಿಂದ ಇತ್ತ ಸುಳಿದಾಡುತ್ತಿತ್ತು.ಒಂಟಿ ರಾತ್ರಿ ಎಷ್ಟೊಂದು ನೀರವವಾಗಿರುತ್ತದೆ ಎಂದು ನಾಗಿ ಊಹಿಸಿರಲಿಲ್ಲ. ತನ್ನನ್ನು ಮಗಳಂಗ ಜೋಪಾನ ಮಾಡೋ ಸಾವಕಾರ್‍ತಿ ನೆನಪಾದ್ಲು. ಹುಲಿಯಂತೆ ಧಣೇರ್‍ನ ಆಕಿ ಎಂದು ನೋಡಿರಲಿಲ್ಲ. ಬ್ಯಾಡ, ಬ್ಯಾಡ ಅಂದ್ರು ಯಾಕ ನಾಗಿಗೆ ಹೆದರಿಕೆ ಅನ್ನೋದು ಹೋಗಲಿಲ್ಲ. ರಾತ್ರಿ ಸರ್ವಹೊತ್ತಿನ್ಯಾಗ ಧಣ್ಯಾರು ಬಂದಂಗ ಆತು. ನಿರ್ಜನ ರಾತ್ರಿಯಲ್ಲಿನ ಅವರ ಸೈಕಲ್ ಮೋಟಾರ್ ಸಪ್ಪಳ ನಾಗಿಯ ಮನಸ್ಸನ್ನು ಉಲ್ಲಸಿತಗೊಳಿಸಿತು. ಭಾಳ ತಡ ಆಗಿದ್ದರಿಂದ ಧಣೇರು ತನ್ನ ಕರಿಯನನ್ನು ಕರಕೊಂಡು ಬಂದಿರಬೇಕು ಅಂತ ಲೆಕ್ಕ ಹಾಕಿ ಬಾಗಿಲು ತೆಗೆದಾಗ ನಿರಾಶೆ ಕಾದಿತ್ತು. ಧಣೇರು ಒಬ್ಬರ ಬಂದಿದ್ದರು. ಏನ್ ನಾಗಿ ಕರಿಯ ಬಂದಿಲ್ಲನು. ಚಂಜೀಗ ಬರಬೇಕಿತ್ತು ಅಂದಾಗ ಎದೆ ಧಸಕ್ ಎಂದಿತು.ನಿರಾಶೆಗೊಂಡ ಚಿನ್ನಾರಿ ಧಣೇರನ್ನು ದುರುಗುಟ್ಟಿಕೊಂಡು ನೋಡಿ ವಿಕಾರವಾಗಿ ಚೀರ ಹತ್ತಿದ. ಚಿನ್ನಾರಿಯ ವಿಕಾರ ನರಳಾಟ ನಾಗಿಗೆ ತಳಮಳ ಎನಿಸಿತು. ನಾಗಿ ನಾ ಇನ್ನೊಂದು ತಾಸ್ ಇಲ್ಲೆ ಇರ್‍ತೀನಿ ನೀ ಏನು ಅಂಜಬ್ಯಾಡೇಳು ಅಂದ ಧಣಿ ಕಾಲುವೆ ದಂಡಿ ಕಡೆ ದಾಪುಗಾಲು ಹಾಕಿದ. ಒಳಬಂದು ಚಿಲಕ ಹಾಕಿದ ನಾಗಿ ಹಾಸಿಗಿ ಹಿಡಿಯಲು ಯತ್ನಿಸಿದಳು ಸ್ವಲ್ಪ ಹೊತ್ತಿನ ನಂತರ ಚಿನ್ನಾರಿ ಬೌ ಎಂದು ವಿಕಾರವಾಗಿ ಬೊಗಳಹತ್ತಿದ. ಒಮ್ಮಿಂದೊಮ್ಮೆಲೆ ಚಿನ್ನಾರಿ ಜೋರಾಗಿ ಬೊಗಳಹತ್ತಿದ. ಯಾರೋ ಮೈಮೇಲೆ ದಾಳಿ ಮಾಡಿದವರ ಹಾಗೆ ಜೋರಾಗಿ ಕಿರುಚಾಡಲು ಪ್ರಾರಂಭಿಸಿದ. ಚಿನ್ನಾರಿ ಕೂಗು ಕೆಲ ನಿಮಿಷಗಳ ತೀವ್ರ ಸೆಣಸಾಟದಿಂದ ನಿಂತಂತೆ ಅನಿಸಿತು. ಎದ್ದು ನಿಂತು ಏನಾಯಿತು ನೋಡಬೆಕೆನ್ನುವ ಕುತೂಹಲವಿದ್ದರೂ ಧೈರ್ಯ ಸಾಲಲಿಲ್ಲ. ಕಾಲಾಗಿನ ಕೌದಿ ಹೊದ್ದುಕೊಂಡು ಮಲಗಲೆತ್ನಿಸಿದಳು. ಮಧ್ಯೆರಾತ್ರಿ ಕಣ್ಣು ಬಿಟ್ಟಾಗ ಏನೋ ಮೈಮೇಲೆ ಹರದಾಡದಂಗ ಆತು. ಮೈಯೆಲ್ಲ ಭಾರ. ಹಾವು ಹರದಾಡಿದ ಸಪ್ಪಳ ಏನೋ ಅರಿಯಲಾಗದ ಹಿಂಸೆ. ತಲೆಸುತ್ತಿ ಬಂದಂತಾಗಿ ಎಚ್ಚರಾಗಲೇ ಇಲ್ಲ.೪ಮಾಸ್ತರ ಕೊಟ್ಟ ಪಾಣಿ ಹಿಡಕೊಂಡು ಗದ್ಯಾಗ ಒಮ್ಮೆ ಹಾದು ಚಿನ್ನಾರಿನ ಕಂಡು ನಂತರ ಮನೀಗೆ ಹೋಗಿ ನಾಗಿನ ಕಂಡರಾತು ಎಂದು ಲೆಕ್ಕ ಹಾಕಿದ. ಅಂದು ಸೋಮವಾರ ಸಂತಿ ಇದ್ದದಕ ಆಳುಗಳು ಯಾರೂ ಇರಲಿಲ್ಲ. ಚಿನ್ನಾರಿಗಾಗಿ ಕುತೂಹಲದಿಂದ ಹುಡುಕಿದ. ತನ್ನ ಗುಡಿಸಲು ಮುಂದ ಚಿನ್ನಾರಿ ಅನಾಥವಾಗಿ ಬಾಯಿ ತೆಗೆದುಕೊಂಡು ಬಿದ್ದಿದ್ದ. ಗಾಭರಿಯಾದ ಕರಿಯ ಹತ್ತಿರ ಹೋಗಿ ಮೈದಡವಿದ ಮೈ ಜುಂ ಎಂದಿತು. ಚಿನ್ನಾರಿಯ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಮಕ್ಕೊಂಡ ಕೂಸಿನ ಕಪಾಳ ಸವರು ಹಂಗ ಮುಖ ಎಲ್ಲ ಸವರಿದ. ಮೈ ಎಲ್ಲ ಸವರಿದ, ಚಿನ್ನಾರಿ ಹೊಟ್ಟೆಗೆ ಯಾರೋ ಜೋರಾಗಿ ಒದ್ದ ಗಾಯ ಇತ್ತು. ಅರಬಡಿಸಿ ಅತಗೊಂತ ಗುಡಿಸಲ ಬಾಗಿಲು ತೆಗೆದ ತಾನು ಮಲಗೋ ಮಂಚದ ಕೆಳಗ ಧಣೇರ ಥಳಥಳ ಹೊಳಿಯೋ ಬಂಗಾರದ ಚೈನು ಬಿದ್ದಿತ್ತು. ಕೌದಿ ಕೆಳಗ ಇದ್ದ ಒಡೆದ ಬಳಿ ಚೂರು ನೋಡಿ ಎನೋ ನೆನಪಾಗಿ ವಾಂತಿ ಬಂದಂಗಾತು. ಸೀದಾ ಸಲಿಕಿ ಗುದ್ದಲಿ ತಗೊಂಡು ತಗ್ಗು ತೋಡಿ ತಾನು ಪ್ರೀತಿಯಿಂದ ಸಾಕಿದ ಚಿನ್ನಾರಿಯನ್ನು ಹೂಳಿಟ್ಟು ಮಣ್ಣು ಮಾಡಿದ. ಏನೋ ನೆನಪಾದಂಗಾಗಿ ಅದರ ಪಕ್ಕದಾಗ ಇನ್ನೊಂದು ದೊಡ್ಡ ಕುಣಿ ತೋಡಿದ. ತಲಿ ತುಂಬಾ ಏನೋ ಆಲೋಚನೆಗಳು. ಮೈಯೆಲ್ಲ ಬೆವರು. ನಡದಾಗ ಕಟ್ಟಿಕೊಂಡಿದ್ದ ಪಾಣಿ ನಾಯಿಕೂಡಾ ಕುಣಿ ಸೇರಿತ್ತು.ನದಿಯಾಗ ಕೈಕಾಲು ತೊಳಕೊಂಡು ಧಣ್ಯಾರ ಮನಿದಾರಿ ಹಿಡಿದ. ಧಣ್ಯಾರು ನಾಗಿ, ಚಿನ್ನಾರಿ ಬೆನ್ನು ಹತ್ತಿ ಬಂದಂಗಾತು. ಕುಣಿ ತೊಡೋ ಮುಂದ ಕೈಯಲ್ಲಿದ್ದ ಸಲಿಕಿ ಕೈಯಾಗಿಂದ ಹೆಗಲೇರಿತ್ತು. ದಾರ್‍ಯಾಗ ಭೆಟ್ಟಿ ಆದ ದುರುಗಪ್ಪ ಯಾಕಲೇ ಕರಿಯ ಸಲಿಕಿ ತಗಂಡು ಧಣ್ಯಾರ ಮನಿಗೆ ವಂಟಿಯಲೇ ಎಂದ. ಅದನ್ನೇನು ಲೆಕ್ಕಿಸದೇ, ಏನೂ ಉತ್ತರ ಕೊಡದೇ ಧಣೇರ ಮನೆಕಡೆ ದೌಡಾಯಿಸಿದ. ಸಿಟ್ಟಿಗೆದ್ದ ಸೂರ್ಯ ನೆತ್ತಿಮ್ಯಾಲ ಧಗ, ಧಗ ಉರೀತಿದ್ದ, ಮೈಯೆಲ್ಲ ಕಿತ್ತಿ ಬಂದ ಬೆವರು ಬೆನ್ನಿಂದ ಕುಂಡಿಗುಂಟ ತೊಡಿ ಮ್ಯಾಲ ಇಳಿತಿದ್ದುದರ ಖಬರ ಇಲ್ದ ಕರಿಯ ಧಣಿ ಮನಿ ಹಾದಿ ಹಿಡಿದ.
Posted by siddu yapalaparavi at
2:28 AM

Read more...

ಚಿತ್ತ ಚಿತ್ತಾರ


ಯಾಕೆ ಹೀಗೆ ಎತ್ತೆತ್ತಲೋ
ಓಡುತಿದೆ ಚಿತ್ತ
ಕೀಲಿಯಿಲ್ಲದ ಬಂಡಿಯ ಹಾಗೆ
ದುಡುಕು, ಸಿಡುಕು ಎಲ್ಲ ಕೆಡುಕಾಗಿ
ಕಾಡುತಲಿವೆ ವ್ಯರ್ಥ ಅನುಮಾನದ
ನೋವ ಗ್ರಹಿಸುವ ಮನಕೆ
ನೋವಲು ಪ್ರೀತಿ ನಗೆ
ಬೀಸುವ ನಲ್ಲೆಗೂ ನೀಡುವುದು
ಬೇಡವೆ ಸವಿ-ಸುಖದ ಆತ್ಮೀಯ ಹೃದಯ
ಕೆಸರಾಗಿದೆ ಮನ ಅರಳಬಾರದೆ
ನಲುಮೆಯ ಕಮಲ,
ಸಾಕಾಗಿದೆ ಹಿಂಡುವ ಸಮಸ್ಯಗಳ
ಹಿಂಡುಗಳ ಮಧ್ಯ ದಂಡೆತ್ತಿ ಹೋಗುವದು.
ಎಲ್ಲಿ ಹೋಯಿತು ಸ್ಥೈರ್ಯ ಹೆಕ್ಕಿ ಓದಿದ
ಪುಸ್ತಕದ ಹಿತವೆಲ್ಲ ವ್ಯರ್ಥವಾಗಿ ಸೋರುತಲಿದೆ
ನನ್ನ ಮಾತಲಿ ನಗುಮುಖದ
ಹಸುಳೆಗಳೆದುರು ನೀಡುವ
ಉಪನ್ಯಾಸವೆಲ್ಲ

Read more...

>> Monday, April 19, 2010

ಆರ್ತನಾದ
ಎಂದೋ ಮುಚ್ಚಿ ಹೋಗಿದೆ
ಮನದ ಬಾಗಿಲು
ಚಿಂತೆಯ ಬಿರುಗಾಳಿಗೆ
ಅರಳುವ ಕಲ್ಪನೆಗಳೆಲ್ಲ
ಕರಗಿ ಹೋಗುತಲಿವೆ
ಭಾವಕೆ ನೆಲೆ ಇಲ್ಲದೆ
ತಳಮಳದ ಜೀವ ಚಡಪಡಿಸುತಿದೆ
ಬಂಧನವ ಬಿಡಿಸಲು
ಚಿಂತೆ, ಭಯ, ಕಾತುರಗಳು
ಕೊಚ್ಚಿ ಹೋಗಬಾರದೇ ಆತ್ಮಾಭಿಮಾನದ
ಸೋಂಕು ತಟ್ಟಲು
ನಿನ್ನಪ್ಪುಗೆ ಕರಗಿಸಲಿ
ಚಿಂತೆಯ ಚಿತೆಯ
ತಟ್ಟಿ ತಟ್ಟಿ ತೆರಸಲಿ ಮುಚ್ಚಿದ ಕದವ
ಬೆಳಗಲಿ ಪ್ರೀತಿ ನಗೆ
ಓಡಿಸಲಿ ಆವರಿಸಿದ ಕತ್ತಲೆ
ಕೊಚ್ಚಿ ಹೋಗಲಿ ದು:ಖ ದುಮ್ಮಾನ
ಎಲ್ಲಿರುವೆ ನಲ್ಲೆ?
ಬದುಕಿಸಬಾರದೇ ನನ್ನೀ ನರಳಾಟದಿ

Read more...

ಇಂಗ್ಲೆಂಡ್ ಆಸ್ಪತ್ರೆಗಳು

>> Saturday, April 17, 2010

ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಎಂಬ ಡಾ ರಾಜ್ ಅವರ ಜನಪ್ರಿಯ ಹಾಡು ನನಗೆ ಇಂಗ್ಲೆಂಡ್‌ನಲ್ಲಿ ಸದಾ ನೆನಪಾಗುತ್ತಿತ್ತು . ನಮ್ಮ ಊರು, ಆಹಾರ, ಸಂಸ್ಕ್ರತಿ ಹಾಗೂ ಜನಜೀವನದ ಮಹತ್ವದ ಅರಿವಾಗಬೇಕಾದರೆ ದೇಶಗಳನ್ನು ಸುತ್ತಬೇಕು. ಇದು ಬದುಕಿನ ಒಂದು ಮುಖವಾದರೆ, ಇನ್ನೊಂದೆಡೆ ನಮ್ಮ ನಾಡಿನ ಸಮಸ್ಯೆಗಳು ಕೂಡಾ ಅಷ್ಟೇ ದಟ್ಟವಾಗಿ ನಮ್ಮನ್ನು ಹೊರದೇಶಗಳಲ್ಲಿ ಕಾಡುತ್ತವೆ. ಒಮ್ಮೊಮ್ಮೆ "ದೇಶಿ ವ್ಯಾಮೋಹಕ್ಕೆ ಬಿದ್ದು ನಮ್ಮದೆಲ್ಲವು ಸರಿಲ್ಲ ಎಂದು ಅನಗತ್ಯ ಟೀಕಿಸುವ ಸಿನಿಕತನವು ಇರುತ್ತದೆ. ಅದೇ ಸಿನಿಕತನವನ್ನು ಬದಿಗಿರಿಸಿ ವಾಸ್ತವದ "ನ್ನೆಲೆಯಲ್ಲಿ, "ಡಿತದ ಒಳನೋಟ ಇಟ್ಟುಕೊಂಡು ಭಾವಾವೇಶಕ್ಕೆ ಒಳಗಾಗದೆ ಬೇರ ದೇಶಗಳನ್ನು ನೋಡಿದಾಗ ಸಹಜ ಚಿತ್ರಣ ನಮ್ಮ ಕಣೆದಿರು ತೆರೆದುಕೊಳ್ಳುತ್ತದೆ.
ಈ "ನ್ನಲೆಯಲ್ಲಿ ನಾನು ಇಂಗ್ಲೆಂಡ್ ದೇಶವನ್ನು ನೋಡಲಾರಂಭಿಸಿದೆ. ಅವರ ವಾಸ್ತವವಾದ, ವ್ಯಕ್ತಿಕೇಂದ್ರಿತ ಬದುಕು ,ಒಡೆದ ಮಡಿಕೆಯಂತಹ ಸಾಂಸಾರಿಕ ಜೀವನ, ಪ್ರಾಮಾಣಿಕತೆ ,ಅಹಂಕಾರ, ದೇಶಪ್ರೇಮ ,ಸ್ವಚ್ಛತೆ, ಸ್ವಚ್ಛಂದ ಮುಕ್ತ ಜೀವನ ಶೈಲಿ "ಗೆ ಒಂದಕ್ಕೊಂದು ಸ"ಕರಿಸಿಕೊಳ್ಳಲು ಕಷ್ಟವಾಗುತ್ತಿತ್ತು. ಅವರು ಶ್ರೇಷ್ಠ, ನಾವು ಕನಿಷ್ಠ ಎಂಬ ನಿರ್ಣಾಯಕ ಅಭಿಪ್ರಾಯವು ಅಸಮಂಜಸ. ನೈತಿಕವಾಗಿ ನಾವು ಪರಮ ಶ್ರೇಷ್ಠರು ಎಂಬ ನಮ್ಮವರ ವಾದವೂ ನನಗೆ ಅರ್ಥ"ನ ವೆನಿಸಿತು ಮನದ ತುಂಬ ಮೈಲಿಗೆಯನ್ನುಟ್ಟುಕೊಂಡು ಶೀಲದ ಮಾತಾಡುವ ಘನ ಚಾರಿತ್ರ್ಯ ನಮಗೇನು ಹೊಸದಲ್ಲವಲ್ಲ? ಇರಲಿಬಿಡಿ ಕಳೆದ ಇಪ್ಪತ್ತೈದು ವಾರಗಳಿಂದ ನನ್ನ ನೀರಿಕ್ಷೆಗೂ "ರಿ ಅನೇಕ ಅನುಭವಗಳನ್ನು ದಾಖಲಿಸಿದ್ದೇನೆ. ಯಾವುದೇ ನಿರ್ಣಾಯಕ ಅಭಿಪ್ರಾಯ ನೀಡದೆ ಕೇವಲ ನನಗೆ ಅನಿಸದ್ದನ್ನು ಅಲ್ಲಿ ಕಂಡ ಐತಿಹಾಸಿಕ ಸಂಗತಿಗಳನ್ನು ತಮ್ಮೆದುರು ನಿವೇದಿಸಿದ್ದೇನೆ.
ನಮ್ಮ ದೇಶದವರೇ ಆದ ಖ್ಯಾತ ಅರ್ಥಶಾಸ್ತ್ರಜ್ಞ "ಆಮಾರ್ತ್ಯಸೆನ್" ಒಂದು ದೇಶದ ಅಭಿವೃದ್ಧಿಯನ್ನು "ಗೆ "ವರಿಸುತ್ತಾರೆ ,ಆರೋಗ್ಯ, ಶಿಕ್ಷಣ ಹಾಗೂ ವರಮಾನ ದೇಶವನ್ನು ಸಮರ್ಥವಾಗಿ ಕಟ್ಟುವ ಹಾಗೂ ಕಾಣುವ ಪ್ರಕ್ರೀಯೆಯಾಗಬೇಕು ಎಂದು.
ಅಮಾರ್ತ್ಯಸೆನ್ ರ ಇದೇ ಸೂತ್ರವನ್ನು ಒಬ್ಬ ವ್ಯಕ್ತಿಯ "ಕಸನಕ್ಕೂ ಅನ್ವುಸಿಕೊಳ್ಳಬಹುದು ಈ ಮಾತನ್ನು ವ್ಯಕ್ತಿತ್ವ "ಕಸನ ತರಬೇತಿಯ ಸಂದರ್ಭದಲ್ಲಿ ನಾನು ಅನೇಕ ಸಾರಿ ಮೆಲುಕು ಹಾಕುತ್ತೇನೆ . ಇದೇ ಸೂತ್ರವನ್ನು ಮನಸ್ಸಿನಲ್ಲಿಟ್ಟುಕೊಂಡು ಇಂಗ್ಲೆಂಡ್'ನ ಆರೋಗ್ಯದ ಸ್ಥಿತಿಗಿತಿಯನ್ನು ನೋಡಲು ನಿರ್ಧರಿಸಿದ್ದೆ. ಅದಕ್ಕೆ ಆವಕಾಶ ಸಿಗುತ್ತದೆ ಎಂಬ ನಂಬಿಕೆಯೂ ಇತ್ತು . ಯಾಕೆದಂರೆ ನನ್ನನ್ನು ಇಂಗ್ಲೆಂಡ್ ಗೆ ಆಹ್ವಾನಿಸಿದವರೆಲ್ಲ ಆರೋಗ್ಯ ಸೇವೆಯಲ್ಲಿರುವ ವೈದ್ಯರುಗಳೇ! ವ್ರವಾಸದುದ್ದಕ್ಕೂ ನೆರವಾದ ಸೊದರ ಡಾ. ನಾಗರಾಜ, ಡಾ. ಮುರುಡಪ್ಪ ಹಾಗೂ ಡಾ. ರ" ಸಾಣಿಕೊಪ್ಪ ಸ್ನೇ"ತರೆಲ್ಲ ""ದ ರೊಗಗಳ ತಜ್ಞರು. "ಗಿರುವಾಗ ದೇಶ ನೋಡಲು ಇವರು ನೆರವಾಗುತ್ತಾರೆ ಎಂಬ "ಶ್ವಾಸ ಫಲಕಾರಿಯಾತು. ನನ್ನ "ಂದಿನ ಬಹುಪಾಲು ಲೇಖನಗಳಲ್ಲಿ ಶಿಕ್ಷಣದ ಬಗ್ಗೆ ಸಾಕಷ್ಟು ಪ್ರಸ್ತಾಪಿಸಿದ್ದೆನೆ. ಅದು ಹೆಚ್ಚು ಅಥೆಂಟಿಕ್ ಆಗಲು ನಾನು ಶಿಕ್ಷಕನಿರುವುದೇ ಕಾರಣ. ಆದರೆ ನಾನು ಈ ಬಾರಿ ಪ್ರಸ್ತಾಪಿಸುವ " ಆರೋಗ್ಯ " ನನ್ನದಲ್ಲದ ಆದರೂ ನನಗೆ ಇಷ್ಟವಾದ ಕ್ಷೇತ್ರ!
ಇತ್ತೀಚಿಗೆ ನಮ್ಮ ದೇಶದಲ್ಲಿಯೂ ನಾವು ಸುಸಜ್ಜಿತ ಐಷಾರಾ" ಆಸ್ಪತ್ರೆಗಳನ್ನು ನೋಡಿದ್ದೆವೆ. ಹಾಗಾಗಿ ನನಗೆ ಇಲ್ಲಿನ ಆಸ್ಪತ್ರೆಗಳ ಭೌತಿಕ ಭವ್ಯತೆಯ ಬಗ್ಗೆ ಅಚ್ಚರಿಯಾಗಲಿಲ್ಲ. ಬೆಂಗಳೂರಿನಲ್ಲಿ ಅನೇಕ ಖಾಸಗಿ ಆಸ್ಪತ್ರೆಗಳು ಪಂಚತಾರಾ ಹೋಟೆಲ್‌ಗಳಾಗಿವೆ . ನಾನು ಚರ್ಚಿಸ ಬಯಸುವ "ಷಯ ಇಲ್ಲಿನ ಆಸ್ಪತ್ರೆಗಳ ಭವ್ಯತೆ ಅಲ್ಲ, ವೈದ್ಯರುಗಳ ಸೇವಾ "ಶಾಲತೆ. ಆಸ್ಪತ್ರೆ, ರೋಗಿ ಹಾಗೂ ವೈದ್ಯರುಗಳ ಸ್ಥಿತಿಯನ್ನು ಖುದ್ದಾಗಿ ನೋಡಬೇಕೆಂಬ ಉತ್ಸಾಹದಿಂದ ಒಂದು ದಿನವನ್ನು ಪೂರ್ಣ ಆರೋಗ್ಯ ದರ್ಶನಕ್ಕೆ "ಸಲಿಟ್ಟೆ.
"ಶ್ವ "ದ್ಯಾಲಯದ ಮೆಡಿಕಲ್ ಕಾಲೇಜ್ ಹಾಗೂ ಆಸ್ಪತ್ರೆ ಎರಡು ಒಂದೇ ಕಡೆ ಇದ್ದುದರಿಂದ ವೈದ್ಯಕೀಯ ಶಾಸ್ತ್ರವನ್ನು ಕಲಿಯುವ, ಕಲಿಸುವ ಹಾಗೂ ಚಿಕಿತ್ಸೆ ನೀಡುವ ಪದ್ಧತಿಯನ್ನು ಏಕಕಾಲಕ್ಕೆ ತಿಳಿಯಲು ಸಾಧ್ಯವಾತು. ಇಂದು ನಾವು ಭಾರತದಲ್ಲಿ ಅಳವಡಿಸಿಕೊಂಡಿರುವ "ಅಲೋಪತಿ" ಇಂಗ್ಲಿಷ್ ಮೆಡಿಸಿನ್ ಪದ್ಧತಿಯಾಗಿರುವುದರಿಂದ ನಮ್ಮ ಮೂಲ ಚಿಕಿತ್ಸಾ ಪದ್ದತಿ ಯೋಗ, ಆಯುರ್ವೇದ ನ"ಂದ ದೂರ ಸರಿದು ಮೂರು ಶತಮಾನಗಳು ಸಂದಿವೆ. ಈಗ ಮತ್ತೊಮ್ಮೆ ಯೋಗ, ಆಯುರ್ವೇದ, ಪ್ರಕೃತಿ ಚಿಕಿತ್ಸಾ "ಧಾನಗಳು ಬೆಳಕಿಗೆ ಬರುವ ಅನಿವಾರ್ಯ ಪರಿಸ್ಥಿತಿ ಉಂಟಾಗಲು ಆಲೋಪತಿ ವೈದ್ಯಕೀಯ ಪದ್ಧತಿಯ ದುರ್ಬಳಕೆಯೇ ಕಾರಣವೆನಿಸುತ್ತದೆ. ನಾವು ಬಹುಪಾಲು ನಂಬಿರುವ ಅಲೋಪತಿಯ ಮೂಲ ಯುರೋಪನಲ್ಲಿದೆ, ಆದರೆ ಆಚರಣೆ ಹಾಗೂ ಅನುಷ್ಠಾನಗಳಲ್ಲಿ ಪೂರ್ವ ಪಶ್ಚಿಮ ದಷ್ಟೇ ಅಂತರ"ದೆ !
"ಬದಲಾವಣೆ" ಎಂಬುದು ಯುರೋಪಿಯನ್ನರಿಗೆ ಅನಿವಾರ್ಯ, ಕಾಲ ಕಾಲಕ್ಕೆ ಉಂಟಾಗುವ ಬದಲಾವಣೆಯನ್ನು ಅವರು ಖಂಡಿತಾ ಸ್ವೀಕರಿಸುತ್ತಾರೆ ಆದರೆ ಯಾವುದೇ ಕ್ಷೇತ್ರಗಳಲ್ಲಿ 'ಬದಲಾವಣೆ ' ತರಬೇಕೆಂದರೆ ಆರಂಭದಲ್ಲಿಯೇ ಅನೇಕ ಸಮಸ್ಯೆಗಳನ್ನು ಎದುರಿಸುವ ವಾತಾವರಣ ನಮ್ಮ ದೇಶದಲ್ಲಿರುವದರಿಂದ 'ಬದಲಾವಣೆ' ಎಂಬ ಜೇನು ಹುಟ್ಟಿಗೆ ಕೈ ಹಾಕದೇ ಬರೀ ಗೊಣಗುತ್ತಾ ಸಾಗಿದ್ದೇವೆ.
ಇಂಗ್ಲೆಂಡಿನ ಜನ ರೋಗ ಶಾಸ್ತ್ರವನ್ನು ವೈದ್ಯರಷ್ಟೇ ಸಾಮರ್ಥವಾಗಿ ಅರಿತುಕೊಂಡ 'ಎಕ್ಸಪರ್ಟ್' ರೋಗಿಗಳು. ತಾವು ಕಟ್ಟುವ ' ಆರೋಗ್ಯ ತೆರಿಗೆ' ಸಮರ್ಪಕವಾಗಿ ಬಳಕೆಯಾಗಲಿ ಎಂದು ಬಯಸುತ್ತಾರೆ. ನಮ್ಮಲ್ಲಿರುವ ಹಾಗೆ ಅಲ್ಲಿಯೂ ಪ್ರಾಥ"ಕ ಆರೋಗ್ಯ ಕೇಂದ್ರ, ತಾಲೂಕು ಆರೋಗ್ಯ ಕೇಂದ್ರ ಹಾಗೂ ಜಿಲ್ಲಾ ಆರೋಗ್ಯ ಕೇಂದ್ರಗಳಿವೆ ಆದರೆ ಈ ಸರಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವರ್‍ಯಾರು? ಎಂಬುದೊಂದು ಯಕ್ಷ ಪ್ರಶ್ನೆ. ಈ ದೇಶದ ಶ್ರೀಮಂತರು ಅಧಿಕಾರಸ್ಥ ರಾಜಕಾರಣಿಗಳು, ಅಧಿಕಾರಿಗಳು ಎಂದಾದರೂ ಸರಕಾರಿ ವ್ಯವಸ್ಥೆಯ ಆಸ್ಪತ್ರೆಗಳಿಗೆ ಎಮರ್ಜನ್ಸಿ ಸ್ಥಿತಿಯಲ್ಲಿ ದಾಖಲಾಗುತ್ತಾರೆಯೇ? ಈ ಅವ್ಯವಸ್ಥೆಗೆ ನಾವು ಕೊಡುವ ಕಾರಣ ಅತೀಯಾದ ಜನಸಂಖ್ಯೆ ಎಂಬ ಅತಿರಂಜಿತ ವಾಖ್ಯಾನ . ಹೆಚ್ಚು ಜನಸಂಖ್ಯೆ ಹೆಚ್ಚು ರೋಗಿಗಳಿದ್ದಾಗಲೂ ವೈದ್ಯಕೀಯ ಸೇವೆಯನ್ನು ಸಮರ್ಪಕವಾಗಿ ಪೂರೈಸುವ ಪಕ್ಕದ ಚೀನಾ ದೇಶ ನಮಗೆ ಕಾಣಿಸುವುದೇ ಇಲ್ಲಾ. ಜನಸಂಖ್ಯೆ ಎಂಬ ಪಲಾಯನವಾದದ ಕಾರಣ ನೀಡಿ ವ್ಯವಸ್ಥೆಯನ್ನು ಸರಿದಾರಿಗೆ ತರಬೇಕು ಎಂಬ ಇಚ್ಚಾಶಕ್ತಿಯ ಕೊರತೆ ನಮ್ಮ ಎಲ್ಲ ಅವಾಂತರಗಳಿಗೆ ಕಾರಣವೆನ್ನಿಸದಿರದು ಎಲ್ಲ ಕ್ಷೇತ್ರಗಳಲ್ಲಿರುವಂತೆ ವೈದ್ಯಕೀಯ ಕ್ಷೇತ್ರದಲ್ಲಿಯೂ ಬ್ರಷ್ಟತೆದೆ. ಆದರೆ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳ ಭ್ರಷ್ಟತೆ ಹೆಚ್ಚು ಅಪಾಯಕಾರಿ ಎಂಬುದನ್ನು ನಾವು ತಿಳಿಯುವ ಅನಿವಾರ್‍ಯತೆದೆ. ಸರಕಾರಿ ಅಸ್ಪತ್ರೆಗಳ ಅವ್ಯವಸ್ಥೆಗೆ ಯಾರು ಕಾರಣ ಎಂಬುದನ್ನು ಇಲ್ಲಿ ಚರ್ಚಿಸುವುದು ಆಪ್ರಸ್ತುತ ಎಂದು ಭಾ"ಸಿ, ಅದನ್ನು ಬದಿಗಿರಿಸಿ ಇಂಗ್ಲೆಂಡ್‌ನ ಸರಕಾರಿ ಒಡೆತನದ ಆಸ್ಪತ್ರೆಗಳ ಸ್ಥಿತಿಯನ್ನು "ವರಿಸುವದು ಸೂಕ್ತವೆನಿಸುತ್ತದೆ.
ವೈದ್ಯಕೀಯ ಕ್ಷೇತ್ರದ ಮೊದಲ ಹಂತದ ಆರೋಗ್ಯ ನಿರ್ವಾಹಕರೆಂದರೆ ಇಲ್ಲಿನ ಜಿ.ಪಿ.ಗಳು ಇಲ್ಲಿನ 'ಜನರಲ್ ಪ್ರಾಕ್ಟೀಷ್‌ನರ್‍ಸ್' ಜನರ ಸಾಮಾನ್ಯ ರೋಗಗಳ ರಕ್ಷಕರಾಗಿದ್ದಾರೆ ಈ ಜಿ.ಪಿ ಗಳ ಸೇವೆ ಸಲ್ಲಿಸುವ ಆಸ್ಪತ್ರೆಗಳನ್ನು ನಾವು ಪ್ರಾಥ"ಕ ಆರೋಗ್ಯಕೆಂದ್ರಗಳಿಗೆ ಹೋಲಿಸಬಹುದು.ಇಲ್ಲಿನ ಪ್ರತಿ ಒಬ್ಬ ಜಿ.ಪಿ ವೈದ್ಯರುಗಳು ನಾಗರಿಕರನ್ನು ತಮ್ಮ ಸೇವಾ ಕ್ಷೇತ್ರಕ್ಕೆ ದಾಖಲಿಸಿಕೊಂಡಿರುತ್ತಾರೆ. ಇಲ್ಲಿನ ನಾಗರಿಕರು ತಾವು ನೋಂದಾಸಿದ ವೈದ್ಯರಿಂದಲೇ ಚಿಕಿತ್ಸೆ ಪಡೆಯಬೇಕು.ನೋಂದಾತ ರೋಗಿ ಹಾಗೂ ವೈದ್ಯರ ಮಧ್ಯೆ ಅ"ನಾಭಾವ ಸಂಬಂಧ"ರುತ್ತದೆ. ಹೆಚ್ಚು ಸೇವಾ ಪ್ರವೃತ್ತಿಯ ಮನೋಭಾವವುಳ್ಳ ಜಿ.ಪಿ ಗಳು ಹೆಚ್ಚು ನಾಗರಿಗಕರನ್ನು ನೊಂದಾಸಿಕೊಳ್ಳುತ್ತಾರೆ. ಇಂಗ್ಲೆಂಡ್ ಸರಕಾರದ ಆರೋಗ್ಯ ಇಲಾಖೆ ರ್‍ಟ್ರಾಯ ಆರೋಗ್ಯಸೇವೆ. ಎಂಬ ಸ್ವಾಯತ್ತ ಸಂಸ್ಥೆಗೆ ಹಣ ಬಿಡುಗಡೆಮಾಡುತ್ತದೆ ಎನ್,ಎಚ್, ಎಸ್ ಅತ್ಯಂತ ಪ್ರಾಮಾಣಿಕ, ಪಾರದರ್ಶಕ ಆಧಾರಿತ ನಿರ್ವಹಣೆಯ ಮೂಲಕ ಆರೋಗ್ಯ ಸೇವೆಯಲ್ಲಿ ತನ್ನನ್ನು ತೊಡಗಿಸಿಕೊಂಡಿದೆ. ವೈದ್ಯರ ನೇಮಕಾತಿ, ವೇತನ, ಸೇವಾ ಮಾದರಿಯನ್ನು ನಿರ್ವ"ಸುವ ಹೊಣೆಗಾರಿಕೆಯನ್ನು ಸಂಪೂರ್ಣ ಎನ್.ಎಚ್.ಎಸ್. ಹೆಗಲಿಗೆ ಹಾಕಿದ ಸರಕಾರ ಯಾವುದೇ ರೀತಿಯ ಹಸ್ತಕ್ಷೇಪ ಮಾಡುವದಿಲ್ಲ.
ಇಲ್ಲಿನ ಸ್ವಾಯತ್ತ ಸಂಸ್ಥೆಗಳು ಅಷ್ಟೇ ಪ್ರಾಮಾಣಿಕವಾಗಿ ತಮ್ಮ ಕರ್ತವ್ಯವನ್ನು ನಿರ್ವ"ಸುತ್ತವೆ. ಇಂಗ್ಲೆಂಡ್‌ನ ಎನ್.ಎಚ್.ಎಸ್. ತನ್ನ ಅಪ್ರತಿಮ ಸೇವೆಯ ಮೂಲಕ ಜಗತ್ತಿನಲ್ಲಿಯೇ ಹೆಸರುವಾಸಿಯಾಗಿದೆ. ಇಲ್ಲಿ ಬೇಸಿಕ್ ಶಿಕ್ಷಣ ಪಡೆದ ವೈದ್ಯರುಗಳು ಹೆಚ್ಚಿನ ಜವಾಬ್ದಾರಿಯನ್ನು ನಿರ್ವ"ಸುತ್ತಾರೆ. ಇದೇ ಕಾರಣದಿಂದ ಇಲ್ಲಿ ಬೇಸಿಕ್ ಶಿಕ್ಷಣ ಪಡೆದ ಜಿ.ಪಿ. ಗಳೇ ಹೆಚ್ಚು ಹಣ ಗಳಿಸುತ್ತಾರೆ. ನನಗಿದು ಅಚ್ಚರಿ ಎನಿಸಿತು. ಉನ್ನತ ವ್ಯಾಸಂಗ ಪಡೆದ ಸ್ಪೆಶಲಿಸ್ಟ್‌ಗಳು, ಕನ್ಸಲ್ಟಂಟ್‌ಗಳು, ನಿಗದಿತ ವೇತನದಲ್ಲಿ ಕೆಲಸ ಮಾಡುತ್ತಾರೆ. ಆದರೆ ಜಿ.ಪಿ ಗಳು ಅವರಿಗಿಂತಲೂ ಅಧಿಕ ಮೊತ್ತದ ವೇತನ ಪಡೆಯಲು ಬಲವಾದ ಕಾರಣವೂ ಇದೆ. ಉನ್ನತ ವ್ಯಾಸಂಗ ಪಡೆದ ನಿಪುಣ ವೈದ್ಯರು ಆಸ್ಪತ್ರೆಗಳಲ್ಲಿ ದಿನಕ್ಕೆ ಎಂಟು ತಾಸು ಕಾರ್ಯ ನಿರ್ವ"ಸುತ್ತಾರೆ. ಜಿ.ಪಿಗಳ ಮೂಲಕ ಆಸ್ಪತ್ರೆಗೆ ದಾಖಲಾದ ರೋಗಿಗಳನ್ನು ಪರೀಕ್ಷಿಸಿ ಚಿಕಿತ್ಸೆ ನೀಡುತ್ತಾರೆ. ಆದರೆ ಜಿ.ಪಿಗಳು ತಮ್ಮ ಆಸ್ಪತ್ರೆಯ ವ್ಯಾಪ್ತಿಯಲ್ಲಿ ನೊಂದಾತ ರೋಗಿಗಳ ಸೇವೆಗೆ ಸದಾ ಸನ್ನದ್ದರಾಗಿರಬೇಕು ಅಲ್ಲದೆ ಯಾವುದೆ ಸಂದರ್ಭದಲ್ಲಿ ಕರೆ ಬಂದರೆ ತಕ್ಷಣ ಹಾಜರಾಗಿ ವೈದ್ಯಕೀಯ ಸೇವೆ ನೀಡುವ ಒತ್ತಡ ಮತ್ತು ಜವಾಬ್ದಾರಿಯೂ ಇರುವದರಿಂದ ಜಿ.ಪಿಗಳು ಹೆಚ್ಚು ಹಣ ಪಡೆಯುವುದು ಅಸಮಂಜಸ ಅನಿಸುವದಿಲ್ಲ. ಜಿ.ಪಿಗಳದು ಪರಿಶ್ರಮದ ದುಡುಮೆಯಾದರೆ, ಸ್ಪೆಶಲಿಸ್ಟಗಳದು ಪರಿಣಿತಿಯ ಕುಶಲತೆಯಾಗಿದೆ. ಬೇಗ ಹಣ ಗಳಿಸುವ ಇಚ್ಛೆಯುಳ್ಳವರು ಜಿ.ಪಿಗಳಾಗುತ್ತಾರೆ. ""ದ ರೋಗಗಳಲ್ಲಿ ಪರಿಣಿತಿ ಪಡೆಯುವ ಆಸಕ್ತಿ ಹಾಗೂ ಸಹನೆವುಳ್ಳವರು ಸ್ಪೆಶಲಿಸ್ಟಗಳಾಗುತ್ತಾರೆ. ತಮಗೆ ಹೆಚ್ಚಿನ ಹಣದ ಅಗತ್ಯ ಕಂಡು ಬಂದರೆ ಹೆಚ್ಚುವರಿ ಕೆಲಸ ಮಾಡುವ ಅವಕಾಶವನ್ನು ಎನ್.ಎಚ್.ಎಸ್. ಕಲ್ಪಿಸಿಕೊಡುತ್ತದೆ. ಪ್ರಾಮಾಣಿಕವಾಗಿ ಸೇವೆ ಮಾಡಿದಾಗ ನೀರಿಕ್ಷೆಗಿಂತ ಹೆಚ್ಚು ಹಣ ಸಿಗುವಾಗ ಭ್ರಷ್ಟತೆ ಕಲ್ಪನೆ ಇಲ್ಲಿನ ವೈದ್ಯರ ಮನಸ್ಸಿನಲ್ಲಿ ಸುಳಿಯಲು ಸಾದ್ಯ"ಲ್ಲ. ಭ್ರಷ್ಟರಾಗದೆ ದುಡಿದ ಪ್ರೊಫೆಶನಲ್ ಸೆಟಿಸ್‌ಫೆಕ್ಷನ್ ಇಲ್ಲಿಯ ವೈದ್ಯರ ಪಾಲಿಗಿದೆ. ವೃತ್ತಿ ಘನತೆ, ಅಭಿಮಾನ, ಸೇವಾ ತತ್ಪರತೆ ಇದ್ದರೆ ಮಾತ್ರ ಇಲ್ಲಿ ಕೆಲಸ ಮಾಡಲು ಸಾಧ್ಯ. ರೋಗಿಗಳನ್ನು ಕಾಳಜಿಂದ ನೋಡಿಕೊಳ್ಳುವುದಲ್ಲದೆ, ನಯವಾಗಿ ವರ್ತಿಸುವುದು ಅಷ್ಟೇ ಅಗತ್ಯ"ದೆ. ವಯಸ್ಸಾದ ರೋಗಿಗಳಿಗೆ ಚಿಕಿತ್ಸೆ ನೀಡುವಾಗ "ರಿಯ ವೈದ್ಯರೇ ಮಂಡಿಯೂರಿ ಕುಳಿತಿದ್ದು ನನಗೆ "ಸ್ಮಯವೆನಿಸಿತು. ಚಿಕಿತ್ಸೆ ನೀಡುವ ಎಲ್ಲ ಔಷಧಿಗಳ ಕುರಿತು ರೋಗಿಗೆ "ವರಿಸಬೇಕು. ರೋಗಕ್ಕೆ ಅಪಥ್ಯವಾದ ಚಟಗಳಿದ್ದರೂ ರೋಗಿಗಳಿಗೆ ತೀಕ್ಷ್ಣವಾಗಿ ಮಾತನಾಡದೇ ಸಿಗರೇಟ್ ಸೇದಲು, ಮದ್ಯಪಾನ ಸೇ"ಸಲು ಸ್ವತಃ ವೈದ್ಯರೇ ನೆರವಾಗಬೇಕು. ತಕ್ಷಣ ನಿಲ್ಲಿಸಲು ಆದೇಶಿಸುವಂತಿಲ್ಲ. ಬಡವರು, ಶ್ರೀಮಂತರು ಎಂಬ ಬೇಧಭಾವ"ಲ್ಲದೆ ರೋಗಿಗಳನ್ನು ಪ್ರೀತಿಂದ ಕಾಣಬೇಕು. ಇಲ್ಲಿ ರೋಗಕ್ಕೆ ತಕ್ಕ ವಾರ್ಡುಗಳನ್ನು ಒದಗಿಸಲಾಗುತ್ತದೆ, ರೋಗಿಯ ಘನತೆಗೆ ತಕ್ಕಹಾಗೆ ಅಲ್ಲ! ರೋಗಿ ಎಷ್ಟೇ ಉನ್ನತ ಸ್ಥಾನದಲ್ಲಿದ್ದರೂ ಉಳಿದ ರೋಗಿಗಳಂತೆ ಸಮಾನವಾಗಿ ಕಾಣಲಾಗುವುದು. ಆಸ್ಪತ್ರೆಯ ಈ ಎಲ್ಲ "ವರಗಳನ್ನು ಕೇಳಿ, ಕಣ್ಣಾರೆ ಕಂಡು ಕೆಲ ಕ್ಷಣ ಕಣ್ಣು ಮುಚ್ಚಿಕೊಂಡು ನಮ್ಮ ದೇಶದ ಸರಕಾರಿ ಆಸ್ಪತ್ರೆಗಳನ್ನು ನೆನಪಿಸಿಕೊಂಡೆ. ನನಗೆ ಅನಿಸಿರುವುದನ್ನು ನಿಮ್ಮ ಊಹೆಗೆ ಬಿಡುತ್ತೇನೆ.

Read more...

ವೈದ್ಯ ಸೇವಕ, ರೋಗಿ -ಯಜಮಾನ, ರೋಗ -ನಿರಾತಂಕ


ಕನ್ನಡ ನಾಡಲ್ಲಿ ಹುಟ್ಟಬೇಕು ಎಂಬ ಡಾ ರಾಜ್ ಅವರ ಜನಪ್ರಿಯ ಹಾಡು ನನಗೆ ಇಂಗ್ಲೆಂಡ್‌ನಲ್ಲಿ ಸದಾ ನೆನಪಾಗುತ್ತಿತ್ತು . ನಮ್ಮ ಊರು, ಆಹಾರ, ಸಂಸ್ಕ್ರತಿ ಹಾಗೂ ಜನಜೀವನದ ಮಹತ್ವದ ಅರಿವಾಗಬೇಕಾದರೆ ದೇಶಗಳನ್ನು ಸುತ್ತಬೇಕು. ಇದು ಬದುಕಿನ ಒಂದು ಮುಖವಾದರೆ, ಇನ್ನೊಂದೆಡೆ ನಮ್ಮ ನಾಡಿನ ಸಮಸ್ಯೆಗಳು ಕೂಡಾ ಅಷ್ಟೇ ದಟ್ಟವಾಗಿ ನಮ್ಮನ್ನು ಹೊರದೇಶಗಳಲ್ಲಿ ಕಾಡುತ್ತವೆ. ಒಮ್ಮೊಮ್ಮೆ ದೇಶಿ ವ್ಯಾಮೋಹಕ್ಕೆ ಬಿದ್ದು ನಮ್ಮದೆಲ್ಲವು ಸರಿಲ್ಲ ಎಂದು ಅನಗತ್ಯ ಟೀಕಿಸುವ ಸಿನಿಕತನವು ಇರುತ್ತದೆ. ಅದೇ ಸಿನಿಕತನವನ್ನು ಬದಿಗಿರಿಸಿ ವಾಸ್ತವದ ಹಿನ್ನೆಲೆಯಲ್ಲಿ,ಹಿಡಿತದ ಒಳನೋಟ ಇಟ್ಟುಕೊಂಡು ಭಾವಾವೇಶಕ್ಕೆ ಒಳಗಾಗದೆ ಬೇರ ದೇಶಗಳನ್ನು ನೋಡಿದಾಗ ಸಹಜ ಚಿತ್ರಣ ನಮ್ಮ ಕಣೆದಿರು ತೆರೆದುಕೊಳ್ಳುತ್ತದೆ.
ಈ ಹಿನ್ನಲೆಯಲ್ಲಿ ನಾನು ಇಂಗ್ಲೆಂಡ್ ದೇಶವನ್ನು ನೋಡಲಾರಂಭಿಸಿದೆ. ಅವರ ವಾಸ್ತವವಾದ, ವ್ಯಕ್ತಿಕೇಂದ್ರಿತ ಬದುಕು ,ಒಡೆದ ಮಡಿಕೆಯಂತಹ ಸಾಂಸಾರಿಕ ಜೀವನ, ಪ್ರಾಮಾಣಿಕತೆ ,ಅಹಂಕಾರ, ದೇಶಪ್ರೇಮ ,ಸ್ವಚ್ಛತೆ, ಸ್ವಚ್ಛಂದ ಮುಕ್ತ ಜೀವನ ಶೈಲಿ ಹೀಗೆ ಒಂದಕ್ಕೊಂದು ಸಮೀಕರಿಸಿಕೊಳ್ಳಲು ಕಷ್ಟವಾಗುತ್ತಿತ್ತು. ಅವರು ಶ್ರೇಷ್ಠ, ನಾವು ಕನಿಷ್ಠ ಎಂಬ ನಿರ್ಣಾಯಕ ಅಭಿಪ್ರಾಯವು ಅಸಮಂಜಸ. ನೈತಿಕವಾಗಿ ನಾವು ಪರಮ ಶ್ರೇಷ್ಠರು ಎಂಬ ನಮ್ಮವರ ವಾದವೂ ನನಗೆ ಅರ್ಥಹೀನ ವೆನಿಸಿತು ಮನದ ತುಂಬ ಮೈಲಿಗೆಯನ್ನುಟ್ಟುಕೊಂಡು ಶೀಲದ ಮಾತಾಡುವ ಘನ ಚಾರಿತ್ರ್ಯ ನಮಗೇನು ಹೊಸದಲ್ಲವಲ್ಲ? ಇರಲಿಬಿಡಿ ಕಳೆದ ಇಪ್ಪತ್ತೈದು ವಾರಗಳಿಂದ ನನ್ನ ನೀರಿಕ್ಷೆಗೂ ಮೀರಿ ಅನೇಕ ಅನುಭವಗಳನ್ನು ದಾಖಲಿಸಿದ್ದೇನೆ. ಯಾವುದೇ ನಿರ್ಣಾಯಕ ಅಭಿಪ್ರಾಯ ನೀಡದೆ ಕೇವಲ ನನಗೆ ಅನಿಸದ್ದನ್ನು ಅಲ್ಲಿ ಕಂಡ ಐತಿಹಾಸಿಕ ಸಂಗತಿಗಳನ್ನು ತಮ್ಮೆದುರು ನಿವೇದಿಸಿದ್ದೇನೆ.
ನಮ್ಮ ದೇಶದವರೇ ಆದ ಖ್ಯಾತ ಅರ್ಥಶಾಸ್ತ್ರಜ್ಞ "ಆಮಾರ್ತ್ಯಸೆನ್" ಒಂದು ದೇಶದ ಅಭಿವೃದ್ಧಿಯನ್ನು ಹೀಗೆ ವಿವರಿಸುತ್ತಾರೆ ,ಆರೋಗ್ಯ, ಶಿಕ್ಷಣ ಹಾಗೂ ವರಮಾನ ದೇಶವನ್ನು ಸಮರ್ಥವಾಗಿ ಕಟ್ಟುವ ಹಾಗೂ ಕಾಣುವ ಪ್ರಕ್ರೀಯೆಯಾಗಬೇಕು ಎಂದು.
ಅಮಾರ್ತ್ಯಸೆನ್ ರ ಇದೇ ಸೂತ್ರವನ್ನು ಒಬ್ಬ ವ್ಯಕ್ತಿಯ ವಿಕಸನಕ್ಕೂ ಅನ್ವುಸಿಕೊಳ್ಳಬಹುದು ಈ ಮಾತನ್ನು ವ್ಯಕ್ತಿತ್ವ ವಿಕಸನ ತರಬೇತಿಯ ಸಂದರ್ಭದಲ್ಲಿ ನಾನು ಅನೇಕ ಸಾರಿ ಮೆಲುಕು ಹಾಕುತ್ತೇನೆ . ಇದೇ ಸೂತ್ರವನ್ನು ಮನಸ್ಸಿನಲ್ಲಿಟ್ಟುಕೊಂಡು ಇಂಗ್ಲೆಂಡ್'ನ ಆರೋಗ್ಯದ ಸ್ಥಿತಿಗಿತಿಯನ್ನು ನೋಡಲು ನಿರ್ಧರಿಸಿದ್ದೆ. ಅದಕ್ಕೆ ಆವಕಾಶ ಸಿಗುತ್ತದೆ ಎಂಬ ನಂಬಿಕೆಯೂ ಇತ್ತು . ಯಾಕೆದಂರೆ ನನ್ನನ್ನು ಇಂಗ್ಲೆಂಡ್ ಗೆ ಆಹ್ವಾನಿಸಿದವರೆಲ್ಲ ಆರೋಗ್ಯ ಸೇವೆಯಲ್ಲಿರುವ ವೈದ್ಯರುಗಳೇ! ವ್ರವಾಸದುದ್ದಕ್ಕೂ ನೆರವಾದ ಸೊದರ ಡಾ. ನಾಗರಾಜ, ಡಾ. ಮುರುಡಪ್ಪ ಹಾಗೂ ಡಾ. ರವಿ ಸಾಣಿಕೊಪ್ಪ ಸ್ನೇಹಿತರೆಲ್ಲ ವಿವಿದ ರೊಗಗಳ ತಜ್ಞರು. ಹೀಗಿರುವಾಗ ದೇಶ ನೋಡಲು ಇವರು ನೆರವಾಗುತ್ತಾರೆ ಎಂಬ ವಿಶ್ವಾಸ ಫಲಕಾರಿಯಾತು. ನನ್ನ ಹಿಂದಿನ ಬಹುಪಾಲು ಲೇಖನಗಳಲ್ಲಿ ಶಿಕ್ಷಣದ ಬಗ್ಗೆ ಸಾಕಷ್ಟು ಪ್ರಸ್ತಾಪಿಸಿದ್ದೆನೆ. ಅದು ಹೆಚ್ಚು ಅಥೆಂಟಿಕ್ ಆಗಲು ನಾನು ಶಿಕ್ಷಕನಿರುವುದೇ ಕಾರಣ. ಆದರೆ ನಾನು ಈ ಬಾರಿ ಪ್ರಸ್ತಾಪಿಸುವ " ಆರೋಗ್ಯ " ನನ್ನದಲ್ಲದ ಆದರೂ ನನಗೆ ಇಷ್ಟವಾದ ಕ್ಷೇತ್ರ!
ಇತ್ತೀಚಿಗೆ ನಮ್ಮ ದೇಶದಲ್ಲಿಯೂ ನಾವು ಸುಸಜ್ಜಿತ ಐಷಾರಾಮಿ ಆಸ್ಪತ್ರೆಗಳನ್ನು ನೋಡಿದ್ದೆವೆ. ಹಾಗಾಗಿ ನನಗೆ ಇಲ್ಲಿನ ಆಸ್ಪತ್ರೆಗಳ ಭೌತಿಕ ಭವ್ಯತೆಯ ಬಗ್ಗೆ ಅಚ್ಚರಿಯಾಗಲಿಲ್ಲ. ಬೆಂಗಳೂರಿನಲ್ಲಿ ಅನೇಕ ಖಾಸಗಿ ಆಸ್ಪತ್ರೆಗಳು ಪಂಚತಾರಾ ಹೋಟೆಲ್‌ಗಳಾಗಿವೆ . ನಾನು ಚರ್ಚಿಸ ಬಯಸುವ ವಿಷಯ ಇಲ್ಲಿನ ಆಸ್ಪತ್ರೆಗಳ ಭವ್ಯತೆ ಅಲ್ಲ, ವೈದ್ಯರುಗಳ ಸೇವಾ ವೈಶಾಲತೆ. ಆಸ್ಪತ್ರೆ, ರೋಗಿ ಹಾಗೂ ವೈದ್ಯರುಗಳ ಸ್ಥಿತಿಯನ್ನು ಖುದ್ದಾಗಿ ನೋಡಬೇಕೆಂಬ ಉತ್ಸಾಹದಿಂದ ಒಂದು ದಿನವನ್ನು ಪೂರ್ಣ ಆರೋಗ್ಯ ದರ್ಶನಕ್ಕೆ ಮೀಸಲಿಟ್ಟೆ.
ವಿಶ್ವ ವಿದ್ಯಾಲಯದ ಮೆಡಿಕಲ್ ಕಾಲೇಜ್ ಹಾಗೂ ಆಸ್ಪತ್ರೆ ಎರಡು ಒಂದೇ ಕಡೆ ಇದ್ದುದರಿಂದ ವೈದ್ಯಕೀಯ ಶಾಸ್ತ್ರವನ್ನು ಕಲಿಯುವ, ಕಲಿಸುವ ಹಾಗೂ ಚಿಕಿತ್ಸೆ ನೀಡುವ ಪದ್ಧತಿಯನ್ನು ಏಕಕಾಲಕ್ಕೆ ತಿಳಿಯಲು ಸಾಧ್ಯವಾಯಿತು. ಇಂದು ನಾವು ಭಾರತದಲ್ಲಿ ಅಳವಡಿಸಿಕೊಂಡಿರುವ "ಅಲೋಪತಿ" ಇಂಗ್ಲಿಷ್ ಮೆಡಿಸಿನ್ ಪದ್ಧತಿಯಾಗಿರುವುದರಿಂದ ನಮ್ಮ ಮೂಲ ಚಿಕಿತ್ಸಾ ಪದ್ದತಿ ಯೋಗ, ಆಯುರ್ವೇದ ನಮ್ಮಿಂದ ದೂರ ಸರಿದು ಮೂರು ಶತಮಾನಗಳು ಸಂದಿವೆ. ಈಗ ಮತ್ತೊಮ್ಮೆ ಯೋಗ, ಆಯುರ್ವೇದ, ಪ್ರಕೃತಿ ಚಿಕಿತ್ಸಾ ವಿಧಾನಗಳು ಬೆಳಕಿಗೆ ಬರುವ ಅನಿವಾರ್ಯ ಪರಿಸ್ಥಿತಿ ಉಂಟಾಗಲು ಆಲೋಪತಿ ವೈದ್ಯಕೀಯ ಪದ್ಧತಿಯ ದುರ್ಬಳಕೆಯೇ ಕಾರಣವೆನಿಸುತ್ತದೆ. ನಾವು ಬಹುಪಾಲು ನಂಬಿರುವ ಅಲೋಪತಿಯ ಮೂಲ ಯುರೋಪನಲ್ಲಿದೆ, ಆದರೆ ಆಚರಣೆ ಹಾಗೂ ಅನುಷ್ಠಾನಗಳಲ್ಲಿ ಪೂರ್ವ ಪಶ್ಚಿಮ ದಷ್ಟೇ ಅಂತರವಿದೆ !
"ಬದಲಾವಣೆ" ಎಂಬುದು ಯುರೋಪಿಯನ್ನರಿಗೆ ಅನಿವಾರ್ಯ, ಕಾಲ ಕಾಲಕ್ಕೆ ಉಂಟಾಗುವ ಬದಲಾವಣೆಯನ್ನು ಅವರು ಖಂಡಿತಾ ಸ್ವೀಕರಿಸುತ್ತಾರೆ ಆದರೆ ಯಾವುದೇ ಕ್ಷೇತ್ರಗಳಲ್ಲಿ 'ಬದಲಾವಣೆ ' ತರಬೇಕೆಂದರೆ ಆರಂಭದಲ್ಲಿಯೇ ಅನೇಕ ಸಮಸ್ಯೆಗಳನ್ನು ಎದುರಿಸುವ ವಾತಾವರಣ ನಮ್ಮ ದೇಶದಲ್ಲಿರುವದರಿಂದ 'ಬದಲಾವಣೆ' ಎಂಬ ಜೇನು ಹುಟ್ಟಿಗೆ ಕೈ ಹಾಕದೇ ಬರೀ ಗೊಣಗುತ್ತಾ ಸಾಗಿದ್ದೇವೆ.
ಇಂಗ್ಲೆಂಡಿನ ಜನ ರೋಗ ಶಾಸ್ತ್ರವನ್ನು ವೈದ್ಯರಷ್ಟೇ ಸಾಮರ್ಥವಾಗಿ ಅರಿತುಕೊಂಡ 'ಎಕ್ಸಪರ್ಟ್' ರೋಗಿಗಳು. ತಾವು ಕಟ್ಟುವ ' ಆರೋಗ್ಯ ತೆರಿಗೆ' ಸಮರ್ಪಕವಾಗಿ ಬಳಕೆಯಾಗಲಿ ಎಂದು ಬಯಸುತ್ತಾರೆ. ನಮ್ಮಲ್ಲಿರುವ ಹಾಗೆ ಅಲ್ಲಿಯೂ ಪ್ರಾಥಮಿಕ ಆರೋಗ್ಯ ಕೇಂದ್ರ, ತಾಲೂಕು ಆರೋಗ್ಯ ಕೇಂದ್ರ ಹಾಗೂ ಜಿಲ್ಲಾ ಆರೋಗ್ಯ ಕೇಂದ್ರಗಳಿವೆ ಆದರೆ ಈ ಸರಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವರ್‍ಯಾರು? ಎಂಬುದೊಂದು ಯಕ್ಷ ಪ್ರಶ್ನೆ. ಈ ದೇಶದ ಶ್ರೀಮಂತರು ಅಧಿಕಾರಸ್ಥ ರಾಜಕಾರಣಿಗಳು, ಅಧಿಕಾರಿಗಳು ಎಂದಾದರೂ ಸರಕಾರಿ ವ್ಯವಸ್ಥೆಯ ಆಸ್ಪತ್ರೆಗಳಿಗೆ ಎಮರ್ಜನ್ಸಿ ಸ್ಥಿತಿಯಲ್ಲಿ ದಾಖಲಾಗುತ್ತಾರೆಯೇ? ಈ ಅವ್ಯವಸ್ಥೆಗೆ ನಾವು ಕೊಡುವ ಕಾರಣ ಅತೀಯಾದ ಜನಸಂಖ್ಯೆ ಎಂಬ ಅತಿರಂಜಿತ ವಾಖ್ಯಾನ . ಹೆಚ್ಚು ಜನಸಂಖ್ಯೆ ಹೆಚ್ಚು ರೋಗಿಗಳಿದ್ದಾಗಲೂ ವೈದ್ಯಕೀಯ ಸೇವೆಯನ್ನು ಸಮರ್ಪಕವಾಗಿ ಪೂರೈಸುವ ಪಕ್ಕದ ಚೀನಾ ದೇಶ ನಮಗೆ ಕಾಣಿಸುವುದೇ ಇಲ್ಲಾ. ಜನಸಂಖ್ಯೆ ಎಂಬ ಪಲಾಯನವಾದದ ಕಾರಣ ನೀಡಿ ವ್ಯವಸ್ಥೆಯನ್ನು ಸರಿದಾರಿಗೆ ತರಬೇಕು ಎಂಬ ಇಚ್ಚಾಶಕ್ತಿಯ ಕೊರತೆ ನಮ್ಮ ಎಲ್ಲ ಅವಾಂತರಗಳಿಗೆ ಕಾರಣವೆನ್ನಿಸದಿರದು ಎಲ್ಲ ಕ್ಷೇತ್ರಗಳಲ್ಲಿರುವಂತೆ ವೈದ್ಯಕೀಯ ಕ್ಷೇತ್ರದಲ್ಲಿಯೂ ಬ್ರಷ್ಟತೆದೆ. ಆದರೆ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳ ಭ್ರಷ್ಟತೆ ಹೆಚ್ಚು ಅಪಾಯಕಾರಿ ಎಂಬುದನ್ನು ನಾವು ತಿಳಿಯುವ ಅನಿವಾರ್‍ಯತೆದೆ. ಸರಕಾರಿ ಅಸ್ಪತ್ರೆಗಳ ಅವ್ಯವಸ್ಥೆಗೆ ಯಾರು ಕಾರಣ ಎಂಬುದನ್ನು ಇಲ್ಲಿ ಚರ್ಚಿಸುವುದು ಆಪ್ರಸ್ತುತ ಎಂದು ಭಾವಿಸಿ, ಅದನ್ನು ಬದಿಗಿರಿಸಿ ಇಂಗ್ಲೆಂಡ್‌ನ ಸರಕಾರಿ ಒಡೆತನದ ಆಸ್ಪತ್ರೆಗಳ ಸ್ಥಿತಿಯನ್ನು ವಿವರಿಸುವದು ಸೂಕ್ತವೆನಿಸುತ್ತದೆ.
ವೈದ್ಯಕೀಯ ಕ್ಷೇತ್ರದ ಮೊದಲ ಹಂತದ ಆರೋಗ್ಯ ನಿರ್ವಾಹಕರೆಂದರೆ ಇಲ್ಲಿನ ಜಿ.ಪಿ.ಗಳು ಇಲ್ಲಿನ 'ಜನರಲ್ ಪ್ರಾಕ್ಟೀಷ್‌ನರ್‍ಸ್' ಜನರ ಸಾಮಾನ್ಯ ರೋಗಗಳ ರಕ್ಷಕರಾಗಿದ್ದಾರೆ ಈ ಜಿ.ಪಿ ಗಳ ಸೇವೆ ಸಲ್ಲಿಸುವ ಆಸ್ಪತ್ರೆಗಳನ್ನು ನಾವು ಪ್ರಾಥಮಿಕ ಆರೋಗ್ಯಕೆಂದ್ರಗಳಿಗೆ ಹೋಲಿಸಬಹುದು.ಇಲ್ಲಿನ ಪ್ರತಿ ಒಬ್ಬ ಜಿ.ಪಿ ವೈದ್ಯರುಗಳು ನಾಗರಿಕರನ್ನು ತಮ್ಮ ಸೇವಾ ಕ್ಷೇತ್ರಕ್ಕೆ ದಾಖಲಿಸಿಕೊಂಡಿರುತ್ತಾರೆ. ಇಲ್ಲಿನ ನಾಗರಿಕರು ತಾವು ನೋಂದಾಸಿದ ವೈದ್ಯರಿಂದಲೇ ಚಿಕಿತ್ಸೆ ಪಡೆಯಬೇಕು.ನೋಂದಾಯಿತ ರೋಗಿ ಹಾಗೂ ವೈದ್ಯರ ಮಧ್ಯೆ ಅವಿನಾಭಾವ ಸಂಬಂಧವಿರುತ್ತದೆ. ಹೆಚ್ಚು ಸೇವಾ ಪ್ರವೃತ್ತಿಯ ಮನೋಭಾವವುಳ್ಳ ಜಿ.ಪಿ ಗಳು ಹೆಚ್ಚು ನಾಗರಿಗಕರನ್ನು ನೊಂದಾಸಿಕೊಳ್ಳುತ್ತಾರೆ. ಇಂಗ್ಲೆಂಡ್ ಸರಕಾರದ ಆರೋಗ್ಯ ಇಲಾಖೆ ರ್‍ಟ್ರಾಯ ಆರೋಗ್ಯಸೇವೆ. ಎಂಬ ಸ್ವಾಯತ್ತ ಸಂಸ್ಥೆಗೆ ಹಣ ಬಿಡುಗಡೆಮಾಡುತ್ತದೆ ಎನ್,ಎಚ್, ಎಸ್ ಅತ್ಯಂತ ಪ್ರಾಮಾಣಿಕ, ಪಾರದರ್ಶಕ ಆಧಾರಿತ ನಿರ್ವಹಣೆಯ ಮೂಲಕ ಆರೋಗ್ಯ ಸೇವೆಯಲ್ಲಿ ತನ್ನನ್ನು ತೊಡಗಿಸಿಕೊಂಡಿದೆ. ವೈದ್ಯರ ನೇಮಕಾತಿ, ವೇತನ, ಸೇವಾ ಮಾದರಿಯನ್ನು ನಿರ್ವಹಿಸುವ ಹೊಣೆಗಾರಿಕೆಯನ್ನು ಸಂಪೂರ್ಣ ಎನ್.ಎಚ್.ಎಸ್. ಹೆಗಲಿಗೆ ಹಾಕಿದ ಸರಕಾರ ಯಾವುದೇ ರೀತಿಯ ಹಸ್ತಕ್ಷೇಪ ಮಾಡುವದಿಲ್ಲ.
ಇಲ್ಲಿನ ಸ್ವಾಯತ್ತ ಸಂಸ್ಥೆಗಳು ಅಷ್ಟೇ ಪ್ರಾಮಾಣಿಕವಾಗಿ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತವೆ. ಇಂಗ್ಲೆಂಡ್‌ನ ಎನ್.ಎಚ್.ಎಸ್. ತನ್ನ ಅಪ್ರತಿಮ ಸೇವೆಯ ಮೂಲಕ ಜಗತ್ತಿನಲ್ಲಿಯೇ ಹೆಸರುವಾಸಿಯಾಗಿದೆ. ಇಲ್ಲಿ ಬೇಸಿಕ್ ಶಿಕ್ಷಣ ಪಡೆದ ವೈದ್ಯರುಗಳು ಹೆಚ್ಚಿನ ಜವಾಬ್ದಾರಿಯನ್ನು ನಿರ್ವಹಿಸುತ್ತಾರೆ. ಇದೇ ಕಾರಣದಿಂದ ಇಲ್ಲಿ ಬೇಸಿಕ್ ಶಿಕ್ಷಣ ಪಡೆದ ಜಿ.ಪಿ. ಗಳೇ ಹೆಚ್ಚು ಹಣ ಗಳಿಸುತ್ತಾರೆ. ನನಗಿದು ಅಚ್ಚರಿ ಎನಿಸಿತು. ಉನ್ನತ ವ್ಯಾಸಂಗ ಪಡೆದ ಸ್ಪೆಶಲಿಸ್ಟ್‌ಗಳು, ಕನ್ಸಲ್ಟಂಟ್‌ಗಳು, ನಿಗದಿತ ವೇತನದಲ್ಲಿ ಕೆಲಸ ಮಾಡುತ್ತಾರೆ. ಆದರೆ ಜಿ.ಪಿ ಗಳು ಅವರಿಗಿಂತಲೂ ಅಧಿಕ ಮೊತ್ತದ ವೇತನ ಪಡೆಯಲು ಬಲವಾದ ಕಾರಣವೂ ಇದೆ. ಉನ್ನತ ವ್ಯಾಸಂಗ ಪಡೆದ ನಿಪುಣ ವೈದ್ಯರು ಆಸ್ಪತ್ರೆಗಳಲ್ಲಿ ದಿನಕ್ಕೆ ಎಂಟು ತಾಸು ಕಾರ್ಯ ನಿರ್ವಹಿಸುತ್ತಾರೆ. ಜಿ.ಪಿಗಳ ಮೂಲಕ ಆಸ್ಪತ್ರೆಗೆ ದಾಖಲಾದ ರೋಗಿಗಳನ್ನು ಪರೀಕ್ಷಿಸಿ ಚಿಕಿತ್ಸೆ ನೀಡುತ್ತಾರೆ. ಆದರೆ ಜಿ.ಪಿಗಳು ತಮ್ಮ ಆಸ್ಪತ್ರೆಯ ವ್ಯಾಪ್ತಿಯಲ್ಲಿ ನೊಂದಾತ ರೋಗಿಗಳ ಸೇವೆಗೆ ಸದಾ ಸನ್ನದ್ದರಾಗಿರಬೇಕು ಅಲ್ಲದೆ ಯಾವುದೆ ಸಂದರ್ಭದಲ್ಲಿ ಕರೆ ಬಂದರೆ ತಕ್ಷಣ ಹಾಜರಾಗಿ ವೈದ್ಯಕೀಯ ಸೇವೆ ನೀಡುವ ಒತ್ತಡ ಮತ್ತು ಜವಾಬ್ದಾರಿಯೂ ಇರುವದರಿಂದ ಜಿ.ಪಿಗಳು ಹೆಚ್ಚು ಹಣ ಪಡೆಯುವುದು ಅಸಮಂಜಸ ಅನಿಸುವದಿಲ್ಲ. ಜಿ.ಪಿಗಳದು ಪರಿಶ್ರಮದ ದುಡುಮೆಯಾದರೆ, ಸ್ಪೆಶಲಿಸ್ಟಗಳದು ಪರಿಣಿತಿಯ ಕುಶಲತೆಯಾಗಿದೆ. ಬೇಗ ಹಣ ಗಳಿಸುವ ಇಚ್ಛೆಯುಳ್ಳವರು ಜಿ.ಪಿಗಳಾಗುತ್ತಾರೆ. ವಿವಿದ ರೋಗಗಳಲ್ಲಿ ಪರಿಣಿತಿ ಪಡೆಯುವ ಆಸಕ್ತಿ ಹಾಗೂ ಸಹನೆವುಳ್ಳವರು ಸ್ಪೆಶಲಿಸ್ಟಗಳಾಗುತ್ತಾರೆ. ತಮಗೆ ಹೆಚ್ಚಿನ ಹಣದ ಅಗತ್ಯ ಕಂಡು ಬಂದರೆ ಹೆಚ್ಚುವರಿ ಕೆಲಸ ಮಾಡುವ ಅವಕಾಶವನ್ನು ಎನ್.ಎಚ್.ಎಸ್. ಕಲ್ಪಿಸಿಕೊಡುತ್ತದೆ. ಪ್ರಾಮಾಣಿಕವಾಗಿ ಸೇವೆ ಮಾಡಿದಾಗ ನೀರಿಕ್ಷೆಗಿಂತ ಹೆಚ್ಚು ಹಣ ಸಿಗುವಾಗ ಭ್ರಷ್ಟತೆ ಕಲ್ಪನೆ ಇಲ್ಲಿನ ವೈದ್ಯರ ಮನಸ್ಸಿನಲ್ಲಿ ಸುಳಿಯಲು ಸಾದ್ಯವಿಲ್ಲ. ಭ್ರಷ್ಟರಾಗದೆ ದುಡಿದ ಪ್ರೊಫೆಶನಲ್ ಸೆಟಿಸ್‌ಫೆಕ್ಷನ್ ಇಲ್ಲಿಯ ವೈದ್ಯರ ಪಾಲಿಗಿದೆ. ವೃತ್ತಿ ಘನತೆ, ಅಭಿಮಾನ, ಸೇವಾ ತತ್ಪರತೆ ಇದ್ದರೆ ಮಾತ್ರ ಇಲ್ಲಿ ಕೆಲಸ ಮಾಡಲು ಸಾಧ್ಯ. ರೋಗಿಗಳನ್ನು ಕಾಳಜಿಂದ ನೋಡಿಕೊಳ್ಳುವುದಲ್ಲದೆ, ನಯವಾಗಿ ವರ್ತಿಸುವುದು ಅಷ್ಟೇ ಅಗತ್ಯವಿದೆ. ವಯಸ್ಸಾದ ರೋಗಿಗಳಿಗೆ ಚಿಕಿತ್ಸೆ ನೀಡುವಾಗ ಹಿರಿಯ ವೈದ್ಯರೇ ಮಂಡಿಯೂರಿ ಕುಳಿತಿದ್ದು ನನಗೆ ವಿಸ್ಮಯವೆನಿಸಿತು. ಚಿಕಿತ್ಸೆ ನೀಡುವ ಎಲ್ಲ ಔಷಧಿಗಳ ಕುರಿತು ರೋಗಿಗೆ ವಿವರಿಸಬೇಕು. ರೋಗಕ್ಕೆ ಅಪಥ್ಯವಾದ ಚಟಗಳಿದ್ದರೂ ರೋಗಿಗಳಿಗೆ ತೀಕ್ಷ್ಣವಾಗಿ ಮಾತನಾಡದೇ ಸಿಗರೇಟ್ ಸೇದಲು, ಮದ್ಯಪಾನ ಸೇವಿಸಲು ಸ್ವತಃ ವೈದ್ಯರೇ ನೆರವಾಗಬೇಕು. ತಕ್ಷಣ ನಿಲ್ಲಿಸಲು ಆದೇಶಿಸುವಂತಿಲ್ಲ. ಬಡವರು, ಶ್ರೀಮಂತರು ಎಂಬ ಬೇಧಭಾವವಿಲ್ಲದೆ ರೋಗಿಗಳನ್ನು ಪ್ರೀತಿಂದ ಕಾಣಬೇಕು. ಇಲ್ಲಿ ರೋಗಕ್ಕೆ ತಕ್ಕ ವಾರ್ಡುಗಳನ್ನು ಒದಗಿಸಲಾಗುತ್ತದೆ, ರೋಗಿಯ ಘನತೆಗೆ ತಕ್ಕಹಾಗೆ ಅಲ್ಲ! ರೋಗಿ ಎಷ್ಟೇ ಉನ್ನತ ಸ್ಥಾನದಲ್ಲಿದ್ದರೂ ಉಳಿದ ರೋಗಿಗಳಂತೆ ಸಮಾನವಾಗಿ ಕಾಣಲಾಗುವುದು. ಆಸ್ಪತ್ರೆಯ ಈ ಎಲ್ಲ ವಿವರಗಳನ್ನು ಕೇಳಿ, ಕಣ್ಣಾರೆ ಕಂಡು ಕೆಲ ಕ್ಷಣ ಕಣ್ಣು ಮುಚ್ಚಿಕೊಂಡು ನಮ್ಮ ದೇಶದ ಸರಕಾರಿ ಆಸ್ಪತ್ರೆಗಳನ್ನು ನೆನಪಿಸಿಕೊಂಡೆ. ನನಗೆ ಅನಿಸಿರುವುದನ್ನು ನಿಮ್ಮ ಊಹೆಗೆ ಬಿಡುತ್ತೇನೆ.

Read more...

- ಲೈಂಗಿಕ ಜಗತ್ತಿನ ಎದೆಗಾರಿಕೆಯ ಗತ್ತು



ಅನ್‌ರೆಸ್ಟ ಮನೋಸ್ಥೊತಿಯ ಯುವಕರ ಚಟುವಟಿಕೆಗಳ ವಿವರಣೆಯೊಂದಿಗೆ, ಅವರ ಇತರ ಕ್ರೇಜ್ ಬಹುಚರ್ಚಿತ ಸಂಗತಿಗಳು ಗಮನ ಸೆಳೆದವು. ಮನುಷ್ಯನ ಮೂಲಭೂತ ಅಗತ್ಯಗಳಾದ ಹಸಿವು, ದಾಹ, ನಿದ್ರೆಯನ್ನು ಪೂರೈಸಲು ಹೆಣಗುವ ವಾತಾವರಣ ಬಡದೇಶಗಳಲ್ಲಿದೆ. ಊಟ, ನೀರು, ದೈಹಿಕ ಸುಖಕ್ಕಾಗಿ ಕಾಮವನ್ನು ಸಮಾಜ ನಿರ್ಮಿತ ಬಂಧನದಲ್ಲಿ ಅನುಭವಿಸುವ ಅಗತ್ಯ. ಒಮ್ಮೊಮ್ಮೆ ತುತ್ತು ಕೂಳಿಗೂ ಪರದಾಟ. ನೀರು, ಅನ್ನ ಸಾಕಾಗುವಷ್ಟು ಪಡೆದ ಮೇಲೆ ಕಾಮ ತೃಷೆಗೆ ಮದುವೆಯೆಂಬ ಸಂಕೋಲೆ. ಭಾರತದಲ್ಲಿ ಮದುವೆ ಇನ್ನೂ ಅರ್ಥಪೂರ್ಣ ಸಂಪ್ರದಾಯ. ಪ್ರತಿಶತ ೯೫ರಷ್ಟು ಜನರಲ್ಲಿ ಮದುವೆ ಬಂಧನದಲ್ಲಿ ವಿಶ್ವಾಸವಿದೆ. ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯೊಂದರ ಜಾಡು ಹಿಡಿದು ಇಂಗ್ಲೆಂಡಿನ ಯುವಕರ ಮನೋಸ್ಥಿತಿಯನ್ನು ಅರಿಯಲೆತ್ನಿಸಿದಾಗ ಅಚ್ಚರಿಯೆನಿಸುವ ವಿಷಯಗಳು ಗೋಚರ.
ಕಾಮ ಇಂದು ಐರೋಪ್ಯ ದೇಶಗಳಲ್ಲಿ ಪ್ರಮುಖ ಸಂಗತಿಯಾಗಿ ಉಳಿದಿಲ್ಲ. ಡೇಟಿಂಗ್ ಸಂಪ್ರದಾಯ ಪ್ರಾರಂಭವಾಗಿ ಅದನ್ನು ಬೆರಗಿನಿಂದ ಚರ್ಚಿಸುವ ಸಂಭ್ರಮದಲ್ಲಿ ನಾವಿದ್ದಾಗ ಐರೋಪ್ಯರು ಇನ್ನೊಂದಿಷ್ಟು ದಾಪುಗಾಲಿಟ್ಟಿದ್ದಾರೆ. ಕಾನೂನು ಹಾಗೂ ಸಮಾಜದ ನಿರ್ಣಯದಂತೆ ಮಕ್ಕಳು ೧೬-೧೮ರ ಪ್ರಾಯದವರೆಗೆ ಪಾಲಕರೊಂದಿಗೆ ವಾಸಿಸಬಹುದು.
ಮದುವೆಯೆಂಬ ವ್ಯವಸ್ಥೆ ಶಿಥಿಲಗೊಂಡ ಮೇಲೆ ಪಾಲಕರು ದಿಕ್ಕಾಪಾಲಾಗಿದ್ದಾರೆ. ಪಾಲಕರು ಕೇವಲ ಪಾಲಕ ಆದಾಗ ಮಕ್ಕಳಿಗೆ ಕಿರಿಕಿರಿಯಾಗುತ್ತದೆ. ಅಪ್ಪ ಇದ್ದರೆ ತಾಯಿ ಇಲ್ಲ, ತಾಯಿ ಇದ್ದರೆ ಅಪ್ಪ ಇಲ್ಲ.ಈ ವಿಚಿತ್ರ ಗೊಂದಲದಲ್ಲಿ ಯುವಕರಿಗೆ ಪಾಲಕರೊಂದಿಗೆ ವಾಸಿಸುವುದೆಂದರೆ ಅಷ್ಟಕ್ಕಷ್ಟೆ.
ಇಂಗ್ಲೆಂಡಿನ ಸರ್ಕಾರಕ್ಕೆ ಸ್ವಯಂ ಸೇವಾ ಸಂಸ್ಥೆಗಳಿಗೆ ಮಕ್ಕಳೆಂದರೆ ಪಂಚಪ್ರಾಣ. ಮಕ್ಕಳೇ ದೇಶದ ಸಂಪತ್ತು. ಅಲ್ಲಿನ ಹವಾಮಾನ, ಸಾಮಾಜಿಕ ಹಾಗೂ ಕೌಟುಂಬಿಕ ವ್ಯವಸ್ಥೆಯಿಂದಾಗಿ ಹುಡುಗಿಯರು ಮಕ್ಕಳನ್ನು ಪಡೆಯಲು ಬಯಸುವುದಿಲ್ಲ. ತಾಯ್ತನದ ಕನಸುಗಳಿಗೆ ಬಣ್ಣ ತುಂಬುವ ಗೊಡವೆಗೆ ಹೋಗುವುದಿಲ್ಲ. ಹೈಸ್ಕೂಲ್ ಹಾಗೂ ಕಾಲೇಜು ಮಟ್ಟದಲ್ಲಿರುವಾಗಲೇ ಲೈಂಗಿಕ ಪಾಠ ಶುರು, ವಿಚಿತ್ರವೆಂದರೆ ಸೆಕ್ಸನ್ನು ಅನುಭವಿಸಲು ತಕರಾರಿಲ್ಲ ಆದರೆ ಪಾಲಿಸಬೇಕಾದ ನಿಯಮಗಳದೇ ಪಾಠ! ಸಂಕೋಚ, ಅಸಹ್ಯ ಯಾವುದೂ ಇಲ್ಲ. ಕಾಂಡೋಮ್ ಬಳಕೆ, ಸೇಫ್ ಸೆಕ್ಸ್ ಕುರಿತು ತರಬೇತಿ. ನಮಗೆ ಅದನ್ನು ಮಾತನಾಡಲು ಎಲ್ಲಿಲ್ಲದ ಸಂಕೋಚ. ಪ್ರಾಥಮಿಕ ಹಾಗೂ ಹೈಸ್ಕೂಲ್‌ಗಳಿಗೆ ಸಾರ್ವಜನಿಕರಿಗೆ ಪ್ರವೇಶವಿಲ್ಲ ಮಕ್ಕಳ ಪಾಲಿನ ಸಂದನವನದಂತಿರುವ ಶಾಲೆಗಳು ಪ್ರವಾಸಿಗರಿಗೆ ಜೈಲುಗಳು. ಕೇವಲ ಒಂದೆರಡು ಶಾಲೆಗಳಲ್ಲಿ ಮಾತ್ರ ಪ್ರವೇಶ ಲಭ್ಯವಾಯಿತು. ಆದರೆ ಯಾವುದೇ ಖಾಸಗಿ ಸಂಗತಿಗಳನ್ನು ಮಕ್ಕಳೊಂದಿಗೆ ಚರ್ಚಿಸುವಂತಿಲ್ಲ. ಪ್ರಾಥಮಿಕ ಹಂತದ ವಿದ್ಯಾರ್ಥಿಗಳನ್ನು ಕಂಡರೆ ಶಿಕ್ಷಕರೇ ಹೆದರುತ್ತಾರೆ. ಇದೇ ಕಾರಣಕ್ಕೆ ಶಾಲಾಶಿಕ್ಷಕರಿಗೆ ಅತೀ ಹೆಚ್ಚು ವೇತನ ನೀಡಲಾಗುತ್ತದೆ. ವಿದ್ಯಾರ್ಥಿಗಳಿಗೆ ಬೈಯುವಂತಿಲ್ಲ, ದಂಡಿಸುವಂತಿಲ್ಲ. ಏರುದನಿಯಲ್ಲಿ ಮಾತನಾಡುವಂತಿಲ್ಲ. ವಿದ್ಯಾರ್ಥಿಗೆ ವರ್ಗ ಕೋಣೆ ಬೇಸರವೆನಿಸಿದರೆ ತನ್ನ ಪಾಡಿಗೆ ತಾನಿರುವ ಸ್ವಾತಂತ್ರ್ಯ. ಅವನ ನೋವುನಿವಾರಣೆಗಾಗಿ ಕೌನ್ಸಿಲ್ ಕೇಂದ್ರಗಳು ಶಾಲೆಯಲ್ಲಿನ ಕೌನ್ಸಿಲರ್ ಪ್ರತಿಯೊಬ್ಬ ವಿದ್ಯಾರ್ಥಿಗಳ ಯೋಗಕ್ಷೇಮ ವಿಚಾರಿಸಿ ಅವರ ಬೇಕು ಬೇಡಗಳನ್ನು ಪೂರೈಸಬೇಕು. ಒಮ್ಮೊಮ್ಮೆ ವಿದ್ಯಾರ್ಥಿ ಅಬ್‌ನಾರ್ಮಲ್ ಆದದ್ದನ್ನು ಬಯಸಿದರೆ ಸಿರಾಕರಿಸುವಂತಿಲ್ಲ. ಇಂತಹ ಹತ್ತು ಹಲವು ಸಂಗತಿಗಳನ್ನು ನಾವು ಬಾಯಿ ತೆರೆದುಕೊಂಡು ಕೇಳುವ ಅನಿವಾರ್ಯತೆ.
ನಮಗೆ ಕಷ್ಟ ಎನಿಸಿದರೆ ಅವರೇನು ಮಾಡಬೇಕು? ಕೇಳುವ ಕರ್ಮ ನಮ್ಮದು. ವಿದ್ಯಾರ್ಥಿಯ ಬುದ್ಧಿಮತ್ತೆ ಹೇಗೆ? ಅವನ ಗ್ರಹಿಕೆ ಯಾವ ಮಟ್ಟದ್ದು ಎಂಬ ಸಂಗತಿಗಳಿಗಿಂತಲೂ ಅವನ ವೈಯಕ್ತಿಕ ಯೋಗ ಕ್ಷೇಮದ ಜವಾಬ್ದಾರಿಯೂ ಶಿಕ್ಷಕರ ಹೆಗಲಿಗೆ.
ವಿದ್ಯಾರ್ಥಿಗಳ, ಯುವಕರ ಅಭಿರುಚಿಯನ್ನು(?) ಕೇಳಿದಾಗ ಅಚ್ಚರಿಯಾಯಿತು. ಇಂಗ್ಲೆಂಡ್‌ನ ಯುವಕರಿಗೆ ಎಷ್ಟು ಸಾಧ್ಯವೋ ಅಷ್ಟು ಬೇಗ ಸೆಕ್ಸ್ ಅನುಭವಿಸುವ ಆತುರ. ವರ್ಜಿನ್ ಅನ್ನುವ ಇಂಗ್ಲಿಷ್ ಪದ ಅರ್ಥ ಕಳೆದುಕೊಂಡಿದೆ.ಶೀಲ- ಚಾರಿತ್ರ್ಯ ವ್ಯಕ್ತಿಯ ನೈತಿಕತೆ ಕುರಿತು ಗಂಟೆಗಟ್ಟಲೆ ಚಿಂತಿಸುವ ಅಲ್ಲಲ್ಲ ಚಿಂತೆ ಮಾಡುವ ನಮ್ಮ ಮನಸಿನ ಹಾದರವನ್ನು ಬದಿಗಿರಿಸಿ ಇಂತಹ ಸಂಗತಿಗಳನ್ನು ಕುತೂಹಲದಿಂದ ಆಲಿಸಿದೆ. ಹಾದಿ ತಪ್ಪುವ, ಡೇಟಿಂಗ್‌ಗೆ ಹಾತೊರೆಯುವ ಮಕ್ಕಳನ್ನು ಪಾಲಕರು ನಿರ್ಬಂಧಿಸುವ ಹಾಗಿಲ್ಲ. ಕೇವಲ ಎಜ್ಯುಕೇಟ್ ಮಾಡಬೇಕು. ಒಂದು ವೇಳೆ ತುಂಬಾ ಒತ್ತಾಯ ಹೇರಿದರೆ ಎನ್.ಜಿ.ಒ. ಗಳ ಮೊರೆ ಹೋಗುತ್ತಾರೆ. ಎನ್.ಜಿ.ಒ. ಕಾರ್ಯಕರ್ತರು ಮನೆ ಮನೆಗೆ ತೆರಳಿ ಯುವಕರ ಯೋಗ ಕ್ಷೇಮ ವಿಚಾರಿಸುವ ಸೇವೆ. ಒಂದು ವೇಳೆ ಯುವಕರು ಪಾಲಕರೊಂದಿಗೆ ಇರಲು ನಿರಾಕರಿಸಿ, ದೂರು ದಾಖಲಿಸಿದರೆ ಮನೆಯಿಂದ ಬೇರ್ಪಡಿಸುವ ತರಾತುರಿ. ಇದಕ್ಕೆ ಪಾಲಕರ ಅನುಮತಿ ಬೇಕಿಲ್ಲ.
ಈಗ ನನ್ನ ಅರ್ಧ ಆಯುಷ್ಯ ಮುಗಿದಿದೆ. ಊರಿಂದ ವಾಪಾಸಾಗುವಾಗ ಅಪ್ಪ ಬಸ್ ಚಾರ್ಜಿಗೆ ಹಣ ಇದೆಯೋ ಇಲ್ಲವೋ ಕೇಳುತ್ತಾರೆ. ಮಕ್ಕಳ ಹಾಗೆ ವಿಚಾರಿಸುತ್ತಾರೆ. ಬರುವಾಗ ಅವರಿಗೆ ನಮಸ್ಕರಿಸಿ, ಹೇಳಿ ಬರದಿದ್ದರೆ ನಮಗೆ ಹಳವಂಡ ಕಿರಿಕಿರಿ.
ಪಾಲಕರೊಂದಿಗೆ ಜಗಳ ಪ್ರೀತಿ ನಿರಂತರವಾಗಿರುತ್ತದೆ. ಆದರೆ ಅವರಿಂದ ಬೇರ್ಪಡುವ ಕನಸು ಕಾಣುವುದಿಲ್ಲ.
ಇಂಗ್ಲೆಂಡಿನ ಶಾಲೆಯಲ್ಲಿ ವಿದ್ಯಾರ್ಥಿಗಳು ಪಾಲಕರೊಂದಿಗೆ ವಾಸಿಸುವ ಮಕ್ಕಳನ್ನು ಟೀಕಿಸುತ್ತಾರೆ. ಅಮ್ಮನ ಸೆರಗಿನನಾಸರೆಯಲ್ಲಿ ಬೆಳೆಯುವವರನ್ನು ಕಂಡರೆ ಅಪಹಾಸ್ಯ. ಮನೆ ಬೇಡವೆನ್ನುವಂತೆ ಪ್ರೇರೆಪಿಸುತ್ತಾರೆ. ಗೆಳೆಯ-ಗೆಳತಿಯರ ಟೀಕೆಗೆ ಬೇಸತ್ತ ಯುವಕರು ಪಾಲಕರಿಂದ ಬೇರ್ಪಡುವ ತರಾತುರಿ.
ಐಷಾರಾಮಿ ಹಾಸ್ಟೆಲ್‌ನಲ್ಲಿ ಸರಕಾರ ನೀಡುವ ಸ್ಟೈಫಂಡ್, ಪುಕ್ಕಟೆ ಶಿಕ್ಷಣ ಪಡೆದು ನೆಮ್ಮದಿಯಿಂದ ಇದ್ದರೆ ಸಾಕಪ್ಪ ಎಂಬುದೇ ಸರಕಾರದ ಇಚ್ಚೆ. ಎಲ್ಲ ಪುಕ್ಕಟೆ ಸಿಕ್ಕರೂ ಸಮಸ್ಯೆ ತಂದೊಡ್ಡುವ ಯುವಕರನ್ನು ರಕ್ಷಿಸುವದೊಂದು ತಲೆಬೇನೆ.
ನಮ್ಮ ದೇಶದಲ್ಲಿ ಸರಕಾರಿ ಹಾಸ್ಟೆಲ್‌ಗಳಲ್ಲಿರುವ ಮಕ್ಕಳು ಸಿಕ್ಕಿದ್ದೇ ಅಮೃತವೆಂಬಂತೆ ಸ್ವೀಕರಿಸಿ, ನರಕಸದೃಶ ವಾತಾವರಣವಿದ್ದರೂ ವ್ಯವಸ್ಥೆಗೆ ಹೊಂದಿಕೊಂಡು ಎಲ್ಲವನ್ನು ಸಹಿಸಿಕೊಳ್ಳುತ್ತಾರೆ. ಆದರೆ ಇಂಗ್ಲೆಂಡಿನ ಯುವಕರ ಚಿಂತನೆಯೇ ಬೇರೆ.
ಕಿರಿಯ ಪ್ರಾಯದಲ್ಲಿನ ಸಿಗರೇಟ್ ಸೇವನೆ, ಮದ್ಯಪಾನ, ಲೈಂಗಿಕ ಆತುರತೆ, ಯುವಕರನ್ನು ಅರೆಪ್ರಜ್ಞಾವಸ್ಥೆಗೆ ತಳ್ಳಿವೆ.ಈಗ ಹುಡುಗಿಯರ ಇನ್ನೊಂದು ಹೊಸ ಕ್ರೇಜ್ ಏನೆಂಬುದು ಅಷ್ಟೇ ಕುತೂಹಲಮಯ. ಎಷ್ಟು ಸಾಧ್ಯವೋ ಅಷ್ಟು ಬೇಗ ಹುಡುಗಿಯರು ತಮ್ಮ ವರ್ಜಿನ್‌ನ್ನು ಕಳೆದುಕೊಳ್ಳಬೇಕೆಂಬ ಆತುರ. ಸಮಾನ ವಯಸ್ಸಿನ ಹುಡುಗಿಯರೆಲ್ಲ ಸೇರಿಕೊಂಡು ಇದೊಂದು ದೇಶದ ಬಹು ದೊಡ್ಡ ಜ್ವಲಂತ ಸಮಸ್ಯೆ ಎಂಬಂತೆ ಚರ್ಚಿಸುತ್ತಾರೆ. ಪರಸ್ಪರರ ಚರ್ಚೆಯಲ್ಲಿ ಸಲಹೆಗಳನ್ನು ರವಾನಿಸುತ್ತಾರೆ. ಕನ್ಯತ್ವ ಕಳೆದುಕೊಳ್ಳದ ಹುಡುಗಿಯರನ್ನು ಹಂಗಿಸಿ ಚುಡಾಯಿಸುವದರಿಂದ ಬೇಗ ಬೇಗ ದೊಡ್ಡವರಂತೆ ಕಾಣಲು ಬಯಸುತ್ತಾರೆ. ದೇಹಸಿರಿ ಬೆಳಸಿಕೊಳ್ಳಲು ಹೆಣಗಿ, ಬಗೆಬಗೆಯ ಆಕರ್ಶಣೀಯ ಕಾಸ್ಮೆಟಿಕ್‌ನಂತೆ ಹಾರ್ಮೊನ್ ಇಂಜಕ್ಷನ್, ಮಾತ್ರೆಗಳನ್ನು ತೆಗೆದುಕೊಳ್ಳುವ ಧಾವಂತ. ಶೀಲ ಕಳೆದುಕೊಂಡು, ಆದ ಅನುಭವಗಳನ್ನು ಸಂಗಾತಿಗಳೊಂದಿಗೆ ಬಹು ದೊಡ್ಡ ಸಂಭ್ರಮವೆಂಬಂತೆ ಆಚರಣೆ. ಸೆಕ್ಸ್‌ನ್ನು ಊಟ, ನಿದ್ರೆ, ದಾಹದಷ್ಟೆ ಸಾಮಾನ್ಯ ಸಂಗತಿ ಅನಿಸುವತನಕ, ಕುತೂಹಲ ತಣಿಸಲು ಹೆಣಗುವದನ್ನು ಕಂಡರೆ ಅಯ್ಯೋ ಎನಿಸುತ್ತದೆ. ಅಪರಿಮಿತ ದೇಹ ಸೌಂಧರ್ಯ ಹೆಚ್ಚಿಸಿಕೊಂಡು ಸಂಗಾತಿಗಳಿಗಾಗಿ ಹುಡುಕಾಟ, ಸರಿಹೊಂದುವವರು ಸಿಗದಿದ್ದರೆ ಏನಂತೆ? ಲೆಸ್ಬಿಯನ್ ಗಳಿಗೆನು ಕೊರತೆ?
ಪುಕ್ಕಟೆಯಾಗಿ ಲಭ್ಯವಾಗುವ ವೆಬ್ ಸೈಟುಗಳು, ಅಲ್ಲಿನ ಲೈಂಗಿಕ ದೃಶ್ಯಾವಳಿಗಳು, ಯುವಕರನ್ನು ಅಡ್ಡ ದಾರಿ ಹಿಡಿಸಲು ಕೈ ಮಾಡಿ ಕರೆಯುತ್ತವೆ. ಧ್ಯಾನಸ್ಥ ಸ್ಥಿತಿಯಲ್ಲಿ ಅಧ್ಯಯನ ಮಾಡುವ ಹಂತದಲ್ಲಿರದೇ ತಮ್ಮದೆ ವಿಕಾರ ಮಾರ್ಗ ಸೃಷ್ಟಿಸಿಕೊಂಡು ಬಿಡುತ್ತಾರೆ.
ಇಷ್ಟೊಂದು ಮುಕ್ತ ವಾತಾವರಣ ಬೇಕೆ? ಎಂಬ ಚಿಂತನೆ ಆರಂಭವಾಗಿದೆ. ಆದರೆ ಕಾಲ ಮಿಂಚಿ ಹೋಗಿದೆ. ಹೊಸ ಸೂತ್ರ ಕಂಡು ಹಿಡಿದು ಹಾಳಾಗುತ್ತಿರುವ ಮುಗ್ಧರನ್ನು ಸರಿದಾರಿಗೆ ತರುವ ತಾಕತ್ತು ಇಲ್ಲವೇ ಇಲ್ಲ. ಹಾಗಂತ ಸರಕಾರ ಕೈ ಚಲ್ಲಿ ಕುಳಿತಿಲ್ಲ ಭಾರತೀಯ ಪುರಾತನ ಯೋಗ, ಧ್ಯಾನ ಸೂತ್ರಗಳ ಮೊರೆ ಹೊಗುತ್ತಲಿದೆ. ಏಕಾಗ್ರತೆಯ ಕುರಿತು ಪಾಠಗಳು ಪ್ರಾರಂಭವಾದರೆ ವ್ಯಂಗ್ಯವೆಂಬಂತೆ ಮತ್ತೊಂದೆಡೆ ಶೀಲ ಕಳೆದುಕೊಳ್ಳಲು ಆತುರರಾಗಿರುವ ಹುಡುಗಿಯರು ಸಂಗಾತಿಗಳ ಹುಡುಕಾಟದಲ್ಲಿದ್ದಾರೆ. ಇಲ್ಲಿನ ಪ್ರತಿಕೂಲ ಹವಾಮಾನ, ಅತಿಯಾದ ಮಾದಕ ದ್ರವ್ಯಗಳ ಸೇವನೆ ಪುರುಷ ಸಮುದಾಯವನ್ನು ದುರ್ಬಲಗೊಳಿಸಿದೆ ಎಂಬ ಗೊಂದಲ ಬೇರೆ. ಲೈಂಗಿಕವಾಗಿ ಶಕ್ತಿಹೀನರಂತಾದ ಯುವಕರು ಉತ್ತೇಜಿತರಾಗಲು ವಯಾಗ್ರದಂತಹ ಅಪಾಯಕಾರಿ ಡ್ರಗ್ ಗೆ ಬೆನ್ನು ಹತ್ತಿದ್ದು ಈಗ ಇತಿಹಾಸ. ಮೈ ಮನಗಳನ್ನು ಬೆಚ್ಚಗಾಗಿಸಿ ಉದ್ರೇಕಗೊಳ್ಳಲು ತಿಣುಕುವ ದೈನೇಸಿಗೆ ಅಯ್ಯೋ ಅನಿಸುತ್ತದೆ. ಇಲ್ಲಿನ ಹುಡುಗಿಯರ ಅಬ್‌ನಾರ್ಮಲ್ ಎದೆಕಾರಿಕೆಯನ್ನು ಕಂಡಾಗ ಅಚ್ಚರಿ ಬೆರಗು, ಎಲ್ಲ ಹಾರ್ಮೊನುಗಳ ಮಹಿಮೆ ಎಲ್ಲಂದರಲ್ಲಿ ಬಟ್ಟಬಿಚ್ಚಿ, ಅರೆಬೆತ್ತಲಾಗಿ, ಸಾರ್ವಜನಿಕವಾಗಿ ತೆರೆದುಕೊಳ್ಳುವ, ಅದನ್ನು ಯಾರೂ ಗಮನಿಸದೇ ತಮ್ಮ ಪಾಡಿಗೆ ತಾವಿರುವ ವಾತಾವರಣ ನೋಡಿದಾಗ ಅಯ್ಯೋ ಅನಿಸುತ್ತದೆ. ಅಂದಹಾಗೆ ಅಯ್ಯೋ ಅನಿಸುವುದು ಅವರನ್ನು ಕಂಡು ಅಲ್ಲ, ಒಂದು ವೇಳೆ ನಾನೂ ಒಂಟಿಯಾಗಿ ಬಂದಿದ್ದರೆ ಹೊಡೆಯಬಹುದಿದ್ದ ಲಾಟರಿ, ಒಳಗೊಳಗೆ ನನ್ನ ಬಗ್ಗೆ ಅಯ್ಯೋ ಅನಿಸಿತು. ಹೀಗೆ ಕನಸು ಕಂಡು ಮರುಗಿದ್ದನ್ನು ಯಾರಿಗೂ ದಯವಿಟ್ಟು ಹೇಳಬೇಡಿ . . . .

Read more...

ಪ್ರವಾಸ ಕಥನ:: ಮೆಡಿಕಲ್ ಕಾಲೇಜುಗಳ ಆಳ ಅಧ್ಯ ವಿಸ್ತಾರ

ಆರೋಗ್ಯ ಇಲಾಖೆಗೆ ಸಂಬಂಧಿಸಿದ ಆಸ್ಪತ್ರೆ ಹಾಗೂ ವೈದ್ಯಕೀಯ ಸೇವೆಯ ಕುರಿತು ಕಳೆದವಾರ ಸುದೀರ್ಘವಾಗಿ ಚರ್ಚಿಸಿದ್ಧೆ. ಆಕ್ಸಫರ್ಡ್‌ನ ಕಲಿಕಾ ವಿಧಾನದ ಬಗೆಗಿನ ಚರ್ಚೆಯಂತೆ, ವೈದ್ಯಕೀಯ ಶಿಕ್ಷಣ ಕ್ಷೇತ್ರದ ಕಲಿಕಾ ವಿಧನದ ಕುರಿತು ತಿಳಿಯುವ ನನ್ನ ಉತ್ಸಾಹಕ್ಕೆ ಇಲ್ಲಿನ ವೈದ್ಯ ಪ್ರಾಧ್ಯಾಪಕರು ಉತ್ಸಾಹದಿಂದ ನೆರವಾದರು. ಆದರೆ ಆಕ್ಸಫರ್ಡ್‌ನಲ್ಲಿ ಗ್ರಹಿಸಿಕೊಂಡಷ್ಟು ಸುಲಭವಾಗಿ ನಾನಿದನ್ನು ಅರಿತುಕೊಳ್ಳಲು ಕಷ್ಟವಾಯಿತು. ತುಂಬಾ ಕುತೂಹಲದಿಂದ ಶೃದ್ಧೆಯಿಂದ ಕೇಳಿಸಿಕೊಂಡು ಈಗ ಅನೇಕ ವೈದ್ಯರುಗಳ ಪ್ರೀತಿಯ ಒತ್ತಾಸೆಗಾಗಿ ತಮ್ಮೆದುರು ನಿವೇದಿಸುತ್ತಲಿದ್ದೇನೆ.
ನi ದೇಶದಲ್ಲಿ ಉನ್ನತ ವೈದ್ಯಕೀಯ ಪದವಿ ಪಡೆದು, ಇಂಗ್ಲೆಂಡ್‌ನಲ್ಲಿ ಸೇವೆ ಸಲ್ಲಿಸುತ್ತಿರುವ ನೂರಾರು ವೈದ್ಯರುಗಳು ಪರಿಣಿತರೆನಿಸಿಕೊಂಡು ಕೀರ್ತಿ ಸಂಪಾದಿಸಿದ್ದಾರೆ.ಆದರೆ ಆರಂಭದ ದಿನಗಳಲ್ಲಿ ಅವರು ಅನುಭವಿಸಿದ ತೊಂದರೆಯನ್ನು ಅಷ್ಟೇ ಪ್ರಾಮಾಣಿಕವಾಗಿ ಒಪ್ಪಿಕೊಳ್ಳುತ್ತಾರೆ. ಕಳೆದವಾರ ನಾನು ಪ್ರಸ್ತಾಪಿಸಿದಂತೆ, ಯುರೋಪನಿಂದ ಇಂಡಿಯಾಕ್ಕೆ ಕಾಲಿಟ್ಟ "ಅಲೋಪತಿ" ನಮ್ಮ ದೇಶದ ನೂರಾರು ಕಾಲೇಜುಗಳ ಮೂಲಕ ಸದೃಢವಾಗಿ ಬೆಳೆದು ನಿಂತಿದೆ. ಭಾರತೀಯ ವೈದ್ಯಕೀಯ ಶಿಕ್ಷಣವೆಂದರೆ, ಶಿಕ್ಷಣ ಸಂಸ್ಥೆಗಳಿಗೆ ಕಾಮಧೇನು ಕಲ್ಪವೃಕ್ಷ ಕೋಟಿಗಟ್ಟಲೆ ವಹಿವಾಟು ತಂದು ಕೊಡುವ ಶಿಕ್ಷಣೋದ್ಯಮ. ಆದರೆ ನಮ್ಮ ದೇಶದಲ್ಲಿನ ವೈದ್ಯಕೀಯ ಕಾಲೇಜುಗಳು ತಮ್ಮ ಹಿರಿಮೆಯನ್ನು ಭೌತಿಕ ಸೌಂದರ್ಯದ ಮೂಲಕ ಹೆಚ್ಚಿಸಿಕೊಂಡಿದೆ.ಭವ್ಯ ಕಟ್ಟಡಗಳು, ಸ್ಟಾರ್ ಸಂಸ್ಕೃತಿಯ ಸುಸಜ್ಜಿತ ಆಸ್ಪತ್ರೆಗಳು, ಎನ್ .ಆರ್, ಎ. ಖೋಟಾದಡಿಯಲ್ಲಿ ದಾಖಲಿಸುವ ವಿದೇಶಿ ವಿದ್ಯಾರ್ಥಿಗಳ ಅಬ್ಬರದ ನಡುವೆ ಕಲಿಯುವ ಕಲಿಸುವ ವಿಧಾನ ಸೊರಗಿ ಸುಣ್ಣಾಗಿರುವುದನ್ನು ಸಂಸ್ಥೆಗಳು ಗಮನಿಸುತ್ತಿಲ್ಲ.
ವೈದ್ಯಕೀಯ ಕಾಲೆಜುಗಳಲ್ಲಿನ ಪ್ರಾಧ್ಯಾಪಕರುಗಳು, ಕಲಿಸುವಿಕೆಗಿಂತ, ವೃತ್ತಿಗೆ ಮನ್ನಣೆ ನೀಡುವುದರಿಂದ ಉತ್ತಮ ಶಿಕ್ಷಕರಾಗಿ ರೂಪಗೊಳ್ಳುತ್ತಿಲ್ಲ ಎಂಬ ಆರೋಪವಿದೆ. ಇಡೀ ರಾಜ್ಯದಲ್ಲಿ ಹುಡುಕಿದರೆ ಹತ್ತಾರು ಜನ ಬೆರಳೆಣಿಕೆಯಷ್ಷು ಉತ್ತಮ ವೈದ್ಯಕೀಯ ಶಿಕ್ಷಕರು ಸಿಗುತ್ತಾರೆ. ವೃತ್ತಿಪರ ಕೋರ್ಸುಗಳ ಕಾಲೇಜುಗಳಲ್ಲಿ ಶಿಕ್ಷಕರಾಗಿ ದುಡಿಯುವದೆಂದರೆ ಕನಿಷ್ಟ ಸೇವೆ ಎಂದು ಭಾವಿಸಿ, ಅದನ್ನು ಮೊಟಕುಗೊಳಿಸಿ ಬೇಗ ಪ್ರ್ಯಾಕ್ಟೀಸ್ ಪ್ರಾರಂಭಿಸಿ ಖ್ಯಾತ ವೈದ್ಯರೆನಿಸಿಕೊಳ್ಳುತ್ತಾರೆ. ಪ್ರ್ಯಾಕ್ಟೀಸ್‌ಗೆ ಮಹತ್ವ ನೀಡುವುದರಿಂದ ಬೇಗ ಹೆಸರು, ಖ್ಯಾತಿ ಯೊಂದಿಗೆ ಹಣ ಗಳಿಸಬಹುದೆಂಬ ಉತ್ಸಾಹ. ಈ ರೀತಿಯ ಉತ್ಸಾಹದಿಂದಾಗಿ ರಾಜ್ಯದ ಬಹುಪಾಲು ವೈದ್ಯಕೀಯ ಹಾಗೂ ಇಂಜನಿಯರಿಂಗ್ ಕಾಲೇಜುಗಳಲ್ಲಿ ಶ್ರೇಷ್ಠರೆನಿಸುವ ಶಿಕ್ಷಕರ ಕೊರತೆ ದಟ್ಟವಾಗಿದೆ "ಪ್ಯ್ರಾಕ್ಟೀಸ್" ಕ್ಷೇತ್ರದಲ್ಲಿ ವಿಫಲರಾದವರು ಮಾತ್ರ ಶಿಕ್ಷಕರಾಗುತ್ತಾರೆ ಎಂಬ ಆರೋಪದ ಸತ್ಯಾಸತ್ಯತೆಯನ್ನು ಆಯಾ ಕ್ಷೇತ್ರದಲ್ಲಿರುವವರೇ ಹೇಳಬೇಕು. ಇದು ಹೀಗೆ ಎಂದು ನಿರ್ಣಯ ಕೊಡುವುದು ಅಸಮಂಜಸವೆಂದು ನಾನು ಭಾವಿಸುತ್ತೇನೆ.
ಖ್ಯಾತ ವೈದ್ಯ ವಿeನಿ, ವೈದ್ಯ ಶಿಕ್ಷಕ ಡಾ. ಸ. ಜ ನಾಗಲೋಟಿಮಠ ಅವರನ್ನು ಈ ಹಿನ್ನೆಲೆಯಲ್ಲಿ ಸ್ಮರಿಸಿಕೊಳ್ಳುವುದು ಅಗತ್ಯವೆನಿಸುತ್ತದೆ. ಅವರು ತಮ್ಮ ಕೊನೆ ಉಸಿರಿರುವವರೆಗೆ ಕಲಿಯುತ್ತ ,ಕಲಿಸುತ್ತ ಪ್ರಾಣಬಿಟ್ಟ ವೈದ್ಯಕೀಯ ಸಂತರಾದರು. ವೈದ್ಯಕೀಯ ಶಾಸ್ತ್ರದ ಗಾಳಿ ಗಂಧವಿಲ್ಲದ ನಮ್ಮಂತವರಿಗೂ ತಿಳಿಯುವ ಹಾಗೆ ಸರಳ ಇಂಗ್ಲಿಷ್ ಹಾಗೂ ಕನ್ನಡ ಭಾಷೆಯಲ್ಲಿ ವೈದ್ಯಕೀಯ ಶಿಕ್ಷಣ ಹಾಗೂ ರೋಗ ಶಾಸ್ತ್ರವನ್ನು ವಿವರಿಸುತ್ತಿದ್ದರು , ವೃತ್ತಿಯಲ್ಲಿ ಬಂದ ಎಲ್ಲ ಉತ್ತಮ ಅವಕಾಶಗಳನ್ನು ನಿರಾಕರಿಸಿ , ಜನರ ನಿಷ್ಠುರ ಕಟ್ಟಿಕೊಂಡು ನಿಂತಲ್ಲೆ ನಿಲ್ಲದೆ ನಾಡಿನಲ್ಲೆಲ್ಲ ಸಂಚರಿಸಿ ನಿಜ ಜಂಗಮರಾದರು. ಹಣೆಮೇಲಿನ ಭಸ್ಮ, ಸರಳ ಉಡುಗೆ ,ನಿಷ್ಠುರ ಮಾತುಗಳು, ದಟ್ಟ ಪ್ರಾಮಾಣಿಕತೆಯ ಇತಿಹಾಸವನ್ನು ಅವರು ತಮ್ಮ ಆತ್ಮ ಚರಿತ್ರೆ 'ಬಿಚ್ಚಿಟ್ಟ ಜೋಳಿಗೆ'ಯಲ್ಲಿ ತೆರೆದಿಟ್ಟಿದ್ದಾರೆ. ವಿವಿಧ ವೇದಿಕೆಗಳಲ್ಲಿ ನಾನು ಅವರೊಂದಿಗೆ ಕಾಲಕಳೆದದ್ದು ಅವಿಸ್ಮರಣೀಯ.
"ಆರೋಗ್ಯ -ಶಿಕ್ಷಣದ ಮಹತ್ವವನ್ನು ,ವೈದ್ಯಕೀಯ ಕ್ಷೇತ್ರಕ್ಕಿರಬೇಕಾದ ಪ್ರಾಮಾಣಿಕತೆಯನ್ನು ನೀವು ನೋಡಬೇಕೆಂದ್ರ ಒಮ್ಮೆ ಇಂಗ್ಲೆಂಡ್‌ಗೆ ಹೋಗ್ರಿ, ಅಲ್ಲಿನ ಡಾಕ್ಟರುಗಳನ್ನು ನೋಡ್ರಿ ಅವರ ಸೇವಾ ಮನೋಭಾವ, ವೃತ್ತಿನಿಷ್ಠೆ ನೋಡಿದ್ರೆ ನಿಮಗೆ ಡಾಕ್ಟರುಗಳ ಬಗ್ಗೆ ಗೌರವ ಬರ್‍ತ್ಯತಿ" ಎಂದಿದ್ದ ಅವರ ದೇಸಿಯ ಮಾತುಗಳು ನನಗೆ ಇಂಗ್ಲೆಂಡ್‌ನಲ್ಲಿ ಮತ್ತೆ ನೆನಪಾದವು, ದಢೂತಿ ದೇಹದ-ಗಂಭೀರ ಮನಸ್ಥಿತಿಯ ಇಂಗ್ಲೆಂಡ್‌ನ ಪ್ರಾಧ್ಯಾಪಕರುಗಳು ಮಹಾಮೌನಿಗಳು. ಆಪ್ಲೈಡ್ ವಿಧಾನದಿಂದ ಕಲಿಯುವ ಕಲಿಸುವ ವಿಧಾನಕ್ಕೆ ಹೆಚ್ಚು ಒತ್ತು ಕೊಡುತ್ತಾರೆ. ಗಜಗಾತ್ರದ ಗ್ರಂಥಗಳನ್ನು ಓದುವುದಕ್ಕಿಂತ ಸಾವಿರಾರು ರೋಗಿಗಳ ಮಧ್ಯೆ ವೈದ್ಯಕೀಯ ವಿದ್ಯಾರ್ಥಿಗಳು ಕಾಲ ಕಳೆದು ರೋಗ ಶಾಸ್ತ್ರವನ್ನು ಅರಿಯಬೇಕು ಗ್ರಂಥಗಳು ಕೇವಲ ಕೆಲಕಾಲದ ರೆಫರೆನ್ಸ ಆಗಬೇಕು ಎನ್ನುತ್ತಾರೆ. ಇಂಗ್ಲೆಂಡ್ ವೈದ್ಯಕೀಯ ಕಲಿಕಾ ಕ್ಷೇತ್ರದಲ್ಲಿ ಚಾಲ್ತಿಯಲ್ಲಿರುವ ಪಿ,ಬಿ,ಎಲ್ ವಿಧಾನವನ್ನು ವೈದ್ಯಕೀಯ ಶಾಸ್ತ್ರದ ಎ,ಬಿ,ಸಿ ಲರ್ನಿಂಗ್ ಎಂದು ವಾಖ್ಯಾನಿಸುತ್ತಾರೆ.
ಪ್ರಾಬ್ಲಂ ಬೇಸ್ಡ್ ಲರ್ನಿಂಗ್ ಇಂದು ಇಂಗ್ಲೆಂಡ್ ನ ಜನಪ್ರಿಯ ಕಲಿಕಾ ವಿಧಾನವಾಗಿದೆ. ಎಂ.ಬಿ.ಬಿ.ಎಸ್ ಮೊದಲನೆ ವರ್ಷದಲ್ಲಿಯೇ ವಿದ್ಯಾರ್ಥಿಗಳು ಕಡ್ಡಾಯವಾಗಿ ಈ ಪಿ .ಬಿ.ಎಲ್ ವ್ಯವಸ್ಥೆಯ ಆಧಾರದ ಮೇಲೆಯೇ ತಮ್ಮ ಕಲಿಕೆಯನ್ನು ಪ್ರಾರಂಭಿಸಬೇಕು .ಕೇವಲ ಹತ್ತು ವಿದ್ಯಾರ್ಥಿಗಳ ಒಂದು ಗುಂಪನ್ನು ರಚಿಸಿ , ಈ ಗುಂಪಿನ ಎಲ್ಲ ಸದಸ್ಯರು ವಿಭಿನ್ನ ಪಾತ್ರಗಳನ್ನು ನಿರ್ವಹಿಸಿ ವೈದ್ಯಕೀಯ ಶಾಸ್ತ್ರದ ಸಮಸ್ಯೆಗಳನ್ನು ಅರಿತುಕೊಂಡು ವೈಯಕ್ತಿಕ ಅನುಭವಗಳ ಮೂಲಕವೇ ಅಭ್ಯಾಸ ಮಾಡಬೇಕು ರೋಗಕ್ಕೆ ಪಠ್ಯ ಪುಸ್ತಕದಲ್ಲಿ ಇರುವ ವಿವರಣೆಗೆ ಗಿಂತಲೂ ತಮ್ಮ ಕೇಸ್ ಸ್ಟಡಿಯಲ್ಲಿ ಸಿಕ್ಕ ಮಾಹಿತಿಯ ಆಧಾರದ ಮೇಲೆಯೇ ವಿವರಿಸಬೇಕು . ಈ ಗುಂಪಿನಲ್ಲಿದ್ದ ವಿದ್ಯಾರ್ಥಿಗಳು ಎಲ್ಲ ಚಟುವಟಿಕೆಗಳನ್ನು ನಿರ್ವಹಿಸಬೇಕು. ಪ್ರಾಧ್ಯಾಪಕರು ಕೇವಲ ಮಾರ್ಗದರ್ಶಕರಾಗಿರುತ್ತಾರೆ. ಸ್ಕ್ರೈಬ್, ಟ್ಯೂಟರ್, ಚೇರ್ ಹಾಗೂ ಗ್ರುಪ್ ಮೆಂಬರ್ ಎಂಬ ನಾಲ್ಕು ಹಂತಗಳನ್ನು ವಿದ್ಯಾರ್ಥಿ ದಾಟಬೇಕಾಗುತ್ತದೆ.
"ಸ್ಕ್ರೈಬ್" ಆದವರು ಚರ್ಚೆಯಲ್ಲಿ ಪಾಲ್ಗೊಳ್ಳುವುದರೊಂದಿಗೆ ಗುಂಪಿನಲ್ಲಿ ಚರ್ಚಿತ ಸಂಗತಿಗಳನ್ನು ಎಲ್ಲ ಸಾಧನಗಳನ್ನು ಬಳಸಿಕೊಂಡು ಕರಾರುವಕ್ಕಾಗಿ ದಾಖಲಿಸಬೇಕು ದಾಖಲಿತ ವಿಚಾರಗಳನ್ನು ಒಪ್ಪ-ಓರಣವಾಗಿರುವಂತೆ ನೋಡಿಕೊಳ್ಳಬೇಕು. ಇದರಿಂದ ವಿದ್ಯಾರ್ಥಿ ಆರಂಭದ ಹಂತದಲ್ಲಿಯೇ ರೆಕಾರ್ಡ ಕೀಪಿಂಗ್ ವಿಧಾನವನ್ನು ಸಮರ್ಥವಾಗಿ ಕಲಿಯುತ್ತಾನೆ.
'ಟ್ಯೂಟರ್' ಎರಡನೇ ಹಂತದ ಭಾಗವಹಿಸುವಿಕೆ, ಗುಂಪಿನ ಎಲ್ಲ ಸದಸ್ಯರನ್ನು ಹುರಿದುಂಬಿಸುವದರೊಂದಿಗೆ, ಚೇರ್ ಕಾರ್ಯ ನಿರ್ವಹಿಸುವವರಿಗೆ ಸಹಾಯ ಮಾಡಬೇಕು. ಸ್ಕ್ರೈಬ್ ದಾಖಲಿಸಿದ ಮಾಹಿತಿಗಳ ಗುಣಮಟ್ಟವನ್ನು ಪರೀಕ್ಷಿಸಬೇಕು. ಚರ್ಚೆಯ ವಿಧಾನ ಹಾದಿ ತಪ್ಪದಂತೆ, ವಿಷಯಾಂತರವಾಗದಂತೆ ತಡೆಹಿಡಿಯಬೇಕು. ಗುಂಪಿನಲ್ಲಿರುವ ಎಲ್ಲರೂ ಆಯ್ದ ವಿಷಯದ ಮೇಲೆ ಹಿಡಿತ ಸಾಧಿಸಿದ್ದಾರೆಯೇ? ಎಂಬುದನ್ನು ಗಮನಿಸಬೇಕು.
'ಚೇರ್' ಮಹತ್ವದ ಸ್ಥಾನವಾಗಿದೆ. ಗುಂಪಿನ ನಾಯಕತ್ವ ವಹಿಸಬೇಕು ಪ್ರತಿಯೊಬ್ಬರನ್ನು ಯೋಜನೆಯಲ್ಲಿ ಪಾಲ್ಗೊಳ್ಳುವಂತೆ ಪ್ರೊತ್ಸಾಹಿಸಬೇಕು. ಗುಂಪಿನಲ್ಲಿ ಪಾಲ್ಗೊಳ್ಳುವ ಸದಸ್ಯರ ಉತ್ಸಾಹ ಕುಗ್ಗದಂತೆ ನೋಡಿಕೊಳ್ಳಬೇಕು. ಚೇರ್ ಆದವನು ಸಮಯ ಪ್ರಜ್ಞೆಯ ಮಹತ್ವ ಹೇಗೆ ರೋಗಿಯನ್ನು ರಕ್ಷಿಸುತ್ತದೆ ಎಂಬ ತಿಳುವಳಿಕೆ ನೀಡಬೇಕು. ಅಧ್ಯಯನಕ್ಕೆ ಆಯ್ದುಕೊಂಡ ರೋಗವನ್ನು ನಿರ್ವಹಿಸಲು ರೋಗಿಗಳೊಂದಿಗೆ ವೈದ್ಯ ನಡೆದುಕೊಳ್ಳುವ ಬಗೆಯನ್ನು ವಿವರಿಸಬೇಕು.
'ಗ್ರುಪ್ ಮೆಂಬರ್' ಈ ಮೂರು ಹಂತಗಳಲ್ಲಿ ಅನುಭವ ಪಡೆದು ಸದಸ್ಯನಾಗಿ ತಂಡದಲ್ಲಿ ಉಳಿಯುತ್ತಾನೆ. ಇವರು ತಂಡದ ಹಿರಿಯ ಸದಸ್ಯರಾಗಿ ಹೆಚ್ಚಿನ ಆತ್ಮ ವಿಶ್ವಾಸವನ್ನು ಗಳಿಸಿಕೊಂಡಿರುತ್ತಾರೆ. ಈ ನಾಲ್ಕು ಹಂತಗಳಲ್ಲಿ ವಿದ್ಯಾರ್ಥಿ ಸಮರ್ಪಕವಾಗಿ ಕಾರ್ಯ ನಿರ್ವಹಿಸಿದರೆ ಮಾತ್ರ ಯಶಸ್ವಿ ವಿದ್ಯಾರ್ಥಿಯಾಗಿ ವೈದ್ಯಕೀಯ ಶಿಕ್ಷಣವನ್ನು ಮುಂದುವರೆಸುತ್ತಾನೆ. ದೊಡ್ಡ ದೊಡ್ಡ ಗ್ರಂಥಗಳಲ್ಲಿ ಉದಾಹರಿಸಿದ ಶಾಸ್ತ್ರಗಳನ್ನು ಅಭ್ಯಾಸ ಮಾಡಿದರೆ ಸಾಲದು ಎಂಬ ವಾಸ್ತವ ಅವರಲ್ಲಿ ವಿಶ್ವಾಸ ಬೆಳೆಸುತ್ತದೆ.
ಭಾರತೀಯ ವೈದ್ಯಕೀಯ ವಿದ್ಯಾರ್ಥಿಗಳಿಗೆ ವಿವಿಧ ಪರೀಕ್ಷೆಗಳ ಮೂಲಕ ಸವಾಲೊಡ್ಡಿ ಸೇವೆಗೆ ಅವಕಾಶ ನೀಡುವ ಎನ್.ಎಚ್.ಎಸ್. ನ ಕಠಿಣತೆ ಎದುರಿಸುವವರು ಮಾತ್ರ ಇಲ್ಲಿ ವೈದ್ಯರಾಗಿ ಉಳಿಯುತ್ತಾರೆ. ತಮ್ಮ ಹೆಸರಿನ ಮುಂದಿರುವ ಪದವಿಗಳ ಅಹಂ ಮರೆತು ಪ್ರಾಯೋಗಿಕ ಪರಿಶ್ರಮದಿಂದ ದುಡಿದರೆ ಮಾತ್ರ ಯಶಸ್ಸು ದೊರೆಯುತ್ತದೆ. ವೈದ್ಯಕೀಯ ಸೇವೆಯ ಸಂತೃಪ್ತಿಯೂ ಲಭ್ಯವಾಗುತ್ತದೆ. ಇಲ್ಲಿನ ರೋಗಿಗಳು ಅತೀ ಬುದ್ಧಿವಂತರಾಗಿರುವುದು ವೈದ್ಯರಿಗೊಂದು ಸವಾಲಾಗುತ್ತದೆ. ವೈದ್ಯಕೀಯ ವಿದ್ಯಾರ್ಥಿಗಳ ನಿರ್ಲಿಪ್ತ ಸ್ಥಿತಿ, ಸೇವಾ ಮನೋಭಾವ, ಸೌಜನ್ಯ, ಸರಳತೆ, ಕಲಿಕೆಯಲ್ಲಿರುವ ಸ್ವಾತಂತ್ರ್ಯ, ಪರೀಕ್ಷಾ ವಿಧಾನ, ಸಂವಹನಾ ಸಾಮರ್ಥ್ಯ ಹಾಗೂ ಅವರಲ್ಲಿರುವ ಆತ್ಮ ವಿಶ್ವಾಸ ಗುರು ಶಿಷ್ಯರ ಮಧ್ಯೆ ಇರುವ ಅಂತರವನ್ನು ಅಳಿಸಿ ಹಾಕಿ ಸಮಾನತೆಯನ್ನು ಸಾರುತ್ತದೆ. ಒಮ್ಮೆ ಆಸ್ಪತ್ರೆಗೆ ದಾಖಲಾದ ರೋಗಿ ನಿಶ್ಚಿಂತವಾಗಿ ಎಲ್ಲ ಚಟುವಟಿಕೆಗಳನ್ನು ಗಮನಿಸುತ್ತಾ ವೈದ್ಯರುಗಳ 'ಬಾಸ್' ಆಗಿಬಿಡುತ್ತಾನೆ. ರೋಗವನ್ನು ರೋಗಿಯನ್ನು ಸಮರ್ಪಕವಾಗಿ ತಿಳಿದುಕೊಂಡು ಕಾರ್ಯ ನಿರ್ವಹಿಸುವ ವಾತಾವರಣ ಆಸ್ಪತ್ರೆಯ ನರಕಾನುಭವವನ್ನು ದೂರವಾಗಿಸುತ್ತದೆ.

Read more...


ಸಂಕ್ರಮಣ
ಮಿಂದೆವು ಹಬ್ಬದಂದು
ಮೈ ಹಗುರಾಗಿಸಲು
ತಿಂದೆವು ಎಳ್ಳು-ಸಕ್ಕರೆ
ಬಾಯಿ ಸಿಹಿಯಾಗಿಸಲು
ಆದರೂ-
ಮೈಭಾರ ಬಾಯೆಲ್ಲ ಕಹಿ-ಕಹಿ
ಹಿಂಸೆ ರಕ್ತ ಪಾತಕೆ
ಗುಡಿ-ಮಸೀದಿ ನೆವ ಬೇಕಿತ್ತೆ
ಅರಿಯದ ಹಸಿವಿನಿಂದ
ಕಂಗೆಟ್ಟ ಮುಗ್ಧ ಜೀವಿಗಳೊಂದಿಗಿನ
ಚೆಲ್ಲಾಟ.
ಭಾರತ ಮಾತೆಯ
ಮಡಿಲಲಿ ರಕ್ತದೋಕುಳಿಯೆದ್ದಿರೆ
ಹಾಹಾಕಾರ ನೋವ ಮಾರ್ದನಿ
ಮುಗಿಲು ಮುಟ್ಟಿರೆ
ಸಕ್ಕರೆ ಸಿಹಿ ಆದೀತು ಹೇಗೆ?
ಸಂಕ್ರಮಣ ಶುಭ ತಂದೀತು ಹೇಗೆ?

Read more...


ಹಗಲುಗನಸು
ಹೋಲಿಸಲಾರೆ ನಿನ್ನ
ಆಗಸದ ಚಂದ್ರಂಗೆ?
ಸಿಗುವುದಿಲ್ಲ ಅಂವ ಬೇಕು ಬೇಕೆಂದಾಗ
ಹೊಗಳಿ ಚಿನ್ನ-ಮುದ್ದೇ ಅನ್ನಲಾರೆ
ಕೈಗೆಟುಕದಂತೆ ಏರಿದ ಬೆಲೆಗೆ
ಅವರಿವರ ಕದಿಯುವ ಭಯಕ್ಕೆ!
ನೀ ನನ್ನ ಪ್ರಾಣ ಅನ್ನಲಾರೆ
ಅದು ಯಾವಾಗ ಹಾರಿ
ಹೋಗುವುದೋ ಗೊತ್ತಿಲ್ಲೆನಗೆ
ಹೇಳು ಗೆಳತಿ ನನಗೆ ಹೋಲಿಸಲು
ಯಾಕೆ ಬೇಕು ಅವರಿವರ ಹೋಲಿಕೆ
ನಿನ್ನ ಭಾವ, ನಿನ್ನ ನೋವ
ನಿನ್ನ ತನು ನಿನ್ನ ಮನ ಎಲ್ಲದಕೂ ನಿನಗೆ
ನೀನೆ ಸಾಟಿ
ನನ್ನ ಹೃದಯ ಕದ್ದ ಮೋಸವ
ನರಿಯದ ಮಾಟಗಾತಿ ನೀನು
ನಿನ್ನ ಹೃದಯ ಸಿರಿಯಲಿ
ನನ್ನನು ಹಿಡಿದಿಡು ನಾನಿರುವ ತನಕ
ಕೊನೆ ತನಕ ಎಂದರೆ
ಕೃತಕದ ಮಾತಾದೀತು
.

Read more...

ನಮ್ಮಲ್ಲಿಯೇ ಪಡೆಯೋಣ
ಎತ್ತ ಹೊರಳಿದರೂ ಮತ್ತೆ
ಮತ್ತೆ ಸುತ್ತುತಲಿದೆ ಮನ
ನಿನ್ನೆಡೆ ಗೆಳತಿ-
ನೊಂದ ಜೀವಕೆ ಬೇಕೆ
ಸಮ-ಭೋಗದ ಸವಿಪಾಲು?
ಸಮ-ಭಾಗಿಯಾಗಿ ಹೆಕ್ಕಿ
ಕಿತ್ತುಕೋ ಬೆಳೆದ ಕಸವ
ಸವಿನುಡಿ, ಅಪ್ಪುಗೆ
ಸಾಂತ್ವನದಿ ಆರಿಸು
ಉರಿವ ನೋವ ಜ್ವಾಲೆ
ಉರುಳುತಿವೆ ಹಗಲಿರುಳು
ಎಣಿಕೆ-ಗುಣಿಕೆಗಳಲಿ
ಬೆಲೆ ಇಲ್ಲ ಜೀವಕಿಲ್ಲ
ಏರುತಿರುವ ಬೆಲೆಯಲ್ಲಿ
ಅಬ್ಬರ, ಆಡಂಬರ ಕೃತಕ
ತುಟ್ಟಿ-ದಿನ-ಮಾನದಲಿ
ಮನಸು-ಹೃದಯವಂತಿಕೆ
ಕಳೆದುಹೋಗುವ ಮುನ್ನ
ಅಪ್ಪು ಬಾ ಗೆಳತಿ
ನಂಬಿಕೆ-ವಿಶ್ವಾಸ ಯಾರೋ
ದೋಚುವ ಮುನ್ನ
ಎಲ್ಲಿಯೂ ಹುಡುಕಿ ದುಡುಕುವದು
ಬೇಡ ಕೈಗೆಟಕುದ ಸುಖವ
ನಮ್ಮಲ್ಲಿಯೇ ಪಡೆಯೋಣ
ನಾವು ಮುಳುಗುವ ಮುನ್ನ

Read more...

ಇರುಳು
ಇರಿಯುವ ಕತ್ತಲು
ಹಿಂಸಿಸುವ ಕನಸುಗಳು
ಹಾಸಿಗೆಯುದ್ದಕ್ಕೂ ಚಾಚಿರುವ
ಒಂಟಿತನ
ರೆಪ್ಪೆ ಕೂಡಿದರೂ
ಆವರಿಸುವ ನಿದ್ರೆ....
ಅಬ್ಬಾ! ಯಾರಿಗೆ ಬೇಕು
ಈ ಭೀಕರ ರಾತ್ರಿ
ನಗುತ್ತಾ ನಗಿಸುತ್ತಾ
ಅರಳಿದ ಮುಖಗಳ,
ಮಾಸದ ನಗುವಿನ ಬೆರೆವ
ಮನಕೆ ಹಗಲೇ ವಾಸಿ
ಕನಸುಗಳ ಬೆಸೆಯಲು
ಅಂದದ ಹರೆಯದ
ಹುಡುಗರ ನಲುಮೆಯ
ಹಾರಾಟ, ಮರೆಸುವದೆನ್ನ
ಹಸಿ,ಹಸಿ ಗಾಯವ
ಬರುವದು ಬೇಡವೇ ಬೇಡ
ಧುತ್ತೆಂದು ಕತ್ತಲೆ
ಸುರಿಸುವ ಅಹೋರಾತ್ರಿ

Read more...

>> Friday, April 16, 2010


ನಿನಗೆ ನೀನೇ ಸಾಟಿ
ಅಂದವಲ್ಲವೆ ಹಗಲುಗನಸುಗಳು
ಹೆಣೆಯಲು?
ಜೇಡರ ಬಲೆಯ ಸಾಹಸವೂ
ಬೇಕಿಲ್ಲ ಈ ಕನಸುಗಳಿಗೆ
ಕಣ್ಣು ಬಿಟ್ಟರೆ ಸಾಕು ನಿತ್ಯ
ಸತ್ತವರ, ರಕ್ತ ಹರಿಸಿದವರ
ಹಗಲುಗಳ್ಳ ರಾಜ-
ಕಾರಣಗಳ ದೊಂಬರಾಟದ
ಅರ್ಥರಹಿತ ಸುದ್ದಿ ತರುವ
ಪತ್ರಿಕೆ.
ಹೊರಗೆ ಹೊರಟರೆ
ಅಸಹ್ಯ ಬರಿಸುವ, ಹೆಣ್ಣು
ಮಣ್ಣಿಗೆ ಬಡಿದಾಡುವ
ವ್ಯಸನಿಗಳ ಕೂಟ
ನಾ ಭಂಡನಾದರೆ ಬದುಕುವೆ
ಆದರ್ಶಗಳ ಮೂಲೆಗೆಸೆದು ಗಂಟುಕಟ್ಟಿ
ಷಂಡನಾಗುವೆ ಏನೇನು ಪಡೆಯದೇ
ನನ್ನ ಮತ್ತಲಿ ನಾನಿದ್ದರೆ
ದಕ್ಕದು ನನಗಿನ್ನೇನು ಎಂದು ಅಂದುಕೊಳ್ಳುವೆ
ಅದಕೆ ಬಾ-
ಎಲ್ಲ ಬಿಟ್ಟು ಒಂದೆಡೆ
ಹಗಲುಗನಸ ಹೆಣೆಯಲು
ಕೆಲಕ್ಷಣ ನೀಡುವ
ನೆಮ್ಮದಿಗಾದರೂ

Read more...


ನೀನು ಹಿತ
ಮರೆಯುತ್ತೇನೆ ಎಲ್ಲ ಹಿಂಸೆಗಳ
ನಿನ್ನ ಹಿತ
ಹಿಡಿತದ ಅಪ್ಪುಗೆಯಲಿ
ನಂಜುಂಡ ತುಟಿ
ಸವಿಯಾಗುತ್ತದೆ
ನಿನ್ನ ಸಿಹಿ ಮುತ್ತಿಗೆ
ನಿನ್ನ ಮೃದು ಹಸ್ತ
ಮೈದಡವಿದಾಗ
ಎಂಥದೋ ಚೈತನ್ಯ
ಸೇರುತಿದೆ ಮನಸ್ಸು-ಮೈಗೆ
ನಿನ್ನ ಬಿಸಿಯುಸಿರು
ಕಂಗಳ ಬಳಿ ಬೀಸಿದಾಗ
ಆಹ್ಲಾದ ಉಕ್ಕಿ ಬರುತಿದೆ
ಮಂಪರು ಆವರಿಸುತಿದೆ
ಯಾವ ವೈನೂ
ತಾರದ ಮತ್ತು.
ಬೆಟ್ಟದಷ್ಟು ಸುಖ ತರುವ
ನಿನ್ನ ಸನಿಹವ ಕೆಲಕ್ಷಣವೂ
ಮರೆಯದೆ ಸೃಷ್ಠಿ ಹುಟ್ಟಿಸಿದೆಯೇ
ನನ್ನಲ್ಲಿ ಸಿಟ್ಟು ಬೆಂಕಿಯ. ನೀನು
ಎಲ್ಲಿಯಾದರೂ ಹೋಗಿ ಬರುವೆನೆಂದಾಗ
ಅಗಲಿಕೆಯ ಭೀಕರತೆ ನೆನಸಿಕೊಂಡಾಗ
ನಾನು-ನಾನಾಗುವುದೇ ಇಲ್ಲ.

Read more...

ವಸ್ತು ಏನು? ಬದುಕ ಕಾವ್ಯಕೆ
ಗುಲಾಬಿ ಹೂ ಮೇಡಂಗೆ
ಕೊಟ್ಟು ಖುಷಿ ಪಡುವ ಮಗಳು
"ನಮ್ಮ ಮೇಡಂ
ಥ್ಯಾಂಕ್ಸ ಹೇಳಿ ಮುಡಿದುಕೊಳ್ಳುತ್ತಾರೆ"
ಎಂದಾಗ ಅನಿಸಿತು. ಅರೆ ಇಲ್ಲಿ ಇನ್ನೂ
ಥ್ಯಾಂಕ್ಸ ಹೇಳುವವರು ಇದ್ದಾರೆಯೇ?
ಕರಣಗಳ ಭರಾಟೆಯಲಿ ಸದ್ದಿಲ್ಲದೆ
ಸಾವಾದ ರೈತರು ಮಾಧ್ಯಮಗಳ
ದೊಡ್ಡ ಸುದ್ದಿಯಾಗುತ್ತಾರೆ
ಮೋಡಗಳಿಗೆ ಮುತ್ತಿಕ್ಕಿ ಮಳೆಸುರಿಸುವ
ವಿಮಾನಗಳ ಭರಾಟೆಯಲಿ ಕರಗಿ ಹರಡಿದೆ
ಬರಗಾಲ
ಅಪಘಾತಗಳಲ್ಲಿ ಸ್ವಲ್ಪದರಲೆ ಪಾರಾಗುವ-
ನ್ಯಾಯಾಲಯದಲಿ,
ನಿರ್ದೋಷಿಗಳು ಎಂದು ಸಾಬೀತಾಗುವವರು
ನಿತ್ಯ ಪತ್ರಿಕೆಗಳಿಗೆ ಹಲ್ಕಿರಿಯುತ್ತಾರೆ
ಯಾರಿಗೂ ಥ್ಯಾಂಕ್ಸ ಹೇಳದೆ!
ಮಾತುಗಳು ಮೌನ ಪಡೆದ ಹೊತ್ತು
ಕೆರೆಗಳು ಬಾಯಿ ತೆರೆದ ನೀರಿಗಾಗಿ
ಹಾಹಾಕರಿಸಿದ ಹೊತ್ತು ಯಾರು
ಯಮದಾಹ ತೀರಿಸಿಯಾರು?
ಗೇಯತೆ ಕಾವ್ಯ ವಾಚ್ಯತೆ ಅಲಗಿಗೆ
ನಲುಗಿದಾಗ ವಿಮರ್ಶಕರು ಕೇಕೆ ಹಾಕಿ
ವಿಷಯವನರಸದೆ ನಂಜಸುರಿಸುವಾಗ
ಕಾವ್ಯಕ್ಕೆ ವಸ್ತು ಏನು ಎಂದು ಸಾಗಿದೆ
ಚರ್ಚೆ. ಮುಖ ಗಂಟಿಕ್ಕಿದರೂ ಸುರಿಯದ
ಮೋಡದ ಹಾಗೆ
ಕರಗದ ಹೃದಯಗಳ ಹಾಗೆ.

Read more...

'ಬಾತ್'ರೂಮಾಯಣಂ: 'ತಿಂಡಿ' ಪುರಾಣಂ


ನಾವು ಪಡೆದುಕೊಂಡ ಅನುಭವಗಳಲ್ಲಿ ಮಹತ್ವಪೂರ್ಣ ಸಂಗತಿಗಳನ್ನು ಮಾತ್ರ ಹೇಳುತ್ತೇವೆ. ವೈಯಕ್ತಿಕವಾಗಿ ನಮ್ಮನ್ನು ಬದುಕಿನಲ್ಲಿ ಕಾಡಿದ ಸಣ್ಣಪುಟ್ಟ ವಿಷಯಗಳನ್ನು ನಾವು ಪ್ರಸ್ತಾಪಿಸುವುದು ವಿರಳ. ಆದರೆ ನನಗೆ ಇಂತಹ ಸಣ್ಣ ವಿಚಾರಗಳನ್ನು ಅನಿವಾರ್ಯವಾಗಿ ಪ್ರಸ್ತಾಪಿಸಬೇಕು ಎನಿಸುತ್ತದೆ. ಕೆಲ ದಿನಗಳ ಹಿಂದೆ ಮಠಾಧೀಶರೊಬ್ಬರು ಲೇಖನದಲ್ಲಿ ವಿದೇಶದಲ್ಲಿ ತಮ್ಮೊಂದಿಗೆ ತೆರಳಿದ್ದ ಸಹ ಪ್ರಯಾಣಿಕರ ಅನುಭವಗಳನ್ನು ವಿವರಿಸಿದ್ದರು. ಆದರೆ ನಾನು ನನ್ನ ಅನುಭವಗಳನ್ನು , ನನಗೆ ಉಂಟಾದ ಇರುಸು -ಮುರುಸುಗಳನ್ನು ಹಂಚಿಕೊಳ್ಳುತ್ತೇನೆ. ನನ್ನ ವಿದೇಶಾನುಭವದಲ್ಲಿ ವಿಮಾನಯಾನದಂತೆ, ನನ್ನನ್ನು ಕಾಡಿದ ಬಾತ್ ರೂಮ್‌ಗಳ ಬಗ್ಗೆ ಬರೆಯದಿದ್ದರೆ ಹೇಗೆ?
ನಾನು ಈ ಹಿಂದೆ ಅನೇಕ ಬಾರಿ ಪ್ರಸ್ತಾಪಿಸಿದ್ದೇನೆ. ಗ್ರಾಮೀಣ ಪ್ರದೇಶದಿಂದ ಬಂದ ನನಗೆ ಆಚಾರ-ವಿಚಾರ, ನಡೆ-ನುಡಿಯಲ್ಲಿ ತೀವ್ರವಾದ ದೇಸಿತನವಿದೆ. ನಾಗರಿಕ ಸಂಸ್ಕೃತಿಯ 'ಸಭ್ಯರು' ರೂಢಿಸಿಕೊಂಡಿರುವ ನಗರೀಕರಣದ ಮಡಿವಂತಿಕೆಯನ್ನು ನಾನು ಒತ್ತಾಯ ಪೂರ್ವಕವಾಗಿ ಪಾಲಿಸುವುದಿಲ್ಲ. ಇದನ್ನು 'ಕೆಲವರು' ಅನಾಗರಿಕತೆ ಎಂದು ವಾಖ್ಯಾನಿಸುವದುಂಟು. ಹಾಗಂತ ಬೇರೆಯವರನ್ನು ಮೆಚ್ಚಿಸಲೆಂದು ನಮಗೆ ಸರಿ ಹೊಂದದ, ಸಾಧ್ಯವಾಗದ ಆಚರಣೆಗಳನ್ನು ರೂಢಿಸಿಕೊಳ್ಳುವುದು ಅಸಮಂಜಸ ಎಂಬುದೇ ನನ್ನ ಅನಿಸಿಕೆ.ಅನಗತ್ಯ ಇಂಗ್ಲಿಷ್‌ನಲ್ಲಿ ಮಾತನಾಡುವುದು , ಅದಕ್ಕೆ ಸರಿ ಹೊಂದುವ ಬಾಡಿ ಲ್ಯಾಂಗ್ವೇಜ್ ಅಭಿವ್ಯಕ್ತಿಸುವುದು ನನಗೆ ಒಮ್ಮೊಮ್ಮೆ ಕಿರಿಕಿರಿ ಎನಿಸುತ್ತದೆ. ಆದರೆ ಇಂತಹ ಅನೇಕ ಕಿರಿಕಿರಿಗಳನ್ನು ಬದಿಗಿರಿಸಿ ನಾವು ಹೊರದೇಶಗಳಲ್ಲಿ ಅವರಿಗೆ ಸರಿಹೊಂದುವಂತೆ ನಡೆದುಕೊಳ್ಳಬೇಕು. ನಮಗೆ ಸರಿ ಅನ್ನಿಸದಿದ್ದರೂ ಅಲ್ಲಿಯವರಿಗೊಸ್ಕರವಾದರೂ ಅವುಗಳನ್ನು ಪಾಲಿಸುವದು ಅನಿವಾರ್ಯವೆನಿಸಿತು.
ಅದರಲ್ಲಿ ಬಾತ್ ರೂಮ್ ಹಾಗೂ ಆಹಾರ ಸಂಸ್ಕೃತಿ ನನಗೆ ಹೆಚ್ಚು ಅಸಹನೀಯವೆನಿಸಿದವು. ವಿಷಾಲವಾದ ಹಳ್ಳ,ಕೆರೆ, ಭಾವಿ, ಕಾಲುವೆಗಳಲ್ಲಿ ಸ್ವಚ್ಛಂದವಾಗಿ ಉರುಳಾಡಿ ಈಜುತ್ತಾ ಕಾಲ ಕಳೆದ ನಮ್ಮಂತವರಿಗೆ ವಿದೇಶದಲ್ಲಿನ ಬಾತ್ ರೂಮ್‌ಗಳು ಉಸಿರುಗಟ್ಟಿಸುತ್ತವೆ. ನಾನು ಮೋರಿಯೇ ಇಲ್ಲದ ಈ ಬಾತ್ ರೂಮ್ ಗಳನ್ನು ಕಂಡು ಗಾಭರಿಯಾದೆ. ಬಾತ್ ರೂಮ್ ಗೆ ಹೋದಾಗಲೆಲ್ಲ ಕಾಲು ತೊಳೆದುಕೊಳ್ಳುವ ಹವ್ಯಾಸವಿರುವವರಿಗೆ ಪ್ರತಿ ಸಲ ಟಬ್ ನಲ್ಲಿ ಇಳಿಯುವುದು ಸಹ್ಯವೆನಿಸುವುದಿಲ್ಲ. ಆಧುನಿಕ ವಿನ್ಯಾಸಿತ ವಾಕ್-ಇನ್-ಶಾವರ್ ಗಳ ಸ್ನಾನ ಉಸಿರುಗಟ್ಟಿಸುವಂತೆ ಭಾಸವಾಗುತ್ತದೆ. ಇಂದಿನ ಹೈ-ಫೈ ಯುವಕರು ಇವುಗಳಿಗೆಲ್ಲ ಕಷ್ಟ ಪಟ್ಟು ಹೊಂದಿಕೊಂಡು ಅನುಭವಿಸುತ್ತಾರೆ. ಇಲ್ಲಿನ ಹೋಟೆಲ್ ಹಾಗೂ ಮನೆಗಳಲ್ಲಿ ಅಳವಡಿಸಿರುವ ಎಚ್ಚರಿಕೆ ಗಂಟೆಗಳು ನಮ್ಮನ್ನು ಸದಾ ಕಾಡುತ್ತವೆ. ತಿರುಗಾಡಿದರೆ ನಲುಗಿದಂತೆ ಭಾಸವಾಗುವ ಮನೆಗಳ ವಿನ್ಯಾಸ, ಕೆಳಗೆ ಹಾಸಿರುವ ಮೃದು ಹಾಸು ನಮ್ಮ ಒರಟುತನವನ್ನು ಕಡಿಮೆಯಾಗಿಸುತ್ತದೆ. ಪಕ್ಕದ ಮನೆಯವರು ಬಾಗಿಲು ಹಾಕಿದರೆ ನಮ್ಮ ಮನೆಯ ಬಾಗಿಲು ಹಾಕಿದ ಹಾಗೆ ಕೇಳಿಸುತ್ತಿತ್ತು. ಅಕ್ಕ ಪಕ್ಕದವರು ಇದ್ದಾರೆ ಎಂಬುದು ಕೇವಲ ಅವರು ಬಳಸುವ ವಸ್ತುಗಳ ಸಪ್ಪಳದಿಂದ ತಿಳಿಯುತ್ತಿತ್ತು. ಸದಾ ಶಬ್ದ ಮಾಲಿನ್ಯದಲ್ಲಿರುವ ನಮಗೆ ಇದೆಲ್ಲ ಹೊಸ ಅನುಭವ. ನಮ್ಮ ಬಂಧುಗಳು, ಸ್ನೆಹಿತರು ಎಷ್ಟೇ ಸ್ವಾತಂತ್ರ್ಯ ನೀಡಿದರು ಇಲ್ಲಿನ ಪರಿಸರವನ್ನು ಗಮನಿಸಿ ನಾವೇ ನಮ್ಮಲ್ಲಿ ಬದಲಾವಣೆಗಳನ್ನು ರೂಢಿಸಿಕೊಳ್ಳುತ್ತೇವೆ. ನಾನು ಕೆಲವು ಸಣ್ಣ ಪುಟ್ಟ ಬದಲಾವಣೆಗೆ ಹೊಂದಿಕೊಂಡೆ. ಆದರೆ ಇಲ್ಲಿನ ಬಾತ್ ರೂಮ್ ಹಾಗೂ ಆಹಾರ ಸಂಸ್ಕೃತಿಗೆ ಹೊಂದಿಕೊಳ್ಳಲು ಸಾಧ್ಯವಾಗಲೇ ಇಲ್ಲ. ಟಬ್ ಅಥವಾ ವಾಕ್-ಇನ್ ಶಾವರ್ ನಲ್ಲಿ ಸ್ನಾನ ಮಾಡುವಾಗ ನೀರನ್ನು ಬಾತ್ ರೂಮ್ ನಲ್ಲಿ ಸಿಂಪಡಿಸದ ಹಾಗೆ ಎಚ್ಚರವಹಿಸಬೇಕು. ಶಾವರ್ ಪ್ರದೇಶದಿಂದ ನೀರು ಹೆಚ್ಚಿನ ಪ್ರಮಾಣದಲ್ಲಿ ಲ್ಲಿದರೆ ಕೆಳಗೆ ಹಾಸಿದ ಕಾರ್ಪೆಟ್ ಗಲೀಜಾಗುತ್ತದೆ. ಅಲ್ಲದೆ ಕೆಳಗೆ ಬಿದ್ದ ನೀರು ಹರಿದು ಹೋಗಲು ಮೋರಿಗಳೆ ಇರುವದಿಲ್ಲವಲ್ಲ? ಹೀಗಾಗಿ ಅತಿಯಾಗಿ ನೀರು ಸೋರಿದರೆ ಇಲ್ಲಿನ ಹೋಟೆಲ್ ಗಳಲ್ಲಿ ಅಪಾಯದ ಗಂಟೆ ಬಾರಿಸಿ ಗೊಂದಲವುಂಟಾಗುತ್ತದೆ. ಈ ಅಪಾಯಯವನ್ನು ತಪ್ಪಿಸಲೆಂದೇ ನೆಲದ ಮೇಲೆ ಹಾಕಿರುವ ಕಾರ್ಪೆಟ್‌ಗಳ ಮೇಲೆ ಮತ್ತೆ ಟಾವೆಲ್ ಬೆಡ್ ಶಿಟ್ ಹಾಕಿ ನೀರು ಇಂಗುವಂತೆ ಎಚ್ಚರವಹಿಸುತ್ತಾರೆ. ಹೊರ ದೇಶದ ಸ್ನೇಹಿತರು ಅತಿಥಿಗಳು ಬಂದರೆ ಅವರಿಗೆ ಸಂಕೋಚ ವಾಗಬಾರದೆಂಬ ಕಾರಣಕ್ಕೆ ಅವರು ತೆಗೆದುಕೊಳ್ಳುವ ಜಾಗೃತಿಯ ಔದಾರ್ಯ ನಮಗೆ ಅಚ್ಚರಿ ಅನಿಸುತ್ತದೆ. ಹೊಸ ಬಗೆಯ ವಿನ್ಯಾಸಗಳು ನಮಗೆ ಅಪರಿಚಿತವೆನಿಸುವದರಿಂದ ಅಲ್ಲಿದ್ದವರನ್ನು ಕೇಳಿ ಬಳಸುವದು ಸೂಕ್ತ ಎನಿಸುತ್ತಿತ್ತು. ಅವುಗಳನ್ನು ಬಳಸುವ ವಿಧಾನವನ್ನು ನಾನು ನಿಸ್ಸಂಕೋಚವಾಗಿ ಕೇಳುತ್ತಿದ್ದೆ. ನನಗಾಗುವ ಆತಂಕವನ್ನು ತಪ್ಪಿಸಲು ನನ್ನ ಸೊದರ ಡಾ ನಾಗರಾಜ ಕೆಲವು ತಾತ್ಕಾಲಿಕ ಅನುಕೂಲಗಳನ್ನು ಸ್ಟೃಸಿದ್ದ.
ವೇಲ್ಸ್ ದೇಶದಲ್ಲಿ ನೆಲೆಸಿರುವ ಅನಿವಾಸಿ ಸ್ನೇಹಿತ ಡಾ ರವಿ ಸಾಣೆಕೊಪ್ಪ ಅವರ ಮನೆ ಸುಂದರವಾಗಿದೆ. ಮನೆ ಕಟ್ಟುವ ಹಾಗೂ ಅದನ್ನು ಬಳಸುವಲ್ಲಿ ಅವರಿಗಿರುವ ಅಭಿರುಚಿ ಅನನ್ಯವೆನಿಸಿತು. ಖ್ಯಾತ ವ್ಯಂಗ ಚಿತ್ರ ಲೇಖಕ ಡಾ. ಆರ್ ಕೆ ಲಕ್ಷ್ಮಣ ಬರೆದ ಆಸ್ಟ್ರೇಲಿಯಾ ಪ್ರವಾಸ ಕಥನದಲ್ಲಿನ ಮನೆಯ ವಿವರಣೆ ನನಗಿಲ್ಲಿ ನೆನಪಾತು. ಡಾ ರವಿ ದಂಪತಿಗಳು ತಮ್ಮ ಮನೆಯನ್ನು ಪ್ರೀತಿಂದ ಪರಿಚಯಿಸಿದರು. ಹಾಗೆಯೇ ನಮ್ಮ ವಾಸ್ತವ್ಯದಲ್ಲಿ ಬಳಸಬಹುದಾದ ಬಾತ್ ರೂಮ್ ಪರಿಚುಸಿದಾಗ ನನ್ನ ಅಸಹಾಯಕತೆಯನ್ನು ತಮಾಷೆಯಿಂದ ವಿವರಿಸಿದೆ. 'ಡೊಂಟ್ ವರಿ ನಿಮಗೆ ಸರಿ ಅನಿಸಿದಂಗ ಬಳಸಿರಿ ನಾವು ನಂತರ ಕ್ಲೀನ್ ಮಾಡಿಕೊಳ್ಳುತ್ತೇವೆ'. ಎಂದ ಅವರ ಪ್ರೀತಿ ನ್ನನ್ನು ಬೆರಗುಗೊಳಿಸಿತು.
ಭಾರತೀಯ ಸಿನೆಮಾಗಳಲ್ಲಿ ತೋರಿಸುವ ಬಾತ್ ರೂಮ್ ಸೀನ್‌ಗಳು, ರೊಮ್ಯಾಂಟಿಕ್ ಹಾಡುಗಳು ಇಲ್ಲಿನ ಬಾತ್ ರೂಮ್ ಗಳಲ್ಲಿ ಅಸಾಧ್ಯವೆನಿಸಿತು. ಭಾರತೀಯರ ಬಾತ್ ರೂಮ್ ರೋಮ್ಯಾನ್ಸ್ ಇಲ್ಲಿ ನೆನಪಾಗಿ ಒಳಗೊಳಗೆ ತಮಾಷೆ ಎನಿಸಿತು. ಅಯ್ಯೋ ಪಾಪ ! ವಿದೇಶದಲ್ಲಿ 'ಹನಿಮೂನ್ 'ಗೆ ಬಂದವರು ಬಾತ್ ರೂಮ್ ರೋಮ್ಯಾನ್ಸ್ ಕಲ್ಪಿಸಿಕೊಂಡಿದ್ದರೆ ನಿರಾಷೆಯಾಗುವದನ್ನು ಸ್ನೇಹಿತರಿಗೆ ರಸವತ್ತಾಗಿ ಹೇಳಿದೆ. ಓ! ಯು ಆರ್ ರೈಟ್ ಇದನ್ನು ಊಹಿಸಿಯೇ ಇರಲಿಲ್ಲ. ಯು ಆರ್ ಎನ್ ಇಂಟರಸ್ಟಿಂಗ್ ಇಮ್ಯಾಜಿನರ್ ಎಂಬ ಸರ್ಟಿಫಿಕೆಟ್ ನೀಡಿದರು. ಇರಲಿಬಿಡಿ ವಿದೇಶ ಪ್ರವಾಸ ಮಾಡುವ ನನ್ನಂತಹ ಹಳ್ಳಿ ಹೈದರಿಗೆ ಆಗುವ ಅನುಭವಗಳ ಮಾಹಿತಿಗಾಗಿ ಇಷ್ಟೆಲ್ಲ ವಿವರಿಸಿದೆ.
ಆಹಾರ ಸಂಸ್ಕೃತಿ: ಭಾರತೀಯರು ಆಹಾರ ಸಂಸ್ಕೃತಿಗೆ ಮಹತ್ವ ನೀಡುವ ಭೋಜನ ಪ್ರಿಯರು. ಇಂಡಿಯಾ ದೇಶದ ಪ್ರತಿ ಕಿಲೋ ಮೀಟರ್ ಅಂತರದಲ್ಲಿ ಆಹಾರ ವೈವಿಧ್ಯತೆಯಿಂದ ಊಟದ ಸವಿ ಅನುಭವಿಸುತ್ತೇವೆ. ಆದರೆ ಯುರೋಪ್‌ನುದ್ದಕ್ಕೂ ಅಲೆದರು ಒಂದೇ ರುಚಿ, ಅದೇ ಏಕತಾನತೆ. ಬಿಫ್ ಚಿಸ್ ವಾಸನೆಯನ್ನು ಎದುರಿಸಿ ಉಪ್ಪು ,ಖಾರ ರುಚಿ ಇಲ್ಲದ ಊಟ ಮಾಡಲು ಸಂಕಟವಾಗುತ್ತದೆ. ಭಾರತೀಯ ರೆಸ್ಟೋರಾಗಳನ್ನು ಹುಡುಕಿ ಹೊಟ್ಟೆ ತುಂಬ ತಿನಬೇಕೆನಿಸುತ್ತದೆ. ಮದುವೆ ಇತರ ಸಮಾರಂಭಗಳಲ್ಲಿ ಆಧುನಿಕ ಶೈಲಿಗಳಲ್ಲಿ ಊಟ ವೇಸ್ಟ್ ಮಾಡುವ ಶ್ರೀಮಂತರು, ಅದನ್ನು ತಿಪ್ಪೆಗೆಸೆದಾಗ ಕಚ್ಚಾಡಿ ತಿನ್ನುವ ಹಸಿದವರ ನೆನಪು ನನ್ನನ್ನಿಲ್ಲಿ ಕಾಡಿತು. ಆಹಾರವನ್ನು ಕಲ್ಯಾಣದ ಶರಣರು ಪ್ರಸಾದವೆಂದು ಕರೆದು ಪ್ರತಿ ಅಗುಳಿಗೂ ಮಹತ್ವ ನೀಡಿದ್ದಾರೆ. ಆದರೆ ಅದರ ಮಹತ್ವವನ್ನರಿಯದ ನಾವು ಬೇಡವಾದದ್ದೆನ್ನೆಲ್ಲ ತಟ್ಟೆಯಲ್ಲಿ ಹಾಕಿಸಿಕೊಂಡು ಹಾಗೆಯೇ ಬಿಡುತ್ತೇವೆ. ಈ ನಮ್ಮ ದುರಹಂಕಾರಿ ಮನೋಧರ್ಮಕ್ಕೆ ವಿದೇಶದಲ್ಲಿ ತಕ್ಕ ಶಿಕ್ಷೆಯಾಗುತ್ತದೆ. ವಿದೇಶಿ ಆಹಾರ ರುಚಿಸದೇ, ದೇಶಿಯ ಆಹಾರ ಸಿಗದೇ ಉಪವಾಸ ಬೀಳುವ ಶ್ರೀಮಂತ ನಿರ್ಗಕತಿಕರಾಗುತ್ತೇವೆ. ನಮ್ಮ ದೇಶದ ಆಹಾರ, ಅದರ ರುಚಿ, ಅದಕ್ಕಿರುವ ಬೆಲೆ ವಿದೇಶಗಳಲ್ಲಿ ನಮಗೆ ಅರ್ಥವಾಗುತ್ತದೆ. ಕಾಯಕ, ದಾಸೋಹ, ಪ್ರಸಾದ ಎಂದು ವೇದಿಕೆಯಲ್ಲಿ ಭಾಷಣ ಮಾಡುವ ನಾವು ತಟ್ಟೆಯಲ್ಲಿ ಹಾಕಿದ ಆಹಾರ ಕೆಡಿಸಿ ಅಹಂಕಾರಿಗಳಾಗುತ್ತೇವೆ. ಈ ರೀತಿಯ ತತ್ವಗಳನ್ನು ಎಂದೂ ಹೇಳದ ವಿದೇಶಿಗರು ಒಂದಿಷ್ಟು ಕೆಡಿಸದಂತೆ ಆಹಾರ ಸೇವನೆಯನ್ನು ಎಂಜಾಯ್ ಮಾಡುತ್ತಾರೆ. ತಮಗೆ ಬೇಡ ವೆನಿಸಿದ ಆಹಾರವನ್ನು ಹಾಕಿಸಿಕೊಳ್ಳಲು ನೇರವಾಗಿ ನಿರಾಕರಿಸುತ್ತಾರೆ. ಊಟಕ್ಕೆ ಒತ್ತಾಸುವ ನಮ್ಮ ಪದ್ಧತಿ ಅವರಿಗೆ ಅಚ್ಚರಿ ಅನಿಸುತ್ತದೆ. ವಿದೇಶಿ ಊಟವನ್ನು ಮುಖ ಕಿವುಚಿಕೊಂಡು ತಿನ್ನುವ ನಮ್ಮ ದೈನೇಸಿ ಸ್ಥಿತಿಗೆ ಅನುಕಂಪ ಪಡುತ್ತಾರೆ. ನಾವು ಸೇವಿಸುವ ಆಹಾರ, ಬಳಸುವ ವಸ್ತುಗಳು ಭಿನ್ನ ಸಂಸ್ಕೃತಿಯಾಗಿ ನನಗೆ ಇಲ್ಲಿ ಪ್ರತಿಕ್ಷಣ ಕಾಡುತ್ತಲೇ ಇದ್ದವು.

Read more...